ರಾಜಕೀಯ ಪಕ್ಷಗಳಿಗೆ ಆದಾಯ ತೆರಿಗೆ ವಿನಾಯಿತಿ ಏಕೆ? ಹೇಗೆ?

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 17: ಕಪ್ಪುಹಣ ನಿಯಂತ್ರಣಕ್ಕಾಗಿ ನರೇಂದ್ರ ಮೋದಿ ಸರ್ಕಾರ ಮತ್ತೊಂದು ಮಹತ್ವದ ಆದೇಶ ಹೊರಡಿಸಿದೆ. ಹಳೆ ನೋಟುಗಳನ್ನು ಬ್ಯಾಂಕುಗಳಿಗೆ ಜಮೆ ಮಾಡುವ ರಾಜಕೀಯ ಪಕ್ಷಗಳಿಗೆ ಆದಾಯ ತೆರಿಗೆ ವಿನಾಯಿತಿ ನೀಡಲಾಗಿದೆ.

ನವೆಂಬರ್ 8 ರಿಂದ 500 ಹಾಗೂ 1,000 ಮುಖಬೆಲೆ ರುಪಾಯಿ ನೋಟುಗಳ ಬಳಕೆ ನಿಷೇಧ ಮಾಡಲಾಗಿದೆ. ಇದಾದ ಬಳಿಕ ಚುನಾವಣೆ ನಡೆಸಲು 'ಪಾರ್ಟಿ ಫಂಡ್' ಸಿಗದೆ ಒದ್ದಾಡುತ್ತಿದ್ದ ಪಕ್ಷಗಳಿಗೆ ಸೂಕ್ತ ಮಾರ್ಗವನ್ನು ಸರ್ಕಾರವೇ ಹಾಕಿಕೊಟ್ಟಿದೆ. ಅಕ್ರಮವಾಗಿ ಹಣ ದಾಸ್ತಾನು ಮಾಡಿಕೊಳ್ಳುವುದು, ಬೇನಾಮಿ ಖಾತೆಯಲ್ಲಿ ಭಾರಿ ಮೊತ್ತ ಠೇವಣಿ ಮಾಡುವುದನ್ನು ತಪ್ಪಿಸಲು ಸರಿ ಮಾರ್ಗದಲ್ಲೇ ದೇಣಿಗೆ ಪಡೆಯಲು ಅವಕಾಶ ನೀಡಲಾಗಿದೆ.

Tax exemptions to political parties subject to conditions, says government

ಈಗ ರಾಜಕೀಯ ಮುಖಂಡರು, ಸೂಕ್ತ ದಾಖಲಾತಿ ಹೊಂದುವ ಮೂಲಕ ಎಂದಿನಂತೆ ದೇಣಿಗೆ ಪಡೆಯಬಹುದಾಗಿದೆ ಎಂದು ಕಂದಾಯ ಕಾರ್ಯದರ್ಶಿ ಹಸ್ಮುಖ್ ಆಧಿಯಾ ಹೇಳಿದ್ದಾರೆ.

ರಾಜಕೀಯ ಪಕ್ಷಗಳು ಹಳೆ ನೋಟುಗಳನ್ನು ಬ್ಯಾಂಕಿಗೆ ಜಮೆ ಮಾಡಬಹುದಾಗಿದ್ದು, ವೈಯಕ್ತಿಕ ದೇಣಿಗೆ ಮಿತಿ 20, 000 ರುಪಾಯಿ ಎಂದು ನಿಗದಿ ಪಡಿಸಲಾಗಿದೆ ಎಂದಿದ್ದಾರೆ.

ಈಗ ಇರುವ ಕಾನೂನಿನ ಪ್ರಕಾರ ಚೆಕ್ ಅಥವಾ ಡಿಡಿ ಮೂಲಕ 20 ಸಾವಿರ ರುಪಾಯಿ ಸಿಂಗಲ್ ಪೇಮೆಂಟ್ ನಲ್ಲೇ ಮಾಡಬಹುದಾಗಿದೆ.

ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 13 ಎ ಪ್ರಕಾರ ರಾಜಕೀಯ ಪಕ್ಷಗಳಿಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಆದರೆ, ವೈಯಕ್ತಿಕ ಠೇವಣಿದಾರರಿಗೆ ಮಿತಿ, ನಿರ್ಬಂಧ ಹೇರಲಾಗಿದೆ.

ಇನ್ನೊಂದೆಡೆ ವಾರ್ಷಿಕವಾಗಿ 2.5 ಲಕ್ಷ ಗೂ ಕಡಿಮೆ ಆದಾಯ ಹೊಂದಿರುವ ರೈತರು, ಆದಾಯ ಸ್ವಯಂ ಘೋಷಣೆ(ಅರ್ಜಿ 60) ಮಾಡಿಕೊಂಡು ಕೃಷಿ ಆದಾಯದಿಂದ ತೆರಿಗೆ ಮುಕ್ತರಾಗಬಹುದಾಗಿದೆ.(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Government on Friday said political parties depositing old 500 and 1,000 rupee notes in their accounts will be exempt from income tax provided the donations taken are below Rs 20,000 per individual and properly documented,
Please Wait while comments are loading...