Real Estate: ರಿಯಲ್ ಎಸ್ಟೇಟ್ ಉದ್ಯಮಕ್ಕೆ ಭರ್ಜರಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025-2026ರ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದಾರೆ. ಬಜೆಟ್‌ನಲ್ಲಿ ಮಧ್ಯಮವರ್ಗಕ್ಕೆ ಈ ಬಾರಿ ರಿಲೀಫ್ ಸಿಕ್ಕಿದೆ. ಮುಖ್ಯವಾಗಿ ಆದಾಯ ತೆರಿಗೆ ವಿಚಾರದಲ್ಲಿ ಮಧ್ಯಮ ವರ್ಗಕ್ಕೆ ದೊಡ್ಡ ಖುಷಿ ಸುದ್ದಿ ಸಿಕ್ಕಿದೆ. ಅದರ ಜೊತೆಗೆ ತೆರಿಗೆ ವಿಚಾರದಲ್ಲೂ ಕೇಂದ್ರ ಒಂದಷ್ಟು ವಿನಾಯಿತಿಗಳನ್ನು ಕೊಟ್ಟಿದ್ದು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಉತ್ತೇಜನ ಕೊಡಲಿದೆ.
ಟಿಡಿಎಸ್ ಮತ್ತು ಟಿಸಿಎಸ್‌ನಲ್ಲಿ ವ್ಯಾಪಕ ಬದಲಾವಣೆ ತರುವುದಾಗಿ ಘೋಷಣೆ ಮಾಡಿದ್ದು ಲಕ್ಷಾಂತರ ತೆರಿಗೆದಾರರ ಮೇಲಿನ ತೆರಿಗೆ ಹೊರೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಬಾಡಿಗೆ ಮೂಲದ ಗಳಿಸುವ ಅದಾಯದ ಮೇಲಿನ ತೆರಿಗೆ ಪರಿಷ್ಕರಣೆ ಮಾಡಿದ್ದು ಮಧ್ಯಮ ವರ್ಗದವರಿಗೆ ಖುಷಿ ತಂದಿದೆ.

ಬಾಡಿಗೆ ಮೇಲಿನ ವಾರ್ಷಿಕ ಟಿಡಿಎಸ್ ಮಿತಿಯನ್ನು 2.40 ಲಕ್ಷ ರೂಪಾಯಿಗಳಿಂದ 6 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಇದರಿಂದ ಬಾಡಿಗೆದಾರರು ಮತ್ತು ಮನೆ ಮಾಲಿಕರ ಮೇಲಿನ ಹೊರೆ ಕಡಿಮೆಯಾಗಲಿದೆ. ಮತ್ತು ಹೂಡಿಕೆಯನ್ನು ಹೆಚ್ಚಿಸುವ ಜೊತೆಗೆ, ಬಾಡಿಗೆ ಮನೆ ಮಾರುಕಟ್ಟೆಗೆ ಹೆಚ್ಚಿನ ಉತ್ತೇಜನ ಕೊಡುತ್ತದೆ.
ಮನೆ ಮಾಲಿಕರಿಗೆ ಗುಡ್‌ನ್ಯೂಸ್
ಬಜೆಟ್‌ನಲ್ಲಿ ಮನೆ ಮಾಲೀಕರಿಗೆ ಶುಭ ಸುದ್ದಿ ಸಿಕ್ಕಿದೆ. ತೆರಿಗೆದಾರರು ಈಗ ಒಂದು ಮನೆ ಬದಲಾಗಿ ಎರಡು ಸ್ವಂತ ಮನೆಗಳಿಗೆ ಶೂನ್ಯ ಮೌಲ್ಯಮಾಪನ ಪಡೆಯಬಹುದು. ಅಂದರೆ ಈ ಮೊದಲು ಎರಡನೇ ಮನೆ ಹೊಂದಿದ್ದರೆ ತೆರಿಗೆ ವಿಧಿಸಲಾಗುತ್ತಿತ್ತು ಈಗ ಎರಡನೇ ಮನೆಗೂ ತೆರಿಗೆ ವಿನಾಯಿತಿ ಸಿಕ್ಕಿದೆ.
ಇದರಿಂದ ಎರಡನೇ ಮನೆಯಿಂದ ಬರುವ ಬಾಡಿಗೆ ಆದಾಯದ ಮೇಲಿನ ತೆರಿಗೆಯನ್ನು ತೆಗೆದುಹಾಕಲಿದ್ದು ರಿಯಲ್ ಎಸ್ಟೇಟ್‌ಗೆ ಹೂಡಿಕೆಯನ್ನು ಉತ್ತೇಜಿಸುತ್ತದೆ. ರಿಯಲ್ ಎಸ್ಟೇಟ್ ಮೇಲೆ ಬಂಡವಾಳ ಹೂಡಿಕೆಗೆ ಉತ್ತೇಜನ ಸಿಗಲಿದ್ದು, 2 ಮತ್ತು 3ನೇ ಶ್ರೇಣಿಯ ನಗರಗಳಲ್ಲಿ 2ನೇ ಮನೆ ಖರೀದಿದಾರರು ಹೂಡಿಕೆಗೆ ಹೆಚ್ಚಿನ ಆಸಕ್ತಿ ತೋರಿಸಲಿದ್ದಾರೆ.
ತೆರಿಗೆಯನ್ನು ಕಡಿಮೆ ಮಾಡುವ ಮೂಲಕ ನವೀಕರಿಸಿದ ರಿಟರ್ನ್‌ಗಳನ್ನು ಸಲ್ಲಿಸಲು ಸಮಯ ಮಿತಿಯನ್ನು ವಿಸ್ತರಿಸುವುದಾಗಿ ಸೀತಾರಾಮನ್ ಘೋಷಿಸಿದ್ದಾರೆ. ತೆರಿಗೆದಾರರು ಯಾವುದೇ ಮೌಲ್ಯಮಾಪನ ವರ್ಷಕ್ಕೆ ತಮ್ಮ ರಿಟರ್ನ್‌ಗಳನ್ನು ಸರಿಪಡಿಸಲು ಅಥವಾ ನವೀಕರಿಸಲು ಈಗ ನಾಲ್ಕು ವರ್ಷಗಳ ಸಮಯ ಹೊಂದಿರುತ್ತಾರೆ, ಈ ಮೊದಲು ಇದು ಎರಡು ವರ್ಷಗಳಾಗಿತ್ತು.












Click it and Unblock the Notifications