Jammu Kashmir Statehood: ರಾಜ್ಯ ಸ್ಥಾನಮಾನಕ್ಕೆ ಒಮರ್‌ ಸರ್ಕಾರದಿಂದ ನಿರ್ಣಯ ಅಂಗೀಕಾರ

ಜಮ್ಮು ಮತ್ತು ಕಾಶ್ಮೀರದ ನೂತನ ಸಿಎಂ ಒಮರ್ ಅಬ್ದುಲ್ಲಾ ನೇತೃತ್ವದ ಕ್ಯಾಬಿನೆಟ್ ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವವನ್ನು ಮರುಸ್ಥಾಪಿಸುವ ನಿರ್ಣಯವನ್ನು ಅಂಗೀಕರಿಸಿದೆ. ನಿನ್ನೆ ನಡೆದ ಹೊಸ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿ ರಾಜ್ಯತ್ವವನ್ನು ಮತ್ತೆ ಸ್ಥಾಪಿಸುವ ಸಂಬಂಧ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ನಿರ್ಣಯ ಕೈಗೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈಗಾಗಲೇ ಈ ನಿರ್ಣಯದ ಕರಡನ್ನು ಸಿದ್ಧಪಡಿಸಲಾಗಿದ್ದು, ಜಮ್ಮು ಮತ್ತು ಕಾಶ್ಮೀರಕ್ಕೆ ಮೊದಲಿನಂತೆ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸುವಂತೆ ಒತ್ತಾಯಿಸುವ ನಿರ್ಣಯದ ಕರಡನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಾಂತರಿಸಲು ಸಿಎಂ ಒಮರ್ ಅಬ್ದುಲ್ಲಾ ಅವರು ಶೀಘ್ರವೇ ನವದೆಹಲಿಗೆ ತೆರಳಲಿದ್ದಾರೆ ಎಂದು ಹೇಳಲಾಗಿದೆ.

The Cabinet Passed A Resolution Regarding Granting Statehood To Jammu And Kashmir

ನಿನ್ನೆ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಉಪಮುಖ್ಯಮಂತ್ರಿ ಸುರೀಂದರ್ ಚೌಧರಿ ಮತ್ತು ಸಚಿವರಾದ ಸಕೀನಾ ಮಸೂದ್ ಇಟೂ, ಜಾವೇದ್ ಅಹ್ಮದ್ ರಾಣಾ, ಜಾವೈದ್ ಅಹ್ಮದ್ ದಾರ್ ಮತ್ತು ಸತೀಶ್ ಶರ್ಮಾ ಸೇರಿದಂತೆ ನೂತನ ಸವಚಿವರು ಉಪಸ್ಥಿತರಿದ್ದರು.

ಇನ್ನು ನೂತನವಾಗಿ ರಚನೆಯಾಗಿರುವ ಜಮ್ಮು-ಕಾಶ್ಮೀರ ಸರ್ಕಾರದಲ್ಲಿ ಒಮರ್ ಅಬ್ದುಲ್ಲಾ ನೇತೃತ್ವದ ಸಚಿವ ಸಂಪುಟ ಸೇರದಿರಲು ಕಾಂಗ್ರೆಸ್ ನಿರ್ಧರಿಸಿತ್ತು. ಕೇಂದ್ರಾಡಳಿತ ಪ್ರದೇಶವಾಗಿದ್ದ ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಮರುಸ್ಥಾಪಿಸದಿರುವುದು ನಮ್ಮ ಅಸಮಾಧಾನಕ್ಕೆ ಕಾರಣ ಎಂದು ಕಾಂಗ್ರೆಸ್ ಹೇಳಿತ್ತು.

The Cabinet Passed A Resolution Regarding Granting Statehood To Jammu And Kashmir

ನಮ್ಮ ಬೇಡಿಕೆ ಈಡೇರದ ಕಾರಣ ನಾವು ಜಮ್ಮುಕಾಶ್ಮೀರದ ಹೊಸ ಸಚಿವ ಸಂಪುಟ ಸೇರುತ್ತಿಲ್ಲ. ಈ ಅಸಮಾಧಾನದಿಂದಾಗಿ ಸದ್ಯ ಹೊರಗುಳಿದಿದ್ದೇವೆ ಎಂದು ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿ (ಜೆಕೆಪಿಸಿಸಿ) ಮುಖ್ಯಸ್ಥ ತಾರಿಕ್ ಹಮೀದ್ ಕರ್ರಾ ಹೇಳಿದ್ದರು. ಈಗ ಕ್ಯಾಬಿನೆಟ್ ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವವನ್ನು ಮರುಸ್ಥಾಪಿಸುವ ನಿರ್ಣಯವನ್ನು ಅಂಗೀಕರಿಸಿರುವುದರಿಂದ ಕಾಂಗ್ರೆಸ್‌ ಅಸಮಾಧಾನ ಶಮನಗೊಳ್ಳುವ ಸಾಧ್ಯತೆ ಇದೆ.

ಆದರೆ, ಜಮ್ಮು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ದೊರಕಿಸಿಕೊಡುವ ನಿರ್ಣಯವನ್ನು ಸಚಿವ ಸಂಪುಟದಲ್ಲಿ ಅಂಗೀಕಾರ ಮಾಡಿರುವ ವಿಚಾರಕ್ಕೆ ಪೀಪಲ್ಸ್ ಕಾನ್ಫರೆನ್ಸ್‌ನ ಮುಖ್ಯಸ್ಥ ಸಜ್ಜದ್ ಲೋನೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ನಿರ್ಣಯವನ್ನು ವಿಧಾನಸಭೆಯಲ್ಲಿ ಅಂಗೀಕರಿಸಬೇಕಿತ್ತು. ಇಂತಹ ಗಂಭೀರ ವಿಷಯಗಳಿಗೆ ವಿಧಾನಸಭೆಯಲ್ಲೇ ನಿರ್ಣಯ ತೆಗೆದುಕೊಳ್ಳುವುದು ಸೂಕ್ತ ಎಂದಿದ್ದಾರೆ.

ಸಿಎಂ ಒಮರ್ ಅಬ್ದುಲ್ಲಾ ಅಂಗೀಕರಿಸಿರುವ ನಿರ್ಣಯವನ್ನು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಶಾಸಕ ವಹೀದ್ ಪಾರಾ ಕೂಡಾ ಟೀಕಿಸಿದ್ದಾರೆ. ಇದು ಹಳೆಯ ನಿರ್ಧಾರವನ್ನು ಸರಿಪಡಿಸುವ ವಿಚಾರವಷ್ಟೇ ಆಗಿದ್ದು, 370ನೇ ವಿಧಿಗೆ ದೊಡ್ಡ ಹಿನ್ನಡೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಜಮ್ಮುಕಾಶ್ಮೀರದ ಸಿಎಂ ಆಗಿ ಚುಕ್ಕಾಣಿ ಹಿಡಿದಿರುವ ಒಮರ್‌ ಅಬ್ದುಲ್ಲಾ ಅವರಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅಭಿನಂದಿಸಿದ್ದರು. ಈ ವೇಳೆ ಮತ್ತೆ ಪುನರುಚ್ಛರಿಸಿದ್ದ ರಾಹುಲ್‌, 2019ರಲ್ಲಿ ವಾಪಸ್‌ ಪಡೆದಿದ್ದ ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನ ಮರುಸ್ಥಾಪಿಸುವ ಬೇಡಿಕೆಯನ್ನು ಮುಂದಿಟ್ಟಿದ್ದರು. ರಾಜ್ಯದ ಸ್ಥಾನಮಾನ ಇಲ್ಲದ ಸರ್ಕಾರ ರಚನೆಯು ಇಂದು ಅಪೂರ್ಣವಾಗಿದ್ದು, ಜಮ್ಮು ಮತ್ತು ಕಾಶ್ಮೀರದ ನೆಲದಲ್ಲಿ ಪ್ರಜಾಪ್ರಭುತ್ವವನ್ನು ಕಿತ್ತುಕೊಳ್ಳಲಾಗಿದೆ. ರಾಜ್ಯ ಸ್ಥಾನಮಾನವನ್ನು ಮರಳಿ ಸಿಗುವವರೆಗೆ ನಮ್ಮ ಹೋರಾಟ ನಿಲ್ಲಲ್ಲ ಎಂದು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+