ಹೆಣ್ಣುಮಗು ಎಂಬ ಕಾರಣಕ್ಕೆ ಕ್ರಿಮಿನಾಶಕ ಹಾಕಿ ತಾಯಿಯೇ ಕೊಂದಳು!

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada
ಹೈದರಾಬಾದ್, ಫೆಬ್ರವರಿ 14: ತೆಲಂಗಾಣದಲ್ಲಿ ಮಹಿಳೆಯೊಬ್ಬಳು ಕ್ರಿಮಿನಾಶಕ ಬೆರೆಸಿದ ಹಾಲು ಕುಡಿಸಿ, ತನ್ನ ನವಜಾತ ಶಿಶುವನ್ನು ಕೊಂದಿದ್ದಾಳೆ. ಇನ್ನೊಂದು ಹೆಣ್ಣು ಮಗು ಆದರೆ ವಿಚ್ಛೇದನ ಕೊಡ್ತೀನಿ ಎಂದು ಪತಿ ಹೇಳಿದ ಕಾರಣಕ್ಕೆ ಅ ಮಹಿಳೆ ಈ ಕೃತ್ಯ ಎಸಗಿದ್ದಾಳೆ. ಸೋಮವಾರ ಈ ಪ್ರಕರಣ ಬೆಳಕಿಗೆ ಬಂದ ಮೇಲೆ ನಾಗಮಣಿ ಹಾಗೂ ಆಕೆ ಪತಿ ರಾಮವತ್ ಜಯರಾಮ್ ನನ್ನು ಬಂಧಿಸಿದ್ದಾರೆ.

ನಲ್ಗೊಂಡ ಜಿಲ್ಲೆಯ ದೇವರಕೊಂಡ ಬುಡಕಟ್ಟು ಪ್ರದೇಶದ ಪದ್ಮಾವತಿಯಲ್ಲಿ ನಾಗಮಣಿ ವಾಸವಿದ್ದಾಳೆ. ಈ ತಿಂಗಳು ಹೆಣ್ಣುಮಗುವಿಗೆ ಆಕೆ ಜನ್ಮ ನೀಡಿದ್ದಳು. ನಾಲ್ಕು ದಿನಗಳ ಕಾಲ ಜೀವನ್ಮರಣದ ಹೋರಾಟ ನಡೆಸಿ, ಫೆಬ್ರವರಿ 9ರಂದು ದೇವರಕೊಂಡ ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿತ್ತು.[ಬೆಂಗಳೂರಿನಲ್ಲಿ ಚರ್ಚಿನ ಮುಂದೆಯೇ ಕೊಚ್ಚಿಕೊಂದರು]

Telangana Woman Allegedly Kills Newborn Girl

ಮಗು ಸಾವಿನ ಕಾರಣದ ಬಗ್ಗೆ ವೈದ್ಯರು ಅನುಮಾನ ವ್ಯಕ್ತಪಡಿಸಿ, ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ವೇಳೆ ಗೊತ್ತಾಗಿದ್ದೇನೆಂದರೆ, ಇನ್ನೊಂದು ಹೆಣ್ಣುಮಗು ಆದರೆ ವಿಚ್ಛೇದನ ನೀಡಿ, ಮತ್ತೊಂದು ಮದುವೆ ಆಗುವುದಾಗಿ ಆ ಮಹಿಳೆಯ ಪತಿ ಬೆದರಿಕೆ ಹಾಕಿದ್ದ. ಈ ದಂಪತಿಗೆ ಇದು ಮೂರನೇ ಹೆಣ್ಣುಮಗುವಾಗಿತ್ತು.[ಎಸ್ಪಿ ಶಾಸಕನ ಮೇಲೆ ಅತ್ಯಾಚಾರ ಆರೋಪ ಮಾಡಿದ್ದ ಮಹಿಳೆ ಶವ ಪತ್ತೆ]

ದೊಡ್ಡ ಮಗುವನ್ನು ಆ ಮಹಿಳೆಯ ಅತ್ತೆ-ಮಾವ ನೋಡಿಕೊಳ್ಳುತ್ತಿದ್ದಾರೆ. ಅದಕ್ಕೆ ಈಗ ಐದು ವರ್ಷ. ಎರಡನೇ ಮಗು ಹುಟ್ಟಿದ ನಂತರ ಮೃತಪಟ್ಟಿತ್ತು. ಮೂರನೆಯದು ಹೆಣ್ಣುಮಗುವಾದ್ದರಿಂದ ಆ ಮಹಿಳೆ ಇಂಥ ಕೃತ್ಯ ಎಸಗಿದ್ದಾಳೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a gruesome incident, a tribal woman in Telangana killed her newborn girl child by feeding milk laced with pesticides as her husband had threatened to divorce her if she delivered another daughter.
Please Wait while comments are loading...