ಸಂಸತ್‌ನಲ್ಲಿ 'ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ' ಅಂಗೀಕಾರ, ಏನಿದು ತಿಳಿಯಿರಿ
ನವದೆಹಲಿ, ಆಗಸ್ಟ್ 07: ಮುಂಗಾರು ಸಂಸತ್ ಅಧಿವೇಶನದಲ್ಲಿ ಸೋಮವಾರ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ವೈಯಕ್ತಿಕ ಡೇಟಾ ಸಂರಕ್ಷಣಾ ( Digital Personal Data Protection Bill) ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲ್ಪಟ್ಟಿತು.
ಮಸೂದೆ ಅಂಗೀಕಾರ ವೇಳೆ ಮಾತನಾಡಿದ ಸಚಿವ ಅಶ್ವಿನಿ ವೈಷ್ಣವ್ ಅವರು, ಕೇಂದ್ರದ ಡಿಜಿಟಲ್ ಇಂಡಿಯಾ ಉಪಕ್ರಮವು ಇಂದು ವ್ಯಾಪಕವಾಗಿ ವಿಶ್ವದಾದ್ಯಂತ ಚರ್ಚೆ ಆಗುವ ಜೊತೆಗೆ ಪ್ರಶಂಸೆಯ ವ್ಯಕ್ತವಾಗುತ್ತಿದೆ. ಅನೇಕ ದೇಶಗಳು ಭಾರತದಲ್ಲಿನ ಡಿಜಿಟಲ್ ವಹೀವಾಟು ಪೂರಕವಾದ UPI, ಆಧಾರ್ ಗಳನ್ನು ತಮ್ಮ ದೇಶದಲ್ಲಿ ಅಳವಡಿಸಿಕೊಳ್ಳಲು ಮುಂದಾಗಿವೆ.

ಭಾರತದ ಹಳ್ಳಿಗಳು ಮತ್ತು ಗ್ರಾಮೀಣ ಪ್ರದೇಶಗಳು ಡಿಜಿಟಲ್ ವ್ಯವಸ್ಥೆಗಳ ಜತೆ ಸಂಪರ್ಕ ಹೊಂದುತ್ತಿವೆ. ಪ್ರತಿಯೊಬ್ಬರಿಗೆ ಅವರ ಡಿಜಿಟಲ್ ಹಕ್ಕು, ಭದ್ರತೆ ಮತ್ತು ಗೌಪ್ಯತೆಯನ್ನು ಒದಗಿಸಲು ಮಸೂದೆಯನ್ನು ನಮ್ ಸರ್ಕಾರ ಪರಿಚಯಿಸಿದೆ. ಸಂಸತ್ತಿನ ಸಮಿತಿ ಸಭೆಗಳ ಸರಣಿಯಲ್ಲಿ ಚರ್ಚಿಸಿದ ನಂತರ ಈ ಮಸೂದೆಯನ್ನು ಮಂಡಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಮಸೂದೆ ಪ್ರಸ್ತಾವನೆ, ಮಂಡನೆ, ಸೂಚನೆ
ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಮಸೂದೆ ಡೇಟಾ ಫಿಡ್ಯೂಷಿಯರಿಯಿಂದ ಸಂಗ್ರಹಿಸಿದ ಮಾಹಿತಿಯನ್ನು ಕಾನೂನುಬದ್ಧವಾಗಿ ಬಳಕೆಗೆ ಕಟ್ಟುಪಾಡು, ನಿಯಮಗಳನ್ನು ಸೂಚಿಸುತ್ತದೆ. ಕಳೆದ ವರ್ಷದ ಮುಂಗಾರು ಅಧಿವೇಶನದಲ್ಲಿ ಸಮಗ್ರ ಶಾಸಕಾಂಗವನ್ನು ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ದತ್ತಾಂಶ ಸಂರಕ್ಷಣಾ ಮಸೂದೆ ವಾಪಾಸ್ ಪಡೆದಿತ್ತು. ಮೂಲ ಕರಡನ್ನು ಪರಿಶೀಲಿಸಿದ ಜಂಟಿ ಸಂಸದೀಯ ಸಮಿತಿ 91 ವಿಭಾಗಗಳ ಮಸೂದೆಗೆ 88 ತಿದ್ದುಪಡಿಗಳ ಸಹ ಮಂಡನೆಗೆ ಸೂಚಿಸಿದೆ ಎಂದು ತಿಳಿಸಿದರು.
ಕಳೆದ ನವೆಂಬರ್ ತಿಂಗಳಿನಲ್ಲಿ ಸರ್ಕಾರ ಈ ಡಿಜಿಟಲ್ ಡೇಟಾ ಸಂರಕ್ಷಣಾ ಮಸೂದೆ ಕರಡನ್ನು ತಂದು ಸಾರ್ವಜನಿಕ ಸಮಾಲೋಚನೆಗೆ ಇಟ್ಟಿತು. ದೇಶ ಸದ್ಯ ಡಿಜಿಟಲ್ ಆರ್ಥಿಕತೆಯಲ್ಲಿ ಬೆಳವಣಿಗೆ ಹೊಂದುತ್ತಿದೆ. ಈ ಕಾರಣದಿಂದ ಆನ್‌ಲೈನ್ ವಹೀವಾಟಿನಲ್ಲಿ ಡಿಜಿಟಲ್ ವ್ಯವಸ್ಥೆಗಳ ಬಳಕೆದಾರರ ಹಿತ ಕಾಯಬೇಕಿದೆ. ಅವರಿಗೆ ಆನ್‌ಲೈನ್‌ನಲ್ಲಿ ಸುರಕ್ಷಿತತೆ ಒದಗಿಸುವ ಜೊತೆಗೆ ವಿಶ್ವಾಸಾರ್ಹ ಡಿಜಿಟಲ್ ವ್ಯವಸ್ಥೆ ರಚಿಸಬೇಕಿದೆ. ಇದರ ಮೇಲೆ ಈ ಮಸೂದೆ ಕೇಂದ್ರೀಕೃತವಾಗಿದೆ ಎಂದರು.

ಮಸೂದೆ ಅಪರಾಧ ತಡೆಗೆ ಸಹಕಾರಿ
ಈ ಮಸೂದೆಯಲ್ಲಿ ಆರು ವಿಧದ ದಂಡಗಳನ್ನು ಪ್ರಸ್ತಾಪಿಸಲಾಗಿದೆ. ಕೇಂದ್ರ ಸರ್ಕಾರವು ಅಧಿಸೂಚನೆಯ ಮೂಲಕ ಈ ಕಾಯಿದೆಯ ನಿಬಂಧನೆಗಳ ಅನ್ವಯ ವಿನಾಯಿತಿ ನೀಡಬಹುದಾಗಿದೆ. ಡಿಜಿಟಲ್ ಅಪರಾಧ ತಡೆಗೆ ಈ ಮಸೂದೆ ಸಹಕಾರಿಯಾಗಿದೆ.
ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ 2019 ರ ಕರಡು ರಚನೆಯ ಸಮಯದಲ್ಲಿ, ತತ್ವಗಳ ಸಂಪೂರ್ಣ ಶ್ರೇಣಿಯನ್ನು ಸೇರಿದಂತೆ ವ್ಯಕ್ತಿಗಳ ಹಕ್ಕುಗಳು, ಡೇಟಾ ಹಾಗೂ ನಿಯಂತ್ರಕ ಚೌಕಟ್ಟನ್ನು ಪ್ರಕ್ರಿಯೆಗೊಳಿಸುವ ಘಟಕಗಳ ಕರ್ತವ್ಯಗಳು ವ್ಯಾಪಕವಾಗಿ ಚರ್ಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.












Click it and Unblock the Notifications