ನಟಿ ಖುಷಿ ಮಲಗಿದ್ದಾಗ ಹೋಟೆಲ್ ಸಿಬ್ಬಂದಿಯಿಂದ ಕಿರುಕುಳ

ಭೋಪಾಲ್, ಮೇ.4: ಕಳೆದ ಎರಡು ದಿನಗಳಿಂದ ನಟಿ ಖುಷಿ ಮುಖರ್ಜಿಗೆ ಕಿರುಕುಳ ನೀಡಿದ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಭೋಪಾಲ್ ನ ಹೋಟೆಲ್ ಸಿಬ್ಬಂದಿಯೊಬ್ಬ ಆಕೆ ಮಲಗಿದ್ದಾಗ ರೂಮಿಗೆ ಬಂದು ಕಿರುಕುಳ ನೀಡಿದ್ದ ಎನ್ನಲಾಗಿದೆ. ಈ ಬಗ್ಗೆ ಮೊದಲ ಬಾರಿಗೆ ಹೋಟೆಲ್ ಮ್ಯಾನೇಜರ್ ಮಾತನಾಡಿದ್ದು, ನಾಲಗೆ ಬಿಗಿ ಹಿಡಿದು ಮಾತನಾಡಿ ಎಂದು ನಟಿಗೆ ಎಚ್ಚರಿಕೆ ನೀಡಿದ್ದಾರೆ.

ಹೋಟೆಲ್ ಹುಡುಗನ ವಿರುದ್ಧ ನಟಿ ಖುಷಿ ಶುಕ್ರವಾರವೇ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಟಿವಿ ಚಾನೆಲ್ ನಲ್ಲಿ ಕುಳಿತು ತನ್ನ ಗೋಳು ತೋಡಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಆರೋಪಿ ಹುಡುಗನನ್ನು ಮಾಧ್ಯಮದ ಮುಂದೆ ತಂದು ನಿಲ್ಲಿಸಿದಾಗ ಸಿಟ್ಟಿಗೆದ್ದ ನಟಿ ಆತನ ಕೆನ್ನೆಗೆ ಬಾರಿಸಿದ್ದಾರೆ.

ಖುಷಿ ಹೇಳಿದ್ದಿಷ್ಟು: ಆಗ ರಾತ್ರಿ 2.30ರ ಸಮಯ. ನಾನು ನಿದ್ದೆಯಲ್ಲಿದೆ. ನನ್ನ ರೂಮಿಗೆ ಬಂದ ಹುಡುಗ ನನ್ನ ಮೈಮೇಲೆ ಕೈಯಾಡಿಸಿದ. ನನಗೆ ಎಚ್ಚರವಾಯಿತು. ಹುಡುಗನನ್ನು ಕಂಡು ಗಾಬರಿಗೊಂಡು ಹೋಟೆಲ್ ಮ್ಯಾನೇಜ್ಮೆಂಟ್ ಕರೆದು ಸಹಾಯ ಬೇಡಿದೆ. ನನಗೆ ನೆರವು ಸಿಗುವಷ್ಟರಲ್ಲಿ ಹುಡುಗ ಪರಾರಿಯಾಗಿದ್ದ.ಬೆಳಗ್ಗೆ ಹೋಟೆಲ್ ಸಿಬ್ಬಂದಿ ಮುಂದೆ ಹುಡುಗ ತನ್ನ ತಪ್ಪೊಪ್ಪಿಕೊಂಡಿದ್ದಾನೆ ಎಂದಿದ್ದಾರೆ.

Khushi Mukherjee

ಹೋಟೆಲ್ ಮ್ಯಾನೇಜ್ಮೆಂಟ್: ನಟಿ ಹೇಳುವುದೆಲ್ಲ ಸುಳ್ಳು, ಆಕೆ ಚೆನ್ನಾಗಿ ಕುಡಿದು ಮೈಮೇಲೆ ಪ್ರಜ್ಞೆ ಇಲ್ಲದ್ದಂತೆ ನೆಲದ ಮೇಲೆ ಬಿದ್ದಿದ್ದರು. ಆಗ ಇದೇ ಹುಡುಗ ಅವರನ್ನು ಅವರ ರೂಮಿಗೆ ಕರೆದುಕೊಂಡು ಹೋಗಿ ಬಿಟ್ಟು ಬಂದಿದ್ದಾನೆ. ಸುಳ್ಳು ಹೇಳಿ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುವ ಮೊದಲು ಪ್ರಜ್ಞೆಯಿಂದ ಮಾತನಾಡುವುದನ್ನು ಕಲಿಯಲಿ ಎಂದು ಭೋಪಾಲ್ ನ ಎಂಪಿನಗರದ ಅಮರ್ ವಿಲಾಸ್ ಹೋಟೆಲ್ ಮ್ಯಾನೇಜರ್ ಅಬ್ದುಲ್ ಜಮೀರ್ ತಿರುಗೇಟು ನೀಡಿದ್ದಾರೆ.

ಐಪಿಸಿ ಸೆಕ್ಷನ್ 354 ಹಾಗೂ 456 ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೋಟೆಲ್ ನ ಕಾರಿಡಾರ್, ನಟಿ ತಂಗಿದ್ದ ರೂಮ್ ನಂಬರ್ 602ರ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುವಂತೆ ಹೋಟೆಲ್ ಸಿಬ್ಬಂದಿಗೆ ಸೂಚಿಸಿದ್ದಾರೆ. ಈ ಮಧ್ಯೆ ಲೈವ್ ಪೊಗ್ರಾಂ ನಲ್ಲಿ ಹುಡುಗ ನೀಡಿದ ವ್ಯತಿರಿಕ್ತ ಹೇಳಿಕೆ, ನಟಿ ಸಿಟ್ಟಿಗೆದ್ದು ಆತನಿಗೆ ಬಾರಿಸಿದ್ದು ಎಲ್ಲವನ್ನು ಪೊಲೀಸರು ಪರಿಗಣಿಸುತ್ತಿದ್ದಾರೆ.

ಈ ನಡುವೆ ಹೋಟೆಲ್ ಮ್ಯಾನೇಜ್ಮೆಂಟ್ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡುತ್ತೇನೆ. ನನ್ನ ವಕೀಲರ ಸಲಹೆ ಮೇರೆಗೆ ಮೊಕದ್ದಮೆ ಹೂಡುತ್ತೇನೆ. ಹೋಟೆಲ್ ನ ಮ್ಯಾನೇಜ್ಮೆಂಟ್ ಬಹಿರಂಗ ಕ್ಷಮೆಯಾಚಿಸಬೇಕು ಎಂದು ನಟಿ ಖುಷಿ ಆಗ್ರಹಿಸಿದ್ದಾರೆ.

ತೆಲುಗಿನಲ್ಲಿ ಪೂರಿ ಜಗನ್ನಾಥ್ ನಿರ್ದೇಶನದ ಚಿತ್ರವೊಂದರಲ್ಲಿ ನಟಿಸಿರುವ ಖುಷಿ ಭೋಪಾಲ್ ನಲ್ಲಿ ಹಿಂದಿ ಚಿತ್ರದ ಚಿತ್ರೀಕರಣಕ್ಕಾಗಿ ಬಂದಿದ್ದಾಗಾ ಈ ಘಟನೆ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+