• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇನ್ನು ಮೂರು ತಿಂಗಳಲ್ಲಿ ಏನಾಗುತ್ತದೆ? ರಾಹುಲ್ ಮಾತಿನ ಅರ್ಥವೇನು?

|

ಅಮೇಥಿ, ಸೆಪ್ಟೆಂಬರ್ 25: "ಇದು ಆರಂಭವಷ್ಟೇ. ಎರಡು, ಮೂರು ತಿಂಗಳಲ್ಲಿ ಇನ್ನೂ ಸಾಕಷ್ಟು ವಿಷಯಗಳು ಹೊರಬರಲಿವೆ" ಎಂದು ರಫೇಲ್ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ತಮ್ಮ ಲೋಕಸಭಾ ಕ್ಷೇತ್ರವಾದ ಉತ್ತರ ಪ್ರದೇಶದ ಅಮೇಥಿಯಲ್ಲಿ ಸೋಮವಾರ ಸಾಮಾಜಿಕ ಮಾಧ್ಯಮ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ಅವರು, ಎಂದಿನಂತೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ ನಡೆಸಿದರು.

ಮೋದಿ ಮೇಲೆ ರಾಹುಲ್ 'ರಫೇಲ್' ಅಟ್ಯಾಕ್! ಟ್ವೀಟ್ ಏಟು!

ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಫ್ರಾನ್ಸ್ ನೊಂದಿಗೆ ಮಾಡಿಕೊಂಡ ಒಪ್ಪಂದ ಮತ್ತು ರಫೇಲ್ ಯುದ್ಧ ವಿಮಾನದ ಬಿಡಿಭಾಗಗಳ ತಯಾರಿಕೆಗೆ ಎಚ್ ಎಎಲ್ ಬದಲಿಗೆ ರಿಲಯನ್ಸ್ ಡಿಫೆನ್ಸ್ ಇಂಡಸ್ಟ್ರೀಸ್ ಗೆ ಅವಕಾಶ ನೀಡಿದ್ದನ್ನು ಅವರು ಖಂಡಿಸಿದರು.

ತಮಾಷೆ ಈಗಷ್ಟೇ ಆರಂಭವಾಗಿದೆ!

ತಮಾಷೆ ಈಗಷ್ಟೇ ಆರಂಭವಾಗಿದೆ!

"ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುತ್ತೇನೆ ಎಂದು ಅಧಿಕಾರಕ್ಕೆ ಬಂದವರು, 30,000 ಕೋಟಿ ರೂ.ಗಳನ್ನು ಅನಿಲ್ ಅಂಬಾನಿ ಅವರಿಗೆ ತಾವೇ ಕೊಟ್ಟಿದ್ದಾರೆ! ತಮಾಷೆ ಈಗಷ್ಟೇ ಆರಂಭವಾಗಿದೆ. ಇದು ಮತ್ತಷ್ಟು ಕುತೂಹಲ ಕೆರಳಿಸುತ್ತದೆ. ಇನ್ನು ಎರಡು ಮೂರು ತಿಂಗಳಿನಲ್ಲಿ ಮತ್ತಷ್ಟು ಸಂಗತಿಗಳು ತಿಳಿಯಲಿವೆ" ಎಂದು ರಾಹುಲ್ ಗಾಂಧಿ ತಿಳಿಸಿದರು.

ರಫೇಲ್ ಒಪ್ಪಂದ: ವಿವಾದದ ನಡುವೆ ಮರೆಯಾದ ಸೂಕ್ಷ್ಮ ಸತ್ಯಗಳು

ಮತ್ತಷ್ಟು ಸತ್ಯ ಹೊರಹಾಕುತ್ತೇವೆ ನೋಡಿ!

ಮತ್ತಷ್ಟು ಸತ್ಯ ಹೊರಹಾಕುತ್ತೇವೆ ನೋಡಿ!

'ಇನ್ನು ಎರಡು ಮೂರು ತಿಂಗಳಿನಲ್ಲಿ ನಾವು ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸ ಹೇಗೆ ಎಂಬುದನ್ನು ತೋರಿಸುತ್ತೇವೆ. ರಫೇಲ್ ಡೀಲ್, ವಿಜಯ್ ಮಲ್ಯ, ಲಲಿತ್ ಮೋದಿ ಪಲಾಯನ, ಅಪನಗದೀಕರಣ ಮತ್ತು ಗಬ್ಬರ್ ಸಿಂಗ್ ಟ್ಯಾಕ್ಸ್(ಜಿಎಸ್ಟಿ) ಈ ಎಲ್ಲವುಗಳಿಂದ ಎಷ್ಟು ಕಳ್ಳತನವಾಗಿದೆ ಎಂಬುದನ್ನು ತೋರಿಸುತ್ತೇವೆ. ಈ ದೇಶದ ಚೌಕೀದಾರ(ಸೇವಕ) ಚೋರ(ಕಳ್ಳ) ಎಂಬುದನ್ನು ತೋರಿಸುತ್ತೇವೆ' ಎಂದು ರಾಹುಲ್ ಗಾಂಧಿ ಹೇಳಿದರು.

ರಫೆಲ್‌: ಹಳೆ ವಿಡಿಯೋ ಟ್ವೀಟ್ ಮಾಡಿ ಹೊಸ ಪ್ರಶ್ನೆಗಳನ್ನು ಎತ್ತಿದ ಕಾಂಗ್ರೆಸ್

ಸ್ಫೋಟಕ ಮಾಹಿತಿ ತಿಳಿಯುತ್ತೆ ಎಂದಿದ್ದ ರಾಹುಲ್

ಕಳೆದ ಆಗಸ್ಟ್ 50 ರಂದು ಟ್ವೀಟ್ ಮಾಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, 'ರಫೇಲ್ ಡೀಲ್ ಒಂದು ಜಾಗತಿಕ ಭ್ರಷ್ಟಾಚಾರ. ಈ ಏರ್ ಕ್ರಾಫ್ಟ್ ಭಳ ದೂರ ಮತ್ತು ವೇಗವಾಗಿ ಚಲಿಸುತ್ತದೆ. ಮತ್ತು ಹಲವು ಬಾಂಭ್ ಗಳನ್ನು ಕೆಲವೇ ದಿನಗಳಲ್ಲಿ ಸ್ಫೋಟಿಸಲಿದೆ' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.

ಹೋಲ್ಯಾಂಡ್ ಸಿಡಿಸಿದ ಬಾಂಬ್

ಹೋಲ್ಯಾಂಡ್ ಸಿಡಿಸಿದ ಬಾಂಬ್

ರಫೇಲ್ ಯುದ್ಧ ವಿಮಾನದ ಬಿಡಿಭಾಗಗಳ ತಯಾರಿಕೆಗೆ ರಿಲಯನ್ಸ್ ಹೆಸರನ್ನೇ ಸೂಚಿಸುವಂತೆ ಫ್ರಾನ್ಸ್ ಗೆ ಭಾರತ ಸರ್ಕಾರವೇ ಸೂಚಿಸಿತ್ತು ಎಂದು ಫ್ರಾನ್ಸ್ ನ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಹೋಲ್ಯಾಂಡ್ ಹೇಳಿಕೆ ನೀಡಿದ್ದು ಸಾಕಷ್ಟು ವಿವಾದ ಸೃಷ್ಟಿಸಿತ್ತು. ಕೆಲವೇ ದಿನಗಳಲ್ಲಿ ಸ್ಫೋಟಕ ಮಾಹಿತಿ ಲಭ್ಯವಾಗಲಿದೆ ಎಂದ ರಾಹುಲ್ ಗಾಂಧಿ ಅವರ ಟ್ವೀಟ್ ಗೂ ಹೋಲ್ಯಾಂಡ್ ಅವರ ಹೇಳಿಕೆಗೂ ಸಂಬಂಧವಿದೆಯೇ ಎಂಬುದು ಈಗ ಕುತೂಹಲ ಕೆರಳಿಸಿರುವ ವಿಷಯ.

ಲೋಕಸಭೆ ಚುನಾವಣೆ ಮೇಲೆ ಪರಿಣಾಮ

ಲೋಕಸಭೆ ಚುನಾವಣೆ ಮೇಲೆ ಪರಿಣಾಮ

2019 ರ ಮೇ ತಿಂಗಳಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಮೇಲೂ ರಫೇಲ್ ವಿವಾದ ಪರಿಣಾಮ ಬೀರುವ ಸಂಭವವಿದೆ. ರಾಹುಲ್ ಗಾಂಧಿ ಅವರು, ಇನ್ನು ಎರಡು ಮೂರು ತಿಂಗಳಿನಲ್ಲಿ ಸತ್ಯ ಹೊರಗೆ ಬರುತ್ತದೆ ಎನ್ನುತ್ತಿರುವುದನ್ನು ನೋಡಿದರೆ, ಲೋಕಸಭೆ ಚುನಾವಣೆಯ ಹೊತ್ತಿನಲ್ಲೇ ರಫೇಲ್ ಡಿಲ್ ಗೆ ಸಂಬಂಧಿಸಿದ ಸ್ಫೋಟಕ ಮಾಹಿತಿಗಳನ್ನು ಕಾಂಗ್ರೆಸ್ ಹೊರಹಾಕಿದರೆ ಅಚ್ಚರಿಯೇನಿಲ್ಲ.

English summary
Adding to the controversy surrounding the Rafale deal, Congress President Rahul Gandhi UP's Amethi said that the "fun has just begun" and in coming months his party will expose how every initiative under the Narendra Modi government is an act of theft.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X