ಮಣಿಪುರ: 18 ಜನರ ಹತ್ಯೆಗೆ ಕಾರಣನಾಗಿದ್ದ ಭಯೋತ್ಪಾದಕನ ಬಂಧನ

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಇಂಫಾಲ್, ಮಾರ್ಚ್ 10: ಕೆಸಿಇಎನ್ ಸಂಘಟನೆಗೆ ಸೇರಿದ ಭಯೋತ್ಪಾದಕನೊಬ್ಬನನ್ನು ಬಧಿಸುವಲ್ಲಿ ರಾಷ್ಟ್ರೀಯ ತನಿಖಾ ದಳ ಯಶಸ್ವಿಯಾಗಿದೆ. ಉಗ್ರನನ್ನು ಅನಿಲ್ ಶರ್ಮಾ ಅಲಿಯಾಸ್ ಮೈರಬಾ ಎಂದು ಗುರುತಿಸಲಾಗಿದ್ದು, ಆತನನ್ನು ಮಣಿಪುರದಲ್ಲಿ ಬಂಧಿಸಲಾಗಿದೆ.

ಕಾಶ್ಮೀರ: ಓರ್ವ ಉಗ್ರನನ್ನು ಬಲಿಹಾಕಿದ ಭಾರತೀಯ ಸೇನೆ

ಮಣಿಪುರ ಪೊಲೀಸ್ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ ತನಿಖಾ ದಳ, ಖಚಿತ ಮಾಹಿತಿಯ ಮೇರೆಗೆ ಅನಿಲ್ ಶರ್ಮಾನನ್ನು ಬಂಧಿಸಿತು. ಮಣಿಪುರದಲ್ಲಿ ಚಾಂದೇಲ್ ಜಿಲ್ಲೆಯ ಪ್ಯಾರಾಲೋನ್ ಎಂಬ ಹಳ್ಳಿಯಲ್ಲಿ ನಡೆದ ದಾಳಿಯೊಂದಕ್ಕೆ ಸಂಬಂಧಿಸಿದಂತೆ ಆತನನ್ನು ಬಂಧಿಸಲಾಗಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

Terrorist wanted for killing of 18 soldiers arrested in Manipur

ಈ ದಾಳಿಯಲ್ಲಿ ಒಟ್ಟು 18 ಜನ ಮೃತರಾಗಿದ್ದು, 15 ಜನ ಗಂಭೀರವಾಗಿ ಗಾಯಗೊಂಡಿದ್ದರು. ಬಂಧನದ ನಂತರ ಶರ್ಮಾನನ್ನು ಇಂಫಾಲ್ ನ ರಾಷ್ಟ್ರೀಯ ತನಿಖಾ ದಳದ ನ್ಯಾಯಾಲಯಕ್ಕೆ ಒಪ್ಪಿಸಲಾಗಿತ್ತು. ಹತ್ತು ದಿನಗಳ ಕಾಲ ಆತನನ್ನು ನ್ಯಾಯಾಲಯ ಬಂಧನದಲ್ಲಿರಿಸಲು ನ್ಯಾಯಾಲಯ ಆದೇಶಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The National Investigation Agency has arrested one terrorist belonging to the KCP(N) from Manipur. The terrorist has been identified as Anil Sharma alias Meiraba, a resident of Manipur.The NIA based on credible information arrested Sharma in a joint operation conducted with the Manipur police at the Sawongbung area.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ