ನಾವೇ ತಂದುಕೊಂಡ ಕಿವುಡುತನಕ್ಕೆ ಕಾರಣಗಳೇನು?

By: ಬೆಂಗಳೂರು ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಆಗಸ್ಟ್, 17: ಕಿವುಡುತನಕ್ಕೆ ಕಾರಣಗಳನ್ನು ನಾವೇ ತಂದುಕೊಂಡಿದ್ದೇವೆ. ಕಿವಿಗೆ ಅಪ್ಪಳಿಸಯವ ಸಂಗೀತ ನಿಮ್ಮನ್ನು ರಾಕಿಂಗ್ ಆಗಿರಿಸಬಹುದು ಆದರೆ ಕಿವುಡುತನಕ್ಕೆ ಕಾರಣವಾಗಬಹುದು!

ನೃತ್ಯಗಾರ ಅಮಾನ್ ಕಿವಿ ಕೇಳಿದಸದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ. ಇನ್ನೂ 25ರ ಹರೆಯದ ಈ ಡ್ಯಾನ್ಸರ್ ಸಂಗೀತ ಲಯದ ವ್ಯತ್ಯಾಸವನ್ನು ಕೇಳುವುದು ಸಾಧ್ಯವಾಗದೇ ತನ್ನ ಜೀವನವೇ ಮುಗಿದು ಹೋಯಿತು ಎಂಬ ಸ್ಥಿತಿಗೆ ಬಂದು ತಲುಪಿದ್ದ.[ವಿಡಿಯೋ: ರೆಹಮಾನ್ ಮ್ಯೂಸಿಕ್, ವಿರಾಟ್ ಕೊಹ್ಲಿ ಡಾನ್ಸ್!]

ಡ್ಯಾನ್ಸ್ ಸ್ಟೆಪ್ ಗಳ ಅಭ್ಯಾಸಕ್ಕಾಗಿ ಅರ್ಧ ದಿನಕ್ಕೂ ಹೆಚ್ಚು ಹೊತ್ತು ಕಿವಿಗಡಚಿಕ್ಕುವ ಸಂಗೀತ ಆಲಿಸುತ್ತಾ ಆತ ಇರುವುದರಿಂದಾಗಿ ಆತನ ಕಿವಿಗಳ ನರಗಳ ಮೇಲೆ ಪರಿಣಾಮ ಉಂಟಾಗಿದೆ ಎಂಬುದನ್ನು ವೈದ್ಯರು ಕಂಡುಕೊಂಡರು. ಇಂಥ ನೂರಾರು ಘಟನೆಗಳನ್ನು ಉದಾಹರಣೆಯಾಗಿ ನೀಡಬಹುದು.

 ಅಮಾನ್ ಉದಾಹರಣೆ

ಅಮಾನ್ ಉದಾಹರಣೆ

ಅಮಾನ್ ಶ್ರವಣ ಶಕ್ತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಈಗ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಆತ ಗಟ್ಟಿ ಧ್ವನಿಯ ಸಂಗೀತ ಆಲಿಸುವುದನ್ನು ನಿಲ್ಲಿಸಿಬಿಟ್ಟಿದ್ದಾನೆ. ಹಿತವಾಗಿರಬೇಕಾಗಿದ್ದ ಸಂಗೀತ ಇಂದು, ಶಬ್ದ ಮಾಲಿನ್ಯ ಏಜೆಂಟ್ ಆಗಿ ಬದಲಾಗುತ್ತಿದೆ, ತೀರಾ ದೊಡ್ಡ ಧ್ವನಿಯಲ್ಲಿದ್ದರೆ, ಅದು ಶ್ರವಣ ಶಕ್ತಿಯ ಮೇಲೆಯೇ ಪರಿಣಾಮ ಬೀರಬಹುದು ಎಂದು ವೈದ್ಯರು ಎಚ್ಚರಿಕೆ ನೀಡುತ್ತಾರೆ.

ಅಧಿಕ ತೀವ್ರತೆಯ ಸಂಗೀತ

ಅಧಿಕ ತೀವ್ರತೆಯ ಸಂಗೀತ

ಅಧಿಕ ತೀವ್ರತೆಯ ಸಂಗೀತವು ಕಿವಿಯ ನರಗಳನ್ನು ದುರ್ಬಲಗೊಳಿಸಬಹುದು ಮತ್ತು ಸಾಮಾನ್ಯವಾಗಿ ಕಿವಿ ತಮಟೆ ಮೇಲೆ ಪರಿಣಾಮ ಬೀರುತ್ತದೆ," ಎಂದು ಡಾ. ಸೈಂಟ್ ಮಾರ್ಥಾಸ್ ಆಸ್ಪತ್ರೆಯ ಇಎನ್ ಟಿ ವಿಭಾಗದ ಮುಖ್ಯಸ್ಥ ಇಮ್ಯಾನುವೆಲ್ ಜೇಮ್ಸ್ ಹೇಳುತ್ತಾರೆ.

ನಮ್ಮ ಕಿವಿ ಸಾಮರ್ಥ್ಯ ಎಷ್ಟು?

ನಮ್ಮ ಕಿವಿ ಸಾಮರ್ಥ್ಯ ಎಷ್ಟು?

ಏಕಾಏಕಿ ಕಿವಿಗಡಚಿಕ್ಕುವ ಶಬ್ದವಾದಾಗ ಕಿವಿ ತಮಟೆಯ ಮೇಲೆ ಪರಿಣಾಮವಾಗುತ್ತದೆ. ಬ್ರಿಟಿಷ್ ಸ್ಟಾಂಡರ್ಡ್ ಪ್ರಕಾರ, 80-90 ಡೆಸಿಬಲ್‍ಗಳಷ್ಟು ಶಬ್ದವನ್ನು 8 ಗಂಟೆಗಳ ಕಾಲ ಆಲಿಸುವುದು ಕಿವಿಗೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ, ಆದರೆ, ಆ ಮಿತಿಗಿಂತ ಜಾಸ್ತಿಯಾಗಿ ಸಂಗೀತವನ್ನು ನುಡಿಸಿದರೆ, ಆಗ ಅದು ಕಿವಿಗಳಿಗೆ ಗಂಭೀರ ಹಾನಿಯನ್ನುಂಟು ಮಾಡುತ್ತದೆ.

 ಯಾರು ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ

ಯಾರು ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ

ಅಧಿಕ ಧ್ವನಿಯ ಸಂಗೀತಕ್ಕೆ ದೀರ್ಘ ಕಾಲ ತೆರೆದುಕೊಳ್ಳುವ ಕಲಾವಿದರು ಕೂಡಾ ಶ್ರವಣ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. "ಸಶಸ್ತ್ರ ಪಡೆಗಳಲ್ಲಿ ಎಂಜಿನ್ ರೂಂ ನಾವಿಕರಾಗಿ ಕೆಲಸ ಮಾಡುವ ವ್ಯಕ್ತಿಗಳೂ ಅತಿಯಾದ ಸಮಯ ಗಟ್ಟಿ ಶಬ್ದಕ್ಕೆ ತುತ್ತಾಗುತ್ತಾರೆ. ಹದಿಹರೆಯದವರು ಗಟ್ಟಿ ಧ್ವನಿಯಲ್ಲಿ ಸಂಗೀತ ಆಲಿಸುವುದರಿಂದ ಬಾಧಿತರಾಗುತ್ತಾರೆ.

 ಇಂಜಿನಿಯರ್ ಕತೆ

ಇಂಜಿನಿಯರ್ ಕತೆ

29ರ ರೆಹಮಾನ್ (ಹೆಸರು ಬದಲಿಸಲಾಗಿದೆ), ಒಬ್ಬ ಧ್ವನಿ ಎಂಜಿನಿಯರ್ ಆಗಿದ್ದು, ಇವರಿಗೆ ಉದ್ಯೋಗವೇ ಧ್ವನಿಗ್ರಹಣ ಶಕ್ತಿ ಕಳೆದುಕೊಳ್ಳುವಂತೆ ಮಾಡಿತು. ಮಾಧುರ್ಯಕ್ಕಾಗಿ ಪರಿಪೂರ್ಣ ಧ್ವನಿಯನ್ನು ವಿನ್ಯಾಸಗೊಳಿಸಲು ಇವರು ಕಷ್ಟಪಟ್ಟು ದುಡಿಯುತ್ತಿದ್ದಾಗ, ದೀರ್ಘಕಾಲ ಗಟ್ಟಿಧ್ವನಿಯ ಸಂಗೀತಕ್ಕೆ ತಮ್ಮನ್ನು ಒಡ್ಡಿಕೊಳ್ಳಬೇಕಾಗಿತ್ತು. ಇದು ಕೆಲವು ದಿನಗಳ ಕಾಲ ಆಲಿಸುವ ಶಕ್ತಿಯನ್ನೇ ದೂರತಳ್ಳಿತು. ಆದಾಗ್ಯೂ, ಚಿಕಿತ್ಸೆಯ ಬಳಿಕ ಗುಣವಾದರೂ ಕಿವಿಯಲ್ಲಿ ಒಂದು ಝೇಂಕಾರ ಕೇಳಿಸುವುದು ಮುಂದುವರಿದಿದೆ.

ಮೆದುಳಿಗೆ ಹಾನಿ

ಮೆದುಳಿಗೆ ಹಾನಿ

ಮುಚ್ಚಿದ ಸ್ಥಳದದಲ್ಲಿನ ಅಬ್ಬರದ ಸಂಗೀತ ಕಿವಿಗಳಿಗೆ ತೀರಾ ಅಪಾಯಕಾರಿ. ದೀರ್ಘಕಾಲ ಏರುಧ್ವನಿಯ ಸಂಗೀತ ಆಲಿಸುವುದರಿಂದ ಕಿವಿಯಿಂದ ಮಿದುಳಿಗೆ ಸಂಕೇತಗಳನ್ನು ರವಾನಿಸುವ ನರ ತಂತುಗಳ ಕವಚವು ಹರಿದುಹೋಗಬಹುದು. ಇದು ಒಂದು ಅಥವಾ ಎರಡೂ ಕಿವಿಗಳ ಆಲಿಸುವ ಸಾಮಥ್ರ್ಯದ ಕುಂಠಿತಕ್ಕೆ ಕಾರಣವಾಗಬಹುದು.

ಹೆಡ್ ಫೋನ್ ತಂದಿಡುವ ಅಪಾಯ

ಹೆಡ್ ಫೋನ್ ತಂದಿಡುವ ಅಪಾಯ

ಗಟ್ಟಿಧ್ವನಿಯಲ್ಲಿ ಸಂಗೀತ ಆಲಿಸಲು ಹೆಡ್ ಫೋನ್ ಉಪಯೋಗಿಸಿದರೆ, ಈ ಅಪಾಯವು ಹೆಚ್ಚಿರುತ್ತದೆ. ವೈದ್ಯಕೀಯವಾಗಿ, 110 ಡೆಸಿಬಲ್‍ಗಳಿಗಿಂತ ಹೆಚ್ಚಿನ ಯಾವುದೇ ಶಬ್ದವು ಮಾನವ ಕಿವಿಗೆ ಅಸುರಕ್ಷಿತವಾಗಿರುತ್ತದೆ" ಎಂದು ಡಾ.ಆರ್.ಎಸ್.ಅಡಿಗ ಹೇಳುತ್ತಾರೆ.

ಹಾರ್ಮೋನು ಬದಲಾವಣೆ

ಹಾರ್ಮೋನು ಬದಲಾವಣೆ

ಗರ್ಭಿಣಿಯರು ಮತ್ತು 30 ರಿಂದ 40 ವರ್ಷದ ನಡುವಿನ ವ್ಯಕ್ತಿಗಳು ತಮ್ಮ ದೇಹದ ಹಾರ್ಮೋನುಗಳ ಬದಲಾವಣೆಯಿಂದ ಕಿವುಡತನಕ್ಕೀಡಾಗುವ ಅಪಾಯ ಹೆಚ್ಚಿರುತ್ತದೆ ಎಂಬುದನ್ನು ಇಲ್ಲಿ ಉಲ್ಲೇಖ ಮಾಡಬಹುದು.

ಅನೀಮಿಯಾ

ಅನೀಮಿಯಾ

ಗರ್ಭ ಧರಿಸಿರುವ ವೇಳೆಯಲ್ಲಿ, ಮಹಿಳೆಯರಲ್ಲಿ ಅನೀಮಿಯಾದ ಸಂಭವ ಹೆಚ್ಚಿರುತ್ತದೆ, ಇದು ಅವರನ್ನು ಶ್ರವಣ ದೋಷಕ್ಕೆ ಈಡಾಗುವಂತೆ ಮಾಡುವ ಸಾಧ್ಯತೆ ಇರುತ್ತದೆ. ಗರ್ಭಿಣಿಯರಲ್ಲಿ ಗರ್ಭಧಾರಣೆಯ ಮಧುಮೇಹದ ಸಂಭವವು ಶ್ರವಣ ದೋಷದ ಇನ್ನೊಂದು ಕಾರಣವಾಗಿದೆ" ಎಂದು ಡಾ.ಜೇಮ್ಸ್ ಹೇಳುತ್ತಾರೆ.

ಇನ್ನು ಕೆಲ ಕಾರಣಗಳು

ಇನ್ನು ಕೆಲ ಕಾರಣಗಳು

ಕಿವುಡುತನದ ಕುಟುಂಬ ಇತಿಹಾಸ, ಮಧುಮೇಹ, ಮಿನೆರೆ ಕಾಯಿಲೆ, ಕಬ್ಬಿಣದ ಕೊರತೆ, ವಿಟಮಿನ್ ಎ ಕೊರತೆ, ಅಪಧಮನಿ ಕಾಠಿಣ್ಯ (ಅಪಧಮನಿ ಗಟ್ಟಿಯಾಗುವಿಕೆ) ಮತ್ತು ಧೂಮಪಾನ 30 ಮತ್ತು 40 ವರ್ಷಗಳ ನಡುವೆ ಕಿವುಡುತನ ಉಂಟಾಗುವುದರ ಹಿಂದಿನ ಪ್ರಮುಖ ಅಂಶಗಳಾಗಿವೆ ಎಂಬುದನ್ನು ಅರಿತುಕೊಳ್ಳಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The ear is our organ of hearing. At around 20 years of age, our hearing starts a gradual decline. Higher frequencies are usually the first to go. Here are the some important points to note Hearing Loss or Deafness.
Please Wait while comments are loading...