ಜಮ್ಮು ಮತ್ತು ಕಾಶ್ಮೀರ; ಮತ್ತೆ ಭಯೋತ್ಪಾಕರ ದಾಳಿ ಓರ್ವ ಸಾವು

ಜಮ್ಮು ಮತ್ತು ಕಾಶ್ಮೀರದ ರಾಸಿ ಜಿಲ್ಲೆಯಲ್ಲಿ ಭಯೋತ್ಪಾದಕರು ಪ್ರಯಾಣಿಸುತ್ತಿದ್ದ ಬಸ್ಸಿನ ಮೇಲೆ ಗುಂಡು ಹಾರಿಸಿದ ಒಂಬತ್ತು ಜನರನ್ನು ಕೊಂದ ಎರಡು ದಿನಗಳ ನಂತರ, ಮತ್ತೊಮ್ಮೆ ದಾಳಿ ಮಾಡಿದ್ದಾರೆ.

ಅಂತರಾಷ್ಟ್ರೀಯ ಗಡಿಗೆ ಸಮೀಪವಿರುವ ಕೇಂದ್ರಾಡಳಿತ ಪ್ರದೇಶದ ಕಥುವಾ ಜಿಲ್ಲೆಯ ಮನೆಯೊಂದರ ಮೇಲೆ ಭಯೋತ್ಪಾದಕ ದಾಳಿಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

terror attack kathua jammu kashmir

ಉಧಮ್‌ಪುರದ ಸಂಸದರಾಗಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಘಟನೆ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ, ಸೈದಾ ಗ್ರಾಮದ ಮನೆಯ ಮೇಲೆ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ನಾನು ಕಥುವಾ ಜಿಲ್ಲಾಧಿಕಾರಿ ಶ್ ರಾಕೇಶ್ ಮಿನ್ಹಾಸ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದ್ದಾರೆ.

ಅಂತರಾಷ್ಟ್ರೀಯ ಗಡಿಗೆ ಸಮೀಪವಿರುವ ಹೀರಾನಗರ ಸೆಕ್ಟರ್‌ನಲ್ಲಿ ನಾನು ಸ್ಥಳದಲ್ಲಿರುವ ಕಥುವಾ ಎಸ್‌ಎಸ್‌ಪಿ ಅನಾಯತ್ ಅಲಿ ಚೌಧರಿ ಅವರೊಂದಿಗೂ ಸಂಪರ್ಕದಲ್ಲಿದ್ದು ಘಟನೆಯ ಮಾಹಿತಿ ಪಡೆಯುತ್ತಿದ್ದೇನೆ ಎಂದರು.

ದಾಳಿಗೊಳಗಾದ ಮನೆಯ ಮಾಲೀಕರು ಮೊಬೈಲ್ ಫೋನ್‌ನಲ್ಲಿಯೂ ಸಂಪರ್ಕದಲ್ಲಿದ್ದಾರೆ. ಜಂಟಿ ಪೊಲೀಸ್ ಮತ್ತು ಪ್ಯಾರಾ ಮಿಲಿಟರಿ ಕಾರ್ಯಾಚರಣೆ ನಡೆಯುತ್ತಿದೆ. ಒಬ್ಬ ಭಯೋತ್ಪಾದಕನ್ನು ಹೊಡೆದುರುಳಿಸಲಾಗಿದೆ . ನಾನು ಮತ್ತು ನನ್ನ ಕಚೇರಿ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+