ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ ಕಾಂಗ್ರೆಸ್ಸಿಗರು ಇವರೇ!

ಅಹ್ಮದಾಬಾದ್, ಆಗಸ್ಟ್ 9: ನಿನ್ನೆ(ಆಗಸ್ಟ್ 8) ಮುಕ್ತಾಯವಾದ ಗುಜರಾತ್ ರಾಜ್ಯಸಭಾ ಚುನಾವಣೆಯ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿ ಕೊನೆಗೂ ಹೊರಬಿದ್ದಿದೆ. ಹಲವು ಕಾರಣಗಳಿಂದ ಬಹುಮುಖ್ಯವಾಗಿದ್ದ ಈ ರಾಜ್ಯಸಭಾ ಚುನಾವಣೆ ಹಿಂದೆಂದಿಗಿಂತಲೂ ಹೆಚ್ಚಿನ ಕುತೂಹಲ ಕೆರಳಿಸಿತ್ತು.

ಕಾಂಗ್ರೆಸ್ಸಿನ ಇಬ್ಬರು ಶಾಸಕರು ಬಿಜೆಪಿಗೆ ಮತಹಾಕಿದ್ದರಿಂದ ಈ ಮತವನ್ನು ಅಸಿಂಧುಗೊಳಿಸಬೇಕೆಂದು ಕಾಂಗ್ರೆಸ್ ಚುನಾವಣಾ ಆಯೋಗದ ಮೊರೆ ಹೋಗಿತ್ತು. ಅದಕ್ಕೆಂದೇ ಮತಎಣಿಕೆಯೂ ತಡವಾಗಿ ಆರಂಭವಾಗಿ ಆಗಸ್ಟ್ 8 ರ ಮಧ್ಯರಾತ್ರಿ ಸಮಯಕ್ಕೆ ಫಲಿತಾಂಶ ಹೊರಬಿತ್ತು. ಈ ನಡುವೆ ಚುನಾವಣಾ ಆಯೋಗ ಇಬ್ಬರು ಕಾಂಗ್ರೆಸ್ ಶಾಸಕರ ಮತವನ್ನು ಅಸಿಂಧುಗೊಳಿಸಿತ್ತು. ಅಷ್ಟಕ್ಕೂ ಬಿಜೆಪಿಗೆ ಮತಚಲಾಯಿಸಿದ ಆ ಇಬ್ಬರು ಕಾಂಗ್ರೆಸ್ಸಿಗರು ಯಾರು?

These are 2 Cong MLAs in Gujarat Rajya Sabha election who voted BJP

ಭೋಲಾ ಭಾಯಿ ಗೊವಿಲ್ ಮತ್ತು ರಾಘವ್ ಭಾಯಿ ಪಟೇಲ್ ಎಂಬ ಇಬ್ಬರು ಶಾಸಕರೇ ಬಿಜೆಪಿಗೆ ಮತ ಹಾಕಿದ ಕಾಂಗ್ರೆಸ್ಸಿಗರು! ಆದರೆ ಚುನಾವಣಾ ಆಯೋಗ ಈ ಇಬ್ಬರ ಮತವನ್ನು ಅಮಾನ್ಯ ಮಾಡಿದ್ದನ್ನು ಬಿಜೆಪಿ ವಿರೋಧಿಸಿ, ಇದರ ವಿರುದ್ಧ ಕಾನೂನು ಸಮರ ಸಾರುವುದಾಗಿ ಹೇಳಿದೆ.

ಈ ಇಬ್ಬರು ಶಾಸಕರ ಮತವನ್ನು ಅಮಾನ್ಯಮಾಡಿದ್ದೇ ಅಹಮದ್ ಪಟೇಲ್ ಗೆಲುವಿಗೆ ಮುಖ್ಯಕಾರಣವಾದ್ದರಿಂದ ಬಿಜೆಪಿಯೂ ಇದನ್ನು ಇಲ್ಲಿಗೇ ಬಿಟ್ಟುಬಿಡುವುದಿಲ್ಲ. ಒಟ್ಟಿನಲ್ಲಿ ರಾಜ್ಯಸಭಾ ಚುನಾವಣೆಯೂ ಈ ಪರಿ ಕುತೂಹಲ ಕೆರಳಿಸಿದ್ದು ಇದೇ ಪ್ರಥಮ ಬಾರಿಗೆ ಎಂಬುದಂತೂ ದಿಟ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+