ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರೀಕ್ಷೆಗೆ ತೆರಳಿದ ಬಾಣಂತಿ,ಮಗುವಿನ ಆರೈಕೆಯಲ್ಲಿ ಪೊಲೀಸ್:ವೈರಲ್ ಚಿತ್ರ

|
Google Oneindia Kannada News

ಹೈದರಾಬಾದ್, ಅಕ್ಟೋಬರ್ 01: 'ಬಾಣಂತಿಯೊಬ್ಬರು ಪರೀಕ್ಷೆಗೆ ತೆರಳಿದ್ದ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರದ ಹೊರಗಡೆ ಅಳುತ್ತಿದ್ದ ಮಗುವನ್ನು ಪೊಲೀಸ್ ಪೇದೆಯೊಬ್ಬರು ಸಂತೈಸುತ್ತಿರುವ ಮನಮಿಡಿವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತೆಲಂಗಾಣದ ಮಹ್ಬೂಬ್ ನಗರ ಜ್ಯೂನಿಯರ್ ಕಾಲೇಜಿನಲ್ಲಿ ಮಹಿಳೆಯೊಬ್ಬರು ಪರೀಕ್ಷೆ ಬರೆಯುತ್ತಿದ್ದರು. ಈ ಸಂದರ್ಭದಲ್ಲಿ ಅವರ ನಾಲ್ಕು ತಿಂಗಳ ಮಗುವನ್ನು ನೋಡಿಕೊಳ್ಳಲು ಮಹಿಳೆಯ ಸಂಬಂಧಿಯೊಬ್ಬರು ಜೊತೆಗಿದ್ದರು. ತಾಯಿ ಪರೀಕ್ಷೆ ಬರೆಯಲೆಂದು ಪರೀಕ್ಷಾ ಕೊಠಡಿಗೆ ತೆರಳುತ್ತಿದ್ದಂತೆಯೇ ಮಗು ಅಳುವುದಕ್ಕೆ ಆರಂಭಿಸಿತ್ತು.

ಬೆಳಗಾವಿಯ ದಿವಾನನ ಮಗಳು, ಬೆಂಗಳೂರಿನ ಬಿಸಿಲ ಝಳದಲ್ಲಿ ಕರಗಿದ ನೈಜ ಕತೆ!ಬೆಳಗಾವಿಯ ದಿವಾನನ ಮಗಳು, ಬೆಂಗಳೂರಿನ ಬಿಸಿಲ ಝಳದಲ್ಲಿ ಕರಗಿದ ನೈಜ ಕತೆ!

ಮಗುವನ್ನು ನೋಡಿಕೊಳ್ಳುವುದಕ್ಕೆಂದು ಬಂದ ಸಂಬಂಧಿಗೂ ಅದನ್ನು ಸಂತೈಸುವುದಕ್ಕೆ ಸಾಧ್ಯವಾಗಿಲ್ಲ. ಈ ಸಂದರ್ಭದಲ್ಲಿ ಪರೀಕ್ಷೆ ಕೇಂದ್ರದ ಹೊರಗೆ ಗಸ್ತು ತಿರುಗುತ್ತಿದ್ದ ಮುಜೀದ್ ಉರ್ ರೆಹ್ಮಾನ್ ಎಂಬ ಹಿರಿಯ ಪೊಲೀಸ್ ಪೇದೆ, ಮಗುವನ್ನು ಎತ್ತಿಕೊಂಡು ಸಂತೈಸಿದ್ದಾರೆ. ಅವವರು ಅತ್ಯಂತ ವಾತ್ಸಲ್ಯದಿಂದ ಮಗುವನ್ನು ಸಂತೈಸುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Telangana Police takes care of a baby, as infants mother writing her examinations.

ಮಾನವೀಯತೆ ಮೆರೆದ ಪೇದೆ ಅರ್ಚನಾಗೆ ಟ್ವಿಟ್ಟರ್‌ನಲ್ಲಿ ಪ್ರಶಂಸೆಯ ಮಹಾಪೂರಮಾನವೀಯತೆ ಮೆರೆದ ಪೇದೆ ಅರ್ಚನಾಗೆ ಟ್ವಿಟ್ಟರ್‌ನಲ್ಲಿ ಪ್ರಶಂಸೆಯ ಮಹಾಪೂರ

ಐಪಿಎಸ್ ಅಧಿಕಾರಿ ರೆಮಾ ರಾಜೇಶ್ವರಿ ಎಂಬುವವರು ಈ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.

3 ತಿಂಗಳ ಮುದ್ದು ಮಗಳ ಜೊತೆ ವಿಶ್ವಸಂಸ್ಥೆಗೆ ಬಂದ ಜೆಸಿಂಡ!3 ತಿಂಗಳ ಮುದ್ದು ಮಗಳ ಜೊತೆ ವಿಶ್ವಸಂಸ್ಥೆಗೆ ಬಂದ ಜೆಸಿಂಡ!

ಮಕ್ಕಳಿಗೆ ಪೊಲೀಸರನ್ನು ತೋರಿಸಿಸ ಹೆದರಿಸುವ ಬಗ್ಗೆ ಕೇಳಿದ್ದೇವೆ. ಆದರೆ ಸ್ವತಃ ಪೊಲೀಸರೇ ಬಂದು ಮಕ್ಕಳನ್ನು ಸಂತೈಸಿ ಮಾನವೀಯತೆ ಮೆರೆವ, ಮಾತೃವಾತ್ಸಲ್ಯ ತೋರುವ ಇಂಥ ಘಟನೆಗಳು ವಿರಳಾತಿ ವಿರಳವೇ ಸರಿ.

English summary
As a goodwill gesture, a Telangana police officer takes care of a baby while baby's mother writing her exams.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X