ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2 ಸಾವಿರ ರುಪಾಯಿ ನೋಟು ವಾಪಸ್ ಪ್ರಸ್ತಾವ ಸರಕಾರಕ್ಕಿಲ್ಲ

|
Google Oneindia Kannada News

2 ಸಾವಿರ ಮುಖ ಬೆಲೆಯ ನೋಟುಗಳನ್ನು ಹಿಂಪಡೆಯುವ ಯಾವ ಪ್ರಸ್ತಾವವೂ ಸರಕಾರದ ಮುಂದಿಲ್ಲ ಎಂದು ಕೇಂದ್ರ ಸರಕಾರ ತಿಳಿಸಿದೆ. 2016ರ ನವೆಂಬರ್ ನಲ್ಲಿ 1,000 ಹಾಗೂ 500 ರುಪಾಯಿ ಮುಖಬೆಲೆಯ ನೋಟುಗಳ ಅಮಾನ್ಯ ಮಾಡಿದ ನಂತರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು 2 ಸಾವಿರ ರುಪಾಯಿಯ ನೋಟು ಪರಿಚಯಿಸಿತ್ತು.

ಹಣಕಾಸು ಖಾತೆಯ ರಾಜ್ಯ ಸಚಿವ ಪೊಣ್ ರಾಧಾಕೃಷ್ಣನ್ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಹೀಗೆ ಉತ್ತರಿಸಿದರು. ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಹಣಕಾಸು ಖಾತೆ ರಾಜ್ಯ ಸಚಿವ ಶಿವ್ ಪ್ರತಾಪ್ ಶುಕ್ಲಾ, 2008ರಿಂದ 2014ರ ಮಧ್ಯೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳು ಸಿಕ್ಕಾಪಟ್ಟೆ ಸಾಲ ನೀಡಿವೆ ಎಂದಿದ್ದಾರೆ.

ಮೋದಿ ಸರಕಾರಕ್ಕೆ 4 ವರ್ಷ : ಅಪನಗದೀಕರಣದಿಂದ ಜಿಸ್ಟಿವರೆಗೆಮೋದಿ ಸರಕಾರಕ್ಕೆ 4 ವರ್ಷ : ಅಪನಗದೀಕರಣದಿಂದ ಜಿಸ್ಟಿವರೆಗೆ

ಆರ್ ಬಿಐ ನೀಡಿರುವ ಮಾಹಿತಿ ಪ್ರಕಾರ, ಒಟ್ಟಾರೆ ಸಾಲದ ಮೊತ್ತವು 18.2 ಲಕ್ಷ ಕೋಟಿಯಿಂದ 52.16 ಲಕ್ಷ ಕೋಟಿಗೆ ಏರಿಕೆ ಆಗಿದೆ. ಆ ನಂತರ ಬ್ಯಾಂಕ್ ಗಳಲ್ಲಿ ಅನುತ್ಪಾದಕ ಆಸ್ತಿಗಳು ಜಾಸ್ತಿ ಆಗುವುದಕ್ಕೆ ಏನು ಕಾರಣ ಎಂಬುದು ಗೊತ್ತಾಘಿದೆ. ಸಾಲದಲ್ಲಿ ವಂಚನೆ, ಭ್ರಷ್ಟಾಚಾರ, ಉದ್ದೇಶಪೂರ್ವಕ ಸುಸ್ತಿದಾರರು ಇವೆಲ್ಲವೂ ಆಗ ಸಾಲ ನೀಡಿದ್ದರ ಪರಿಣಾಮಗಳು ಎಂದು ಹೇಳಿದ್ದಾರೆ.

There is no proposal to withdraw 2 thousand rupee note

ಅನುತ್ಪಾದಕ ಸಾಲಗಳನ್ನು ಗುರುತಿಸಿ, ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳು ಸರಿ ಮಾಡಲು ಆರಂಭಿಸಿದವು. ಅದರ ಫಲಿತಾಂಶವೇ ಸಾರ್ವಜನಿಕ ಬ್ಯಾಂಕ್ ಗಳಲ್ಲಿ ನಿವ್ವಳ ನಷ್ಟ ಕಾಣುವಂತಾಯಿತು ಎಂದು ಅವರು ಹೇಳಿದ್ದಾರೆ.

English summary
There is no proposal to government to withdraw 2,000 denomination note, said by state minister for finance Ponn Radhakrishnan in Lokasabha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X