• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಾಯುಭಾರ ಕುಸಿತ; ಈ ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ನವದೆಹಲಿ, ಅಕ್ಟೋಬರ್ 11: ಮುಂಗಾರು ಅಂತ್ಯವಾಗಲು ಶುರುವಾಗಿ ವಾರ ಕಳೆಯುತ್ತಿದೆ. ಅಕ್ಟೋಬರ್ 6ರಿಂದಲೇ ಮುಂಗಾರು ಕೊನೆಗೊಳ್ಳಲು ಆರಂಭಿಸಿದೆ. ಇದಾಗ್ಯೂ ಚಂಡಮಾರುತ ಪರಿಚಲನೆ ಕಾರಣವಾಗಿ ಕೆಲವು ರಾಜ್ಯಗಳು ಅಧಿಕ ಮಳೆಗೆ ಸಾಕ್ಷಿಯಾಗಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅಂಡಮಾನ್ ಸಮುದ್ರದ ಉತ್ತರ ಭಾಗದಲ್ಲಿ ಚಂಡಮಾರುತ ಪರಿಚಲನೆಯಿದೆ. ಇದರ ಪ್ರಭಾವದಡಿಯಲ್ಲಿ ಅಲ್ಲಿಯೇ, ಮುಂದಿನ 36 ಗಂಟೆಗಳಲ್ಲಿ ವಾಯುಭಾರ ಕುಸಿತ ಸಂಭವಿಸುವ ಸಾಧ್ಯತೆಯಿದೆ. ಈ ಮಾರುತಗಳು ಪಶ್ಚಿಮ ಹಾಗೂ ನೈಋತ್ಯದೆಡೆಗೆ ಚಲಿಸಲಿದ್ದು, ಒಡಿಶಾದ ದಕ್ಷಿಣ ಭಾಗ ಹಾಗೂ ಆಂಧ್ರಕರಾವಳಿಯ ಉತ್ತರ ಭಾಗದೆಡೆಗೆ ತಲುಪಿ ತೀವ್ರಗೊಳ್ಳಲಿದೆ ಎಂದು ಮಾಹಿತಿ ನೀಡಿದೆ.

ಬೆಂಗಳೂರು ಸೇರಿ ರಾಜ್ಯದ 18 ಜಿಲ್ಲೆಗಳಲ್ಲಿ ಅಕ್ಟೋಬರ್ 15ರವರೆಗೆ ಭಾರಿ ಮಳೆಬೆಂಗಳೂರು ಸೇರಿ ರಾಜ್ಯದ 18 ಜಿಲ್ಲೆಗಳಲ್ಲಿ ಅಕ್ಟೋಬರ್ 15ರವರೆಗೆ ಭಾರಿ ಮಳೆ

ಈ ಹವಾಮಾನ ವೈಪರೀತ್ಯದ ಪ್ರಭಾವದಿಂದಾಗಿ ಕೆಲವೆಡೆ ವ್ಯಾಪಕ ಮಳೆಯಾಗಲಿದೆ. ಇನ್ನೂ ಕೆಲವೆಡೆ ಮಿಂಚುಗುಡುಗು ಸಹಿತ ಭಾರೀ ಮಳೆಯಾಗಲಿದೆ. ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಮಾರುತಗಳು ಬೀಸಲಿವೆ ಎಂದು ಅಂದಾಜಿಸಲಾಗಿದೆ. ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳಲ್ಲಿ ಮುಂದಿನ ಐದು ದಿನಗಳವರೆಗೂ ನಿರಂತರ ಮಳೆಯಾಗಲಿರುವುದಾಗಿ ತಿಳಿಸಿದೆ.

ದಕ್ಷಿಣದ ದ್ವೀಪಗಳಲ್ಲಿ ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗಲಿದೆ. ಮಹಾರಾಷ್ಟ್ರದಲ್ಲಿ ಮುಂದಿನ ಎರಡು ದಿನಗಳ ಅವಧಿ ಹೆಚ್ಚು ಮಳಯಾಗಲಿದೆ ಎಂದು ಸೂಚನೆ ರವಾನಿಸಿದೆ.

ಮಹಾರಾಷ್ಟ್ರವಷ್ಟೇ ಅಲ್ಲದೇ, ಕೊಂಕಣ, ಗೋವಾ, ಕರ್ನಾಟಕದ ಉತ್ತರ ಒಳನಾಡು, ರಾಯಲಸೀಮಾ, ಕೇರಳ, ತಮಿಳುನಾಡು, ಪುದುಚೇರಿಯಲ್ಲಿ ಮುಂದಿನ ಐದು ದಿನಗಳವರೆಗೂ ಮಳೆ ಮುಂದುವರೆಯುತ್ತದೆ. ಗುಡುಗು ಮಿಂಚು ಸಹಿತ ಮಳೆಯೊಂದಿಗೆ ಅಧಿಕ ಗಾಳಿ ಬೀಸಲಿದೆ.

ಈ ರಾಜ್ಯಗಳಲ್ಲಿ ಮುಂದಿನ 5 ದಿನಗಳವರೆಗೆ ಮಳೆ ಮುನ್ಸೂಚನೆಈ ರಾಜ್ಯಗಳಲ್ಲಿ ಮುಂದಿನ 5 ದಿನಗಳವರೆಗೆ ಮಳೆ ಮುನ್ಸೂಚನೆ

ಜಮ್ಮು, ಕಾಶ್ಮೀರ, ಲಡಾಖ್, ಮುಝಾಫರ್‌ಬಾದ್, ಗುಜರಾತ್, ಆಂಧ್ರ ಕರಾವಳಿ ಪ್ರದೇಶ, ತೆಲಂಗಾಣದಲ್ಲಿ ಅಧಿಕ ಮಳೆಯಾಗಲಿದೆ ಎಂದು ತಿಳಿಸಿದೆ.

These States To Receive Rainfall For Next 5 Days: IMD

ಅಂಡಮಾನ್ ಸಮುದ್ರ, ದಕ್ಷಿಣ ಬಂಗಾಳಕೊಲ್ಲಿ ಹಾಗೂ ಗಲ್ಫ್‌ ಆಫ್ ಮನ್ನಾರ್‌ನಲ್ಲಿ ಪ್ರಬಲ ಮಾರುತಗಳು ಬೀಸುವ ಸೂಚನೆಯನ್ನು ನೀಡಲಾಗಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

ಇದೇ ರೀತಿ ಹವಾಮಾನ ಅಕ್ಟೋಬರ್ 15ರವರೆಗೂ ಮುಂದುವರೆಯಲಿದ್ದು, ಈ ರಾಜ್ಯಗಳು ಈ ಅವಧಿಯಲ್ಲಿ ಅಧಿಕ ಮಳೆಗೆ ಒಡ್ಡಿಕೊಳ್ಳಲಿವೆ ಎಂದು ಇಲಾಖೆ ಸೂಚನೆ ನೀಡಿದೆ.

ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಛತ್ತೀಸ್‌ಗಡ, ಜಾರ್ಖಂಡ್ ಹಾಗೂ ಬಿಹಾರದಲ್ಲಿ ಈಗಾಗಲೇ ನೈಋತ್ಯ ಮುಂಗಾರು ಅಂತ್ಯವಾಗಿದೆ. ಇನ್ನಷ್ಟು ಪ್ರದೇಶಗಳಿಂದ ಮುಂಗಾರು ಅಂತ್ಯವಾಗಲು ಹವಾಮಾನ ಸೂಕ್ತವಾಗಿದೆ. ಮುಂದಿನ ಮೂರು-ನಾಲ್ಕು ದಿನಗಳಲ್ಲಿ ಮುಂಗಾರು ಅಂತ್ಯವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ದಕ್ಷಿಣ ಭಾರತದ ಕರಾವಳಿ ಪ್ರದೇಶಗಳಲ್ಲಿ 'ಜವಾದ್' ಚಂಡಮಾರುತದ ಪ್ರಭಾವದಿಂದ ಮಳೆಯಾಗುವುದಾಗಿ ತಿಳಿಸಿದೆ. ಗುಲಾಬ್ ಹಾಗೂ ಶಾಹೀನ್ ಚಂಡಮಾರುತದಿಂದಾಗಿ ಮುಂಗಾರು ಅಂತ್ಯದ ಅವಧಿಯಲ್ಲಿಯೂ ಮಳೆ ಪ್ರಭಾವ ಜೋರಾಗಿತ್ತು. ಇದೀಗ ಮತ್ತಷ್ಟು ದಿನ ಮಳೆಯಾಗುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.

'ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮೇಲೆ ಚಂಡಮಾರುತ ಪರಿಚಲನೆಯಿದೆ. ಇದರ ಪ್ರಭಾವದಲ್ಲಿ ವ್ಯಾಪಕದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ' ಎಂದು ಇಲಾಖೆ ತಿಳಿಸಿದೆ.

ಕರ್ನಾಟಕ ಮಳೆ ವಿವರ:
ರಾಜ್ಯದ 18ಕ್ಕೂ ಅಧಿಕ ಜಿಲ್ಲೆಗಳಲ್ಲಿ ಅಕ್ಟೋಬರ್ 15ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಗದಗ, ಕೊಪ್ಪಳ, ರಾಯಚೂರು, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

   ಕೊಹ್ಲಿಯ ಕಾಲಿನ ಅವತಾರ ನೋಡಿ ತಲೆಗೆ ಹುಳ ಬಿಟ್ಕೊಂಡ ಅಭಿಮಾನಿಗಳು | Oneindia Kannada

   ರಾಜ್ಯದಲ್ಲಿ ಇನ್ನೂ ಐದು ದಿನ ಮಳೆ ಅಬ್ಬರಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಮುಂದುವರೆಯಲಿದೆ ಎಂದು ತಿಳಿಸಿದೆ.

   English summary
   India Meteorological Department predicts these states to receive heavy rain in next 5 days
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X