Get Updates
Get notified of breaking news, exclusive insights, and must-see stories!

Telangana Poll: ಪವನ್‌ ಕಲ್ಯಾಣ್‌ಗೆ 'ಹಾಯ್' ಎಂದ ಬಿಜೆಪಿಗೆ 'ಗುಡ್‌ ಬೈ' ಹೇಳ್ತಾರಾ 'ಲೇಡಿ ಸೂಪರ್‌ ಸ್ಟಾರ್'?

ಹೈದರಾಬಾದ್, ನವೆಂಬರ್ 14: ಬಿಜೆಪಿಯಲ್ಲಿ ತಮಗೆ ಟಿಕೆಟ್ ಸಿಗದ ಕಾರಣ ನಟಿ, ಹಿರಿಯ ನಾಯಕಿ ವಿಜಯಶಾಂತಿಯವರು (Vijayashanthi) ಪುನಃ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗಿದೆ. ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆಗೆ ವಿಜಯಶಾಂತಿ ಅವರಿಗೆ ಟಿಕೆಟ್ ಸಿಗಲಿಲ್ಲ. ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಅವರ ಹೆಸರನ್ನು ಬಿಜೆಪಿ ಹಾಕದೇ ಅವರನ್ನು ಕೈಬಿಟ್ಟಿದೆ.

ಬಿಜೆಪಿಯಲ್ಲಿಯೇ ಅವರು ರಾಜಕೀಯ ಜೀವನ ಶುರು ಮಾಡಿದರೂ ಸಹಿತ ಅವರು ಈ ಹಿಂದೆಯೂ ಬಿಜೆಪಿಯಿಂದ ಕೆಲಕಾಲ ದೂರ ಉಳಿದಿದ್ದರು. 2020 ರಲ್ಲಿ ಮತ್ತೆ ಬಿಜೆಪಿಗೆ ಸೇರ್ಪಡೆ ಆಗಿದ್ದರು. ಪಕ್ಷ ಸಂಘಟನೆಯಲ್ಲಿ ಅವರ ಪಾತ್ರ ಇಲ್ಲ ಎಂದು ಈ ಚುನಾವಣೆಯಲ್ಲಿ ಬಿಜೆಪಿ ಅವರಿಗೆ ಮಣೆ ಹಾಕಿಲ್ಲ. ಹಾಗಾಗಿಗ ತಮಗೆ ಪಕ್ಷದಲ್ಲಿ ಮಣ್ಣನೆ ಸಿಕ್ಕಿಲ್ಲ ಎಂಬ ಕಾರಣಕ್ಕೆ ವಿಜಯಶಾಂತಿ ಅವರು ಕಾಂಗ್ರೆಸ್‌ ಸೇರಲಿದ್ದಾರೆ ಎನ್ನಲಾಗಿದೆ.

telangana-poll-vijayashanti-eyes-on-congress

ಮಹಿಳಾ ಪ್ರಧಾನ ಚಿತ್ರಗಳಲ್ಲಿ ಧಿಟ್ಟ ನಾಯಕಿಯಾಗಿ, ಅಭಿಮಾನಿಗಳಿಗೆ 'ಲೇಡಿ ಅಮಿತಾಭ್ ಬಚ್ಚನ್' ಮತ್ತು 'ರಾಮುಲಮ್ಮ' ಎಂದು ಕರೆಸಿಕೊಳ್ಳುವ ಸ್ಟಾರ್ ರಾಜಕಾರಣಿ ಆಗಿದ್ದಾರೆ. ಇದೀಗ ಇವರ ರಾಜಕೀಯ ಭವಿಷ್ಯದ ಬಗ್ಗೆ ಕುತೂಹಲ ಮೂಡಿದೆ.

ಕಳೆದ ನವೆಂಬರ್ 1 ರಂದು ಅವರು X ನಲ್ಲಿ ಹಾಕಿದ್ದ ಪೋಸ್ಟ್, ಡಿಪಿ ಅವರು ಬಿಜೆಪಿ ತೊರೆಯವ ಕುರಿತು ಸೂಚಿಸುತ್ತವೆ. ಅವರ ಡಿಪಿ ಫೋಟೊದಲ್ಲಿ ಪ್ರಧಾನಿ ಮೋದಿ ಮಾಯವಾಗಿದೆ.

ವಿಜಯಶಾಂತಿ ಕಾಂಗ್ರೆಸ್ ಸೇರುವ ಸುಳಿವು ಇಲ್ಲಿದೆ

ತಾವು ಹಿಂದುತ್ವ ಪರ ಎನ್ನುವ ವಿಜಯಶಾಂತಿ ಅವರು ಇದೀಗ 'ಬಿಆರ್‌ಎಸ್ ದುಷ್ಕೃತ್ಯಗಳಿಂದ ತೆಲಂಗಾಣ ಜನರನ್ನು ರಕ್ಷಿಸಲು ಕಾಂಗ್ರೆಸ್ ಹೋರಾಡಬೇಕು ಎಂದು ಹೇಳಿದ್ದಾರೆ. ಇದೆಲ್ಲವು ಅವರು ಕಾಂಗ್ರೆಸ್ ಸೇರುವ ಸುಳಿವು ನೀಡುತ್ತಿವೆ.

ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೋಸ್ಟ್ ಚರ್ಚೆಗೆ ಕಾರಣವಾಗಿದೆ. ವಿಜಯಶಾಂತಿ ಅವರು ತೆಲಂಗಾಣದಲ್ಲಿ ಕೆಸಿಆರ್ ಅವರ ದುಷ್ಟ ಆಡಳಿತ ವಿರುದ್ಧ ಹೋರಾಡಬೇಕಾಗಿದೆ ಎಂದು ಬರೆದಿದ್ದಾರೆ. ಇದಕ್ಕೆ ಅವರ ಅಭಿಮಾನಿಗಳು 1998 ರಿಂದ ರಾಜಕೀಯ ನಾಯಕನಾಗಿ ಬಿಜೆಪಿಯನ್ನು ನಂಬಿರುವ ಮತ್ತು ದಕ್ಷಿಣ ಭಾರತ ಮತ್ತು ಇತರ ಹಲವು ರಾಜ್ಯಗಳಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿದ ನಾಯಕನಾಗಿ (ನಾನು) ಬಿಜೆಪಿಯೊಂದಿಗೆ ನಿಲ್ಲಬೇಕೆಂದು ಕೆಲವು ಅಭಿಮಾನಿಗಳು ಒತ್ತಾಯಿಸಿದ್ದಾರೆ.

telangana-poll-vijayashanti-eyes-on-congress

ರಾಜಕೀಯದಲ್ಲಿ ದ್ವಿಪಾತ್ರ ಅಸಾಧ್ಯ

ಪೊಲೀಸ್ ಲಾಕಪ್, ರೌಡಿ ದರ್ಬಾರ್, ನಾಯುಡಮ್ಮನ ಲೆಕ್ಕ ಮುಂತಾದ ಚಿತ್ರಗಳಲ್ಲಿ ದ್ವಿಪಾತ್ರ ನಿರ್ವಃಹಿಸಿರುವ ವಿಜಶಯಶಾಂತಿ ಅವರು ಅದರನ್ನು ರಾಜಕೀಯದಲ್ಲಿ ಮಾಡಲು ಸಾಧ್ಯವಿಲ್ಲ ಎಂದು ಜೈಶ್ರೀರಾಮ್ ಎಂದು ಕಾಮೆಂಟ್ ಮಾಡಿದ್ದಾರೆ.

ವಿಜಯಶಾಂತಿ 1998 ರಲ್ಲಿ ಬಿಜೆಪಿಗೆ ಸೇರಿದ್ದರು. ಸಂಯುಕ್ತ ಆಂಧ್ರ ಪ್ರದೇಶ ಬಿಜೆಪಿ ಘಟಕದ ಮಹಿಳಾ ವಿಭಾಗದ ಮುಖ್ಯಸ್ಥೆಯಾಗಿ ನೇಮಕವಾದರು. ನಂತರ ಅವರು 2009 ರಲ್ಲಿ ಪಕ್ಷ ತೊರೆದರು, ಬಿಆರ್ಎಸ್ (ಆಗ ಟಿಆರ್ಎಸ್) ಪಕ್ಷ ಸೇರಿದರು. ಪಕ್ಷದ ಮುಖ್ಯಸ್ಥ ಕೆ ಚಂದ್ರಶೇಖರ ರಾವ್ (ಕೆಸಿಆರ್) ಅವರೊಂದಿಗೆ ಗುರುತಿಸಿಕೊಂಡಿದ್ದರು.

ಇದಾದ ಬಳಿಕ ಕೆಸಿಆರ್ ಜೊತೆಗಿನ ಭಿನ್ನಾಭಿಪ್ರಾಯದಿಂದ 2014 ರಲ್ಲಿ ಆ ಪಕ್ಷವನ್ನೂ ತೊರೆದು ಕಾಂಗ್ರೆಸ್ ಸೇರಿದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು. 2020ರಲ್ಲಿ ವಿಜಯಶಾಂತಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಮರಳಿದರು.

ವಿಜಯಶಾಂತಿಯದ್ದು ದ್ವಂದ್ವ ರಾಜಕೀಯವೇ?

ಇದೆಲ್ಲ ನೋಡಿದರೆ ವಿಜಯಶಾಂತಿ ಅವರು ದ್ವಂದ್ವಾರ್ಥ ರಾಜಕೀಯ ನಂಬಿಕೆ ಹೊಂದಿರುವಂತೆ ಕಾಣುತ್ತದೆ. ತಾನೂ ಹಿಂದೂ ಎನ್ನುವ ಅವರು ಬಿಜೆಪಿ ತೊರೆದು ಹಿಂದೂ ವಿರೋಧ ನಿಲುವಿನ ಪಕ್ಷದವರನ್ನು ಬೆಂಬಲಿಸಿದ್ದಾರೆ. ಇತ್ತೀಚೆಗೆ ಪ್ರಧಾನಿ ಮೋದಿ ವಿರುದ್ಧವು ಕಟುವಾಗಿ ಟೀಕಿಸಿದ್ದರು. ಇದೆಲ್ಲ ನೋಡಿದರೆ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬುದು ದಿನೇ ದಿನೆ ಖಚಿತವಾಗತೊಡಗಿದೆ.

ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು ಬಿಆರ್‌ಎಸ್ ಎರಡೂ ನಾಯಕರು ವಿಜಯಶಾಂತಿ ಅವರೊಂದಿಗೆ ಕೆಲವು ದಿನಗಳು ಸಂಪರ್ಕ ಹೊಂದಿದ್ದವು. ತಮ್ಮ ಪಕ್ಷಗಳಿಗೆ ಸೇರುವಂತೆ ಆಹ್ವಾನಿಸಿದ್ದರು. ಆದರೆ ಈಬಗ್ಗೆ ಏನೂ ಹೇಳದ ವಿಜಯಶಾಂತಿ ಅವರು ರಾಹುಲ್ ಗಾಂಧಿ ನೇತೃತ್ವದ ಪ್ರಚಾರ ಕಾರ್ಯದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ ಎಂದು ವರದಿ ಆಗಿತ್ತು.

ಇದೀಗ ವಿಜಯಶಾಂತಿ ಕಾಂಗ್ರೆಸ್‌ಗೆ ಸೇರುವುದು ಪಕ್ಕಾ ಆಗುತ್ತಿದ್ದಂತೆ ಕಾಂಗ್ರೆಸ್ ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಅವರ ಹೆಸರು ಸೇರಿಸುವ ಸಾಧ್ಯತೆಗಳು ಇವೆ. ಸದ್ಯ ಬಿಜೆಪಿಯಲ್ಲಿನ ಬಂಡಾಯ, ಕಾಂಗ್ರೆಸ್ ಸೇರ್ಪಡೆ ಕುರಿತು ಅವರು ಕೈಗೊಳ್ಳುವ ನಿರ್ಧಾರಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+