ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಟಾಟಾ ಗ್ರೂಪ್‌ಗೆ ಏರ್ ಇಂಡಿಯಾ ಅಧಿಕೃತ ಹಸ್ತಾಂತರ

|
Google Oneindia Kannada News

ನವದೆಹಲಿ, ಜನವರಿ 27: ಭಾರತದ ಪ್ರತಿಷ್ಠಿತ ಏರ್ ಇಂಡಿಯಾ ಸಂಸ್ಥೆಯನ್ನು ಅಧಿಕೃತವಾಗಿ ಟಾಟಾ ಗ್ರೂಪ್‌ಗೆ ಹಸ್ತಾಂತರಿಸಲಾಗಿದೆ. ಟಾಟಾ ಗ್ರೂಪ್ ಕಂಪನಿಯ ಎನ್ ಚಂದ್ರಶೇಖರನ್ ಗುರುವಾರ ಕಂಪನಿ ಅಧಿಕೃತವಾಗಿ ಟಾಟಾ ಗ್ರೂಪ್ ಸುಪರ್ದಿಗೆ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ನಡೆಸಲಾಯಿತು.

ನವದೆಹಲಿಯ ಏರ್ ಇಂಡಿಯಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣೆ ಅಧಿಕಾರಿ ವಿಕ್ರಂ ದೇವ್ ದತ್ ಅವರನ್ನು ಎನ್ ಚಂದ್ರಶೇಖರ್ ಭೇಟಿ ಮಾಡಿದರು. ಇದಕ್ಕೂ ಮೊದಲ ಕೇಂದ್ರ ಸರ್ಕಾರದ ಕಾರ್ಯದರ್ಶಿ ರಾಜೀವ್ ಬನ್ಸಾಲ್ ಅವರು ಅಧಿಕೃತ ಹಸ್ತಾಂತರಕ್ಕಾಗಿ ವಿಮಾನಯಾನ ಸಂಸ್ಥೆ ತಲುಪಿದ್ದರು. ಇತ್ತೀಚೆಗಷ್ಟೇ ಅವರು ಏರ್ ಇಂಡಿಯಾದ CMD ಆಗಿ ವಿಕ್ರಮ್ ದೇವ್ ದತ್ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದರು.

ಗುರುವಾರ ಟಾಟಾ ಗ್ರೂಪ್ ಕಂಪನಿಯ ಎನ್ ಚಂದ್ರಶೇಖರನ್ ಅಧಿಕೃತ ಹಸ್ತಾಂತರಕ್ಕಾಗಿ ಏರ್ ಲೈನ್ಸ್ ಹೌಸ್ ತಲುಪಿದ್ದು, ಈ ವೇಳೆ ಏರ್ ಇಂಡಿಯಾವನ್ನು ಟಾಟಾ ಗ್ರೂಪ್‌ಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಸಲಾಯಿತು. ಕಳೆದ ವರ್ಷ ಸರ್ಕಾರ ಏರ್ ಇಂಡಿಯಾವನ್ನು ಟಾಟಾ ಗ್ರೂಪ್‌ನ ಹಿಡುವಳಿ ಕಂಪನಿಯ ಅಂಗಸಂಸ್ಥೆಯಾದ ಟಾಲೇಸ್ ಪ್ರೈವೇಟ್ ಲಿಮಿಟೆಡ್‌ಗೆ 18,000 ಕೋಟಿ ರೂಪಾಯಿಗಳಿಗೆ ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಮಾರಾಟ ಮಾಡಿತ್ತು.

Indian Govt to hand over Air India to Tata group today; N Chandrasekaran reaches Airlines House for the official handover

ಏರ್ ಇಂಡಿಯಾ ಸಿಬ್ಬಂದಿ ಹಣ ಪಾವತಿಗೆ ಒತ್ತಾಯ:

ಇಂಡಿಯನ್ ಪೈಲಟ್ಸ್ ಗಿಲ್ಡ್ (IPG) ಮತ್ತು ಇಂಡಿಯನ್ ಕಮರ್ಷಿಯಲ್ ಪೈಲಟ್ಸ್ ಅಸೋಸಿಯೇಷನ್ (ICPA) ಹಾಗೂ ಏರ್ ಇಂಡಿಯಾದ CMD ವಿಕ್ರಮ್ ದೇವ್ ದತ್ ಪೈಲಟ್‌ಗಳಿಗೆ ನೀಡಬೇಕಾದ ಬಾಕಿಗಳನ್ನು ನೀಡದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ಮರುಪಾವತಿ ಪ್ರಕ್ರಿಯೆ ಸಂಪೂರ್ಣ ಕಾನೂನುಬಾಹಿರವಾಗಿದೆ. ಈ ಅಸಂಗತತೆ ಸರಿಪಡಿಸಬೇಕು ಮತ್ತು ಬಾಕಿ ಮೊತ್ತವನ್ನು ತಕ್ಷಣವೇ ಜಾರಿಗೆ ಬರುವಂತೆ ಮರುಪಾವತಿ ಮಾಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ," ಎಂದು ಎರಡು ಒಕ್ಕೂಟಗಳು ಕಳುಹಿಸಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಅಕ್ಟೋಬರ್ ತಿಂಗಳಿನಲ್ಲಿ ಏರ್ ಇಂಡಿಯಾ ಮಾರಾಟ:

ಕಳೆದ ವರ್ಷ ಅಕ್ಟೋಬರ್ 8 ರಂದು ಏರ್ ಇಂಡಿಯಾದ ಮಾರಾಟವನ್ನು ಘೋಷಿಸಿದ ಮೂರು ದಿನಗಳ ನಂತರ, ಟಾಟಾ ಗ್ರೂಪ್‌ಗೆ ಲೆಟರ್ ಆಫ್ ಇಂಟೆಂಟ್ (LoI) ಅನ್ನು ನೀಡಲಾಯಿತು. ಇದು ಏರ್‌ಲೈನ್‌ನಲ್ಲಿ ತನ್ನ 100 ಪ್ರತಿಶತ ಪಾಲನ್ನು ಮಾರಾಟ ಮಾಡಲು ಸರ್ಕಾರದ ಇಚ್ಛೆಯನ್ನು ದೃಢೀಕರಿಸಿತು. ಅಕ್ಟೋಬರ್ 25ರಂದು ಕೇಂದ್ರವು ಈ ಷೇರು ಖರೀದಿ ಒಪ್ಪಂದಕ್ಕೆ (SPA) ಸಹಿ ಹಾಕಿತು.

ಏರ್ ಇಂಡಿಯಾ ಸಾಲವನ್ನು ಹೊತ್ತುಕೊಂಡ ಟಾಟಾ:

ಟಾಟಾ ಸಂಸ್ಥೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ, ಕೇಂದ್ರ ಸರ್ಕಾರ, ಏರ್ ಇಂಡಿಯಾದ ಶೇಕಡಾ 100ರಷ್ಟು ಪಾಲನ್ನು ಟಾಟಾ ಸನ್ಸ್ ಸಂಸ್ಥೆಗೆ ಮಾರಾಟ ಮಾಡಿದೆ. ಏರ್ ಇಂಡಿಯಾ ಮೇಲಿನ ಸಾಲದ ಪೈಕಿ 15,300 ಕೋಟಿ ರೂಪಾಯಿ ಸಾಲದ ಜವಾಬ್ದಾರಿಯನ್ನು ಟಾಟಾ ಹೊತ್ತುಕೊಳ್ಳುತ್ತದೆ. ಇದರ ಹೊರತಾಗಿ ಬಾಕಿ ಇರುವ 46,262 ಕೋಟಿ ರೂಪಾಯಿ ಸಾಲದ ಜವಾಬ್ದಾರಿ ಸರ್ಕಾರದ ಮೇಲೆ ಇರಲಿದೆ.

English summary
Indian Govt to hand over Air India to Tata group today; N Chandrasekaran reaches Airlines House for the official handover.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X