"ಬುಲೆಟ್ ಮತ್ತು ಥಾರ್ ಓಡಿಸುವವರು ಗೂಂಡಾಗಳು"
ಈಗಿನ ಯುವಜನರಿಗೆ ಕಾರು, ಬೈಕು ಅಂದ್ರೆ ಒಂದು ರೀತಿ ಪಂಚಪ್ರಾಣ. ಬಹುತೇಕ ಯುವಕರ ದೊಡ್ಡ ಕನಸು ಅಂದ್ರೆ ಆ ಗಾಡಿ ತಗೋಬೇಕು, ಈ ಕಾರನ್ನು ಓಡಿಸಬೇಕು ಅನ್ನೋದು. ಇನ್ನು ಇತ್ತೀಚೆಗೆ ಯುವಜನರ ನೆಚ್ಚಿನ ವಾಹನಗಳಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ ಹಾಗೂ ಮಹೀಂದ್ರಾ ಕಂಪನಿಯ ಥಾರ್ ಮುಂಚೂಣಿಯಲ್ಲಿವೆ. ರಸ್ತೆಯಲ್ಲಿ ಬುಲೆಟ್ ಗಾಡಿ ಅಥವಾ ಥಾರ್ ಪಾಸಾದ್ರೆ ಸಾಕು ಎಂತಹವರೂ ಒಂದು ಕ್ಷಣ ತಿರುಗಿ ನೋಡ್ತಾರೆ. ಅಷ್ಟರಮಟ್ಟಿಗೆ ಇವುಗಳಿಗೆ ಹವಾ ಇಟ್ಟಿದೆ. ಆದರೆ "ಥಾರ್ & ಬುಲೆಟ್ ಗಾಡಿ ಓಡಿಸುವವರಿಗೆ ಗೂಂಡಾ ಪಟ್ಟ ನೀಡಲಾಗಿದೆ.
ಹೌದು ಈಗಂತೂ ಯುವಕರ ಡ್ರೀಮ್ ಕಾರು ಅಂದ್ರೆ ಥಾರ್, ಕನಸಿನ ಗಾಡಿ ಅಂದ್ರೆ ಬುಲೆಟ್ ಅಂತಾರೆ. ಈ ಎರಡೂ ವಾಹನಗಳು ಖಡಕ್ ಲುಕ್‌ನಿಂದ ಎಲ್ಲರನ್ನೂ ತಮ್ಮತ್ತ ಸೆಳೆಯುತ್ತಿವೆ. ಹೀಗಿರುವಾಗ ಬುಲೆಟ್, ಥಾರ್ ಓಡಿಸುವವರು ಗೂಂಡಾಗಳು ಎಂದು ಹಿರಿಯ ಪೊಲೀಸ್ ಅಧಿಕಾರಿ ನೀಡಿರುವ ಹೇಳಿಕೆ ವೈರಲ್ ಆಗಿದ್ದು, ಖಂಡನೆಯೂ ವ್ಯಕ್ತವಾಗುತ್ತಿದೆ.

ಥಾರ್ ಎಸ್‌ಯುವಿಗಳು ಮತ್ತು ಬುಲೆಟ್ ಮೋಟಾರ್‌ಸೈಕಲ್‌ಗಳು "ಕುಖ್ಯಾತ ಮನಸ್ಥಿತಿಯ ಸಂಕೇತಗಳು" ಎಂದು ಹರಿಯಾಣ ಡಿಜಿಪಿ ಒಪಿ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಈ ವಾಹನಗಳನ್ನು ಚಾಲನೆ ಮಾಡುವ ಜನರು ಹೆಚ್ಚಾಗಿ ರಸ್ತೆಗಳಲ್ಲಿ ತಮ್ಮ ಸಾಹಸಗಳನ್ನು ಮಾಡುತ್ತಾರೆ. ತಮ್ಮ ಅಧಿಕಾರ ಮತ್ತು ಸ್ಥಾನಮಾನವನ್ನು ಪ್ರದರ್ಶಿಸಲು ಅವುಗಳನ್ನು ಬಳಸುತ್ತಾರೆ ಎಂದು ಎಂದಿದ್ದಾರೆ. ಪೊಲೀಸರು ತಪಾಸಣೆಗಾಗಿ ಪ್ರತಿಯೊಂದು ವಾಹನವನ್ನು ನಿಲ್ಲಿಸಲು ಸಾಧ್ಯವಿಲ್ಲದಿದ್ದರೂ, ಥಾರ್ ಅಥವಾ ಬುಲೆಟ್ ಅನ್ನು ಕಡೆಗಣಿಸಲಾಗುವುದಿಲ್ಲ ಎಂದಿದ್ದಾರೆ.
ನಾವು ಎಲ್ಲ ವಾಹನಗಳನ್ನು ಪರಿಶೀಲಿಸುವುದಿಲ್ಲ. ಅದು ಥಾರ್ ಅಥವಾ ಬುಲೆಟ್ ಗಾಡಿ ಆಗಿದ್ದರೆ, ನಾವು ಅದನ್ನು ಹೇಗೆ ಬಿಡುವುದು? ಎಲ್ಲ ಕುಖ್ಯಾತರು ಅಂತಹ ಕಾರುಗಳು ಮತ್ತು ಬೈಕುಗಳನ್ನು ಬಳಸುತ್ತಾರೆ. ವಾಹನದ ಆಯ್ಕೆಯು ನಿಮ್ಮ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಥಾರ್ ಓಡಿಸುವ ಜನರು ರಸ್ತೆಯಲ್ಲಿ ಹೆಚ್ಚಾಗಿ ಸಾಹಸಗಳನ್ನು ಮಾಡುತ್ತಾರೆ ಎಂದು ಗರಂ ಆಗಿ ಹೇಳಿದ್ದಾರೆ. ಥಾರ್ ಕೇವಲ ಕಾರಲ್ಲ, ಅದು "ನಾನು ಹೀಗೇ ಇದ್ದೇನೆ" ಎಂದು ಹೇಳುವ ಸಂಕೇತ. ಅಲ್ಲದೆ ಈ ಪ್ರವೃತ್ತಿಯು ತಮ್ಮ ಪ್ರೆಸ್ಟೀಜ್‌ನ ಗುರುತಾಗುತ್ತಿದೆ ಎಂದು ಹೇಳಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದಕ್ಕೆ ಉದಾಹರಣೆ ಕೊಟ್ಟ ಅವರು, ಎಸಿಪಿ ಮಗ ಒಮ್ಮೆ ಥಾರ್ ಚಾಲನೆ ಮಾಡುವಾಗ ಒಬ್ಬ ವ್ಯಕ್ತಿಗೆ ಡಿಕ್ಕಿ ಹೊಡೆದ. ಅವನು ತನ್ನ ಮಗನನ್ನು ಬಿಡುಗಡೆ ಮಾಡಲು ಬಯಸಿದ್ದ. ನಾವು ಅವನನ್ನು ಕಾರು ಯಾರ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಕೇಳಿದೆವು. ಅದು ಅವನ ಹೆಸರಿನಲ್ಲಿದೆ, ಹಾಗಾಗಿ ಅವನು ರಾಕ್ಷಸ ಅಂಶ" ಎಂದಿದ್ದಾರೆ. ಇನ್ನು ಇಲಾಖೆಯ ಎಷ್ಟು ಮಂದಿ ಬಳಿ ಥಾರ್ ಇದೆ? ಅದನ್ನು ಹೊಂದಿರುವವರು ಹುಚ್ಚರಾಗಿರಬೇಕು. ನೀವು ಕೂಡ ಥಾರ್‌ನಲ್ಲಿ ಪ್ರದರ್ಶನ ನೀಡಿದರೆ, ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯೂ ನೀಡಿದ್ದಾರೆ.
ಪೊಲೀಸರ ಬಳಿಯೇ ಬುಲೆಟ್ ಹೆಚ್ಚು
"ಯಾರೋ ಕೆಲವರು ಚಪ್ರಿಗಳಂತೆ ಓಡಿಸ್ತಾರೆ ಎಂದ ಮಾತ್ರಕ್ಕೆ ಈ ವಾಹನಗಳನ್ನು ಓಡಿಸುವವರೆಲ್ಲ ಗೂಂಡಾಗಳು ಎನ್ನುವುದು ಸರಿಯಲ್ಲ, ಬುಲೆಟ್ ಹೆಚ್ಚಾಗಿ ಓಡಿಸುವುದು ಪೊಲೀಸರೇ ಆಗಿದ್ದಾರೆ. ಹಾಗಾದ್ರೆ ಅವರೆಲ್ಲರೂ ಗೂಂಡಾಗಳಾ? ಎಂದು ಆಕ್ರೋಶ ಹೊರಹಾಕಿದ್ದಾರೆ. ಚಪ್ರಿಗಳಿಗೆ ಅದೇ ಗಾಡಿ, ಇದೇ ಗಾಡಿ ಅಂತೇನಿಲ್ಲ. ಎಂತಹ ಒಳ್ಳೆ ಗಾಡಿ ಕೊಟ್ರೂ ಕೆಟ್ಟದಾಗಿ ಓಡಿಸಿ ಕಿರಿಕಿರಿ ಮಾಡ್ತಾರೆ. ದಯವಿಟ್ಟು ಬುಲೆಟ್, ಥಾರ್ ಪ್ರಿಯರಿಗೆ ಈ ರೀತಿ ನೋವು ತರಿಸಬೇಡಿ" ಎಂದು ಸಲಹೆ ನೀಡಿದ್ದಾರೆ.












Click it and Unblock the Notifications