ವಿದ್ಯಾರ್ಥಿನಿ ಜತೆಗೆ ಆಕ್ಷೇಪಾರ್ಹ ರೀತಿ ಫೋಟೋ ತೆಗೆಸಿಕೊಂಡ ಶಿಕ್ಷಕ

ಗುವಾಹತಿ, ಆಗಸ್ಟ್ 7: ವಿದ್ಯಾರ್ಥಿನಿಯೊಂದಿಗಿನ ಆಕ್ಷೇಪಾರ್ಹ ರೀತಿಯ ಫೋಟೋವನ್ನು ಆನ್ ಲೈನ್ ನಲ್ಲಿ ಹಾಕಿದ ಶಿಕ್ಷಕನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಫೈಜುದ್ದೀನ್ ಲಸ್ಕರ್ ಬಂಧಿತ. ವಿದ್ಯಾರ್ಥಿನಿಯ ಎದೆಯನ್ನು ಬಳಸಿ ಆತನ ಕೈಗಳು ಇವೆ.

ಅಸ್ಸಾಂನ ಹೈಲಾಕಂಡಿ ಜಿಲ್ಲೆಯ ಮಾಡೆಲ್ ಹೈಸ್ಕೂಲ್ ನ ಶಿಕ್ಷಕನಾಗಿರುವ ಆತ ವಿದ್ಯಾರ್ಥಿನಿಯರ ಜತೆಗೆ ಆಕ್ಷೇಪಾರ್ಹ ಭಂಗಿಯ ಫೋಟೋಗಳನ್ನು ತೆಗೆದುಕೊಂಡಿದ್ದಾನೆ. ಆ ನಂತರ ಅವುಗಳನ್ನು ಆನ್ ಲೈನ್ ನಲ್ಲಿ ಹಾಕಿದ್ದಾನೆ.

Teacher arrested in Assam for posting 'obscene' photographs with student

ಈ ಶಿಕ್ಷಕನ ಅಸಭ್ಯ ವರ್ತನೆಗೆ ಅಸ್ಸಾಂನಲ್ಲಿ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಆತನ ವಿರುದ್ಧ ಸರಕಾರವು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿವೆ.

"ಈ ರೀತಿಯ ನಡವಳಿಕೆ ಸಹಿಸುವುದಕ್ಕೆ ಸಾಧ್ಯವೇ ಇಲ್ಲ. ಈ ಪ್ರಕರಣದ ಬಗ್ಗೆ ಸರಕಾರವಾಗಲೀ, ಶಿಕ್ಷಣ ಇಲಾಖೆಯಾಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದು ಹೆಣ್ಣುಮಕ್ಕಳ ಶಿಕ್ಷಣವನ್ನೇ ನಿರುತ್ತೇಜನಗೊಳಿಸುತ್ತದೆ. ಈ ಬಗ್ಗೆ ಕೇಂದ್ರ ಕೂಡ ಪ್ರತಿಕ್ರಿಯೆ ನೀಡಿಲ್ಲ. ಭೇಟಿ ಬಚಾವೋ ಭೇಟಿ ಪಡಾವೋ ಅನ್ನೋದು ಬರೀ ಘೋಷವಾಕ್ಯ ಅನ್ನಿಸುತ್ತದೆ" ಎಂದು ವಿರೋಧ ಪಕ್ಷದ ಮುಖಂಡರಾದ ದೇಬಬ್ರತ ಸೈಕಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ, ಈ ಫೋಟೋವನ್ನು ತೆಗೆದವರು ಯಾರು ಎಂದು ಗೊತ್ತಾಗಿಲ್ಲ. ಶಾಲೆ ಆವರಣದಲ್ಲೇ ಫೋಟೋ ತೆಗೆದಿದ್ದು, ವಿದ್ಯಾರ್ಥಿನಿ ಜತೆಗೆ ಶಿಕ್ಷಕ ಫೋಟೋ ತೆಗೆಸಿಕೊಂಡಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+