ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅದಾನಿ ಮೇಲಿನ ಹಿಂಡೆನ್‌ಬರ್ಗ್ ವರದಿ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಕೇಂದ್ರ

ನಾವು ನಿರ್ದಿಷ್ಟ ಕಂಪನಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸರ್ಕಾರ ಮಟ್ಟದಲ್ಲಿ ಪ್ರತಿಕ್ರಿಯಿಸುವುದಿಲ್ಲ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಜಯ್ ಸೇಠ್ ಇಲ್ಲಿ ಮಾಧ್ಯಮಗಳೊಂದಿಗೆ ಹೇಳಿದರು.

|
Google Oneindia Kannada News

ನವದೆಹಲಿ, ಫೆಬ್ರವರಿ 2: ಅದಾನಿ ಗ್ರೂಪ್‌ನ ಮೇಲೆ ಯುಎಸ್‌ ಮೂಲದ ಹಿಂಡೇನ್‌ಬರ್ಗ್‌ ವರದಿ ಹೊರಿಸಲಾದ ವಂಚನೆಯ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಲು ಸರ್ಕಾರ ನಿರಾಕರಿಸಿದೆ.

ಹಿಂಡೇನ್‌ಬರ್ಗ ವರದಿ ಅದಾನಿ ಸಮೂಹ ಸಂಸ್ಥೆಗಳ ಷೇರುಗಳಲ್ಲಿ 90 ಶತಕೋಟಿ ಡಾಲರ್‌ನಷ್ಟು ಭಾರಿ ನಷ್ಟವನ್ನು ಉಂಟುಮಾಡಿತು. ಹಾಗಾಗಿ ಕೇಂದ್ರ ಸರ್ಕಾರವು ಇದು ವೈಯಕ್ತಿಕ ಕಂಪನಿ ವಿಷಯವಾದ್ದರಿಂದ ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದೆ.

ಎಫ್‌ಪಿಒ ಷೇರು ಮಾರಾಟ ರದ್ದುಗೊಳಿಸಿದ ಅದಾನಿ ಎಂಟರ್‌ಪ್ರೈಸಸ್ಎಫ್‌ಪಿಒ ಷೇರು ಮಾರಾಟ ರದ್ದುಗೊಳಿಸಿದ ಅದಾನಿ ಎಂಟರ್‌ಪ್ರೈಸಸ್

ನಾವು ನಿರ್ದಿಷ್ಟ ಕಂಪನಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸರ್ಕಾರ ಮಟ್ಟದಲ್ಲಿ ಪ್ರತಿಕ್ರಿಯಿಸುವುದಿಲ್ಲ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಜಯ್ ಸೇಠ್ ಇಲ್ಲಿ ಮಾಧ್ಯಮಗಳೊಂದಿಗೆ ಬಜೆಟ್ ಸಂವಾದದ ನಂತರ ಹೇಳಿದರು. ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ವಿ ಅನಂತ ನಾಗೇಶ್ವರನ್ ಅವರು ಮಂಗಳವಾರ ಯುಎಸ್ ಮೂಲದ ಹಿಂಡೆನ್‌ಬರ್ಗ್ ರಿಸರ್ಚ್‌ನ ಖಂಡನೀಯ ವರದಿಯ ನಂತರ ಅದಾನಿ ಗ್ರೂಪ್ ಷೇರುಗಳಲ್ಲಿನ ಕುಸಿತದ ಪರಿಣಾಮದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

The Center refuse to comment on the Hindenburg report on Adani

ಅದಾನಿ ಗ್ರೂಪ್ ಸಂಸ್ಥೆಗಳ ಷೇರುಗಳು ಬುಧವಾರ ಕುಸಿತ ಕಂಡಿವೆ. ಹಿಂಡೆನ್‌ಬರ್ಗ್ ರಿಸರ್ಚ್‌ನ ವರದಿಯ ಕಳವಳದ ನಡುವೆ ಕಳೆದ ಐದು ವಹಿವಾಟು ಅವಧಿಗಳಲ್ಲಿ ₹ 7 ಲಕ್ಷ ಕೋಟಿ ಅಥವಾ ಸಂಯೋಜಿತ ಮಾರುಕಟ್ಟೆ ಮೌಲ್ಯ ಸುಮಾರು 38 ಶೇಕಡಾವನ್ನು ಕಳೆದುಕೊಂಡಿವೆ ಎನ್ನಲಾಗಿದೆ. ಗೌತಮ್ ಅದಾನಿ ನೇತೃತ್ವದ ಗ್ರೂಪ್‌ನಲ್ಲಿ ಮೋಸದ ವಹಿವಾಟುಗಳು ಮತ್ತು ಷೇರು ಬೆಲೆ ವಂಚನೆ ಸೇರಿದಂತೆ ಹಲವು ಆರೋಪಗಳನ್ನು ಹಿಂಡೆನ್‌ಬರ್ಗ್ ವರದಿಯಲ್ಲಿ ಮಾಡಿದ ನಂತರ ಅದಾನಿ ಗ್ರೂಪ್ ಷೇರುಗಳು ಮೇಲೆ ಭಾರೀ ಹೊಡೆತ ಕಂಡು ಬಂದಿದೆ.

ಮುಳುಗುತ್ತಿದೆ ಅದಾನಿ ಹಡಗು: 2 ದಿನಗಳಲ್ಲಿ ₹18,000 ಕೋಟಿ ಕಳೆದುಕೊಂಡ LIC- ಗ್ರಾಹಕರೇ, ಎಚ್ಚರಿಕೆಯಿಂದ ಈ ವರದಿ ನೋಡಿಮುಳುಗುತ್ತಿದೆ ಅದಾನಿ ಹಡಗು: 2 ದಿನಗಳಲ್ಲಿ ₹18,000 ಕೋಟಿ ಕಳೆದುಕೊಂಡ LIC- ಗ್ರಾಹಕರೇ, ಎಚ್ಚರಿಕೆಯಿಂದ ಈ ವರದಿ ನೋಡಿ

ಜನವರಿ 24 ರಂದು ಹಿಂಡೆನ್‌ಬರ್ಗ್ ವರದಿಯನ್ನು ಬಿಡುಗಡೆ ಮಾಡಿತು. ಅದಾನಿ ಎಂಟರ್‌ಪ್ರೈಸಸ್‌ನ ₹ 20,000 ಕೋಟಿ ಎಫ್‌ಪಿಒ ಷೇರು ಮಾರಾಟವನ್ನು ಹೂಡಿಕೆದಾರರಿಗೆ ತೆರೆಯಲಾಯಿತು. ಆದರೆ ಈ ಆರೋಪಗಳನ್ನು ಸಂಸ್ಥೆಯು ತಿರಸ್ಕರಿಸಿದೆ. ಬುಧವಾರದ ವಹಿವಾಟಿನ ಅಂತ್ಯದ ವೇಳೆಗೆ, ಎಲ್ಲಾ ಗುಂಪಿನ ಕಂಪನಿಗಳ ಷೇರುಗಳು ತಮ್ಮ ಕಡಿಮೆ ಬೆಲೆಯ ಮೌಲ್ಯದೊಂದಿಗೆ ಕುಸಿತ ಅನುಭವಿಸಿದವು.

The Center refuse to comment on the Hindenburg report on Adani

ಅದಾನಿ ಎಂಟರ್‌ಪ್ರೈಸಸ್‌ನ ಷೇರುಗಳು ಬಿಎಸ್‌ಇಯಲ್ಲಿ ಶೇಕಡಾ 28.45 ರಷ್ಟು ಕುಸಿದು ₹ 2,128.70 ಕ್ಕೆ ತಲುಪಿತು. ಆದರೂ ಕಂಪನಿಯ ₹ 20,000ಕೋಟಿ ಷೇರು ಮಾರಾಟವು ಮಂಗಳವಾರ ಕೊನೆಯ ದಿನದಂದು ಚಿಲ್ಲರೆಯಲ್ಲದ ಹೂಡಿಕೆದಾರರು ದೊಡ್ಡ ಪ್ರಮಾಣದಲ್ಲಿ ಬಿಡ್ ಮಾಡಿದ ನಂತರ ಮುಂದುವರಿಯಿತು. ಆದಾಗ್ಯೂ, ಚಿಲ್ಲರೆ ಹೂಡಿಕೆದಾರರು ಮತ್ತು ಕಂಪನಿಯ ಉದ್ಯೋಗಿಗಳಿಂದ ತಟಸ್ಥ ಪ್ರತಿಕ್ರಿಯೆ ಕಂಡುಬಂದಿದೆ.

ಅದಾನಿ ಬಂದರುಗಳು ಮತ್ತು ವಿಶೇಷ ಆರ್ಥಿಕ ವಲಯದ ಘಟಕಗಳು ಶೇಕಡಾ 19.69 ರಷ್ಟು ಕುಸಿದವು. ಅದಾನಿ ಟೋಟಲ್ ಗ್ಯಾಸ್ ಶೇಕಡಾ 10, ಅದಾನಿ ಗ್ರೀನ್ ಎನರ್ಜಿ ಶೇಕಡಾ 5.78, ಅದಾನಿ ವಿಲ್ಮರ್ ಶೇಕಡಾ 4.99, ಅದಾನಿ ವಿಲ್ಮರ್ ಶೇಕಡಾ 4.99, ಅದಾನಿ ಪವರ್ ಶೇಕಡಾ 4.99 ರಷ್ಟು ಕುಸಿದವು. ಅಲ್ಲದೆ ಅದಾನಿ ಟ್ರಾನ್ಸ್‌ಮಿಷನ್ ಶೇಕಡಾ 2.46 ರಷ್ಟು ಕುಸಿದಿದೆ. ಇದರ ಜೊತೆಗೆ, ಅಂಬುಜಾ ಸಿಮೆಂಟ್ಸ್ ಶೇಕಡಾ 16.56 ರಷ್ಟು ಕುಸಿದಿದ್ದರೆ, ಎಸಿಸಿ ಶೇಕಡಾ 6.34 ಮತ್ತು ಎನ್‌ಡಿಟಿವಿ ಶೇಕಡಾ 4.98 ರಷ್ಟು ಕುಸಿದಿದೆ.

English summary
The Centeral government has refused to comment on the fraud allegations leveled against the Adani Group by the US-based Hindenburg Report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X