50 ಸಾವಿರದ ಆಸೆಗೆ ಆತ ಎಂಥ ಮಾಹಿತಿ ಒದಗಿಸಿದ್ದ ಗೊತ್ತಾ?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 28: ರಾಜಸ್ತಾನದ ನಗೌರ್ ನ ಮಸೀದಿಯಲ್ಲಿ ಶಿಕ್ಷಕನಾಗಿದ್ದ ಮೌಲಾನಾ ರಮ್ಜಾನ್ ಖಾನ್ ತಿಂಗಳಿಗೆ ಐವತ್ತು ಸಾವಿರ ಸಿಗುವ ರುಪಾಯಿ ಆಸೆಗಾಗಿ ದೇಶದ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸಿದ್ದಾನೆ. ಆತನನ್ನು ಗುರುವಾರ ವಶಕ್ಕೆ ಪಡೆಯಲಾಗಿತ್ತು. ಆತ ಮಸೀದಿಯಲ್ಲಿ ನಲವತ್ತು ಮಕ್ಕಳಿಗೆ ಪಾಠ ಮಾಡುತ್ತಿದ್ದ. ಅದಕ್ಕೆ ಎರಡು ಸಾವಿರ ಸಂಬಳ ದೊರೆಯುತ್ತಿತ್ತು.

ಇದರ ಜತೆಗೆ ಮಸೀದಿ ನೋಡಿಕೊಳ್ಳುವುದಕ್ಕೆ ಮೂರು ಸಾವಿರ ಸಂಬಳ ಸಿಗ್ತಿತ್ತು. ಗಡಿ ಪ್ರದೇಶದ ಬಳಿಯಲ್ಲೇ ವಾಸವಿದ್ದ ಈತನಿಗೆ ಇಲ್ಲಿನ ಭೂಪ್ರದೇಶದ ಪರಿಚಯ ಚೆನ್ನಾಗಿತ್ತು. ಮಸೀದಿಯನ್ನು ನೋಡಿಕೊಳ್ಳುತ್ತಿದ್ದ ಖಾನ್ ನನ್ನು ಭೇಟಿಯಾಗಲು ಹಲವು ನಿವೃತ್ತ ಸೇನಾಧಿಕಾರಿಗಳು ಬರುತ್ತಿದ್ದರು. ಈ ವಿಚಾರ ಪಾಕಿಸ್ತಾನದ ಪರವಾಗಿ ದೆಹಲಿಯಲ್ಲಿ ಕೆಲಸ ಮಾಡುವ ಮೆಹ್ಮೂದ್ ಅಕ್ತರ್ ಗೆ ಗೊತ್ತಾಗಿ, ಖಾನ್ ಮೇಲೆ ಕಣ್ಣು ಬಿದ್ದಿದೆ.[ದೆಹಲಿ ಪೊಲೀಸರಿಂದ ಪಾಕ್ ಹೈ ಕಮಿಷನ್ ಅಧಿಕಾರಿ ಬಂಧನ]

Pakistan spy

ದೆಹಲಿ ಪೊಲೀಸರು ಗುರುವಾರ ಬೇಹುಗಾರಿಕೆ ಆರೋಪದಲ್ಲಿ ಅಕ್ತರ್, ವರ್ಷದ ಹಿಂದೆ ಖಾನ್ ನ ಭೇಟಿ ಮಾಡಿದ್ದಾನೆ. ಸೇನೆ ಬಗ್ಗೆ ಮಾಹಿತಿ ಒದಗಿಸಿದರೆ ಐವತ್ತು ಸಾವಿರ ರುಪಾಯಿ ನೀಡುವುದಾಗಿ ಹೇಳಿದ್ದಾನೆ. ಇದೀಗ ರಾಜತಾಂತ್ರಿಕ ಒಪ್ಪಂದದ ಅನ್ವಯ ಅಕ್ತರ್ ನನ್ನು ಬಿಡುಗಡೆ ಮಾಡಿದ್ದು, ಕುಟುಂಬ ಸಮೇತ ದೇಶ ಬಿಟ್ಟು, ಪಾಕಿಸ್ತಾನಕ್ಕೆ ಹೋಗುವಂತೆ ತಿಳಿಸಲಾಗಿದೆ.

ರಾಜಸ್ತಾನದ ರಮ್ಜಾನ್ ಖಾನ್ ಗೆ ಸಾರ್ವಜನಿಕವಾಗಿ ಒಳ್ಳೆ ಹೆಸರಿತ್ತು. ಯಾರೂ ಆತನ ಮೇಲೆ ಅನುಮಾನ ಪಡುವುದು ಸಾಧ್ಯವೇ ಇರಲಿಲ್ಲ. ಆದರೆ ಆತನಿಗೆ ಸೇನೆ ಬಗೆಗಿನ ಮಾಹಿತಿ ಹೇಗೆ, ಯಾರ ಮೂಲಕ ದೊರೆಯುತ್ತಿತ್ತು ಎಂಬ ಸಂಗತಿಯನ್ನು ತನಿಖಾಧಿಕಾರಿಗಳು ತಿಳಿಸಿಲ್ಲ. ಒಳಗಿನವರೇ ಖಾನ್ ಗೆ ಮಾಹಿತಿ ನೀಡಿದ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.[ಪಾಕ್ ಅಧಿಕಾರಿಗಳಿಗೆ ಭಾರತ ಬಿಟ್ಟು ಹೋಗುವಂತೆ ಸೂಚನೆ!]

ಈ ಹಂತದಲ್ಲಿ ಖಾನ್ ಗೆ ಸಹಚರನೊಬ್ಬನ ಅಗತ್ಯವಿತ್ತು. ಆಗ ಖೆಡ್ಡಾಕ್ಕೆ ಬಿದ್ದವನು ವ್ಯಾಪಾರಿ ಸುಭಾಷ್ ಜಹಾಂಗಿರ್. ಆತನಿಗೂ ದುಡ್ಡಿಗೆ ಸಮಸ್ಯೆ ಇತ್ತು. ಈ ಕಾರ್ಯದಲ್ಲಿ ಸಹಾಯ ಮಾಡಿದರೆ ಸುಲಭವಾಗಿ ಸಾಲ ತೀರಿಸಬಹುದು ಎಂದು ಖಾನ್ ಆಸೆ ಹುಟ್ಟಿಸಿದ್ದಾನೆ. ಇದೀಗ ಬ್ಯಾಂಕ್ ಖಾತೆಗಳ ಪರಿಶೀಲನೆ ಈ ತನಿಖೆಯ ಮುಖ್ಯ ಭಾಗವಾಗಿದೆ. ಬಿಎಸ್ ಎಫ್ ನಲ್ಲಿ ಕೆಲಸ ಮಾಡುವ ಯಾರಿಗಾದರೂ ಹಣ ವರ್ಗಾವಣೆ ಅಗಿದೆಯೇ ಎಂಬ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Maulana Ramzan Khan was a teacher at a Mosque in Nagaur, Rajasthan. He lived close to the border and was very familiar with the topography. Mehmood Akthar, the staffer in the Pakistan mission at New Delhi, paid Khan a visit and made him an offer Rs 50,000 to get defense information.
Please Wait while comments are loading...