ಸಿನಿಮಿಯಾ ಶೈಲಿಯಲ್ಲಿ ಬ್ಯಾಂಕ್ ದರೋಡೆಗೆ ಯತ್ನ, ಬಂಧನ
ಅಜಿತ್ ಕುಮಾರ್ ಅಭಿನಯದ ತುನಿವು ಚಿತ್ರದ ಮಾದರಿಯಲ್ಲಿ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ಪೂಚಿನಾಯಿಕನಪೆಟ್ಟಿಯ ಖಲೀಲ್ ರಹಮಾನ್ ಎಂಬ 25 ವರ್ಷದ ಯುವಕನನ್ನು ಮಂಗಳವಾರ ಬ್ಯಾಂಕ್ ದರೋಡೆ ಮಾಡಲು ಯತ್ನಿಸಿದ ಆರೋಪದ ಮೇಲೆ ಬಂಧಿಸಲಾಗಿದೆ.
ಚೆನ್ನೈ, ಜನವರಿ 24: ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ಪೂಚಿನಾಯಿಕನಪೆಟ್ಟಿಯ ಖಲೀಲ್ ರಹಮಾನ್ ಎಂಬ 25 ವರ್ಷದ ಯುವಕನನ್ನು ಮಂಗಳವಾರ ಬ್ಯಾಂಕ್ ದರೋಡೆ ಮಾಡಲು ಯತ್ನಿಸಿದ ಆರೋಪದ ಮೇಲೆ ಬಂಧಿಸಲಾಗಿದೆ.
ಇತ್ತೀಚಿಗೆ ತಮಿಳುನಾಡಿನ ಖ್ಯಾತ ನಟರಾದ ಅಜಿತ್ ಕುಮಾರ್ ಅಭಿನಯದ ತುನಿವು ಚಿತ್ರದಲ್ಲಿ ಬ್ಯಾಂಕ್ ದರೋಡೆ ಮಾಡುವ ದೃಶ್ಯದಿಂದ ಪ್ರೇರಣೆಗೊಂಡಿದ್ದ ಯುವಕ ದಿಂಡಿಗಲ್ ಜಿಲ್ಲೆಯ ತಾಡಿಕೊಂಬು ಶಾಖೆಯ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಅನ್ನು ದರೋಡೆ ಮಾಡಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.
ಅಜಿತ್ ಕುಮಾರ್ ಚಿತ್ರದ ತುನಿವು ಚಿತ್ರ ನೋಡಿ ಆತ ಸ್ಥಳಿಯ ಬ್ಯಾಂಕ್‌ಗೆ ನುಗ್ಗಿ ಬ್ಯಾಂಕ್ ನೌಕರರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದನು. ಬ್ಯಾಂಕ್ ದರೋಡೆಗಾಗಿ ಮೆಣಸಿನ ಪುಡಿ, ಪೆಪ್ಪರ್ ಸ್ಪ್ರೇ ಮತ್ತು ಚಾಕುವನ್ನು ಬಳಸಿದ್ದನು. ಪ್ಲಾಸ್ಟಿಕ್ ಟ್ಯಾಗ್ ಬಳಸಿ ಮೂವರು ಬ್ಯಾಂಕ್ ಉದ್ಯೋಗಿಗಳನ್ನು ಕಟ್ಟಿ ಹಾಕಿದ್ದನು ಎನ್ನಲಾಗಿದೆ. ಆದಾಗ್ಯೂ, ಒಬ್ಬ ಉದ್ಯೋಗಿ ತನ್ನನ್ನು ತಾನೇ ಬಿಡಿಸಿಕೊಂಡು ಸ್ಥಳೀಯ ಜನರಿಗೆ ಮಾಹಿತಿ ನೀಡಿದ್ದರು.

ಬಳಿಕ ಅಕ್ಕಪಕ್ಕದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಖಲೀಲ್‌ನನ್ನು ತಡೆದು ನಂತರ ಪೊಲೀಸರಿಗೆ ಒಪ್ಪಿಸಿದರು ಎಂದು ಡಿಎಚ್ ವರದಿ ಮಾಡಿದೆ. ಸ್ಥಳೀಯ ಪೊಲೀಸರ ತಿಳಿಸಿರುವಂತೆ ಯುವಕನು ಜೀವನದಲ್ಲಿ ಖಿನ್ನತೆಗೆ ಒಳಗಾಗಿದ್ದನು. ಆತ ಇತ್ತೀಚೆಗೆ ತನ್ನ ನೆಚ್ಚಿನ ನಟನಾದ ಅಜಿತ್ ಕುಮಾರ್ ಅಭಿನಯದ ಬ್ಯಾಂಕ್ ದರೋಡೆಯನ್ನು ಚಿತ್ರಿಸುವ ಥುನಿವು ಚಲನಚಿತ್ರದಿಂದ ಸ್ಫೂರ್ತಿ ಪಡೆದು ಬ್ಯಾಂಕ್ ದರೋಡೆ ಮಾಡಲು ಪ್ರಯತ್ನಿಸಿದನು ಎಂದು ಮಾಹಿತಿ ನೀಡಿದ್ದಾನೆ.
ದಿಂಡುಗಲ್ ಪಶ್ಚಿಮ ಪೊಲೀಸರು ಖಲೀಲ್ ರೆಹಮಾನ್ ಮತ್ತು ಅವರ ಪೂರ್ವಾಪರ ಮತ್ತು ಅವರು ಈ ಹಿಂದೆ ಅಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಬ್ಯಾಂಕ್ ದರೋಡೆಯಲ್ಲಿ ಇತರ ವ್ಯಕ್ತಿಗಳು ಭಾಗಿಯಾಗಿರುವ ಸಂಚಿನ ದೃಷ್ಟಿಕೋನದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆತ ಬ್ಯಾಂಕ್ ಲೂಟಿ ಮಾಡಲು ಪ್ರಯತ್ನಿಸಿದಾಗ, ಕಟ್ಟಿಹಾಕಿದ್ದ ಉದ್ಯೋಗಿಯೊಬ್ಬರು ಸಹಾಯಕ್ಕಾಗಿ ಅಳುತ್ತಾ ಹೊರಗೆ ಓಡಿಹೋಗಿದ್ದರು. ಇದರಿಂದ ಬೆಚ್ಚಿಬಿದ್ದ ಸಾರ್ವಜನಿಕರು ಬ್ಯಾಂಕ್‌ಗೆ ನುಗ್ಗಿ ಪುಚ್ಚಿನಾಯಕನಪಟ್ಟಿಯ ಕಲೀಲ್ ರೆಹಮಾನ್ ಎಂಬಾತನನ್ನು ಹಿಡಿದಿದ್ದರು. ಕಲೀಲ್ ಇತ್ತೀಚೆಗೆ ತೆರೆಕಂಡ ಅಜಿತ್ ಕುಮಾರ್ ಚಿತ್ರ ತುನಿವು ಸೇರಿದಂತೆ ಹಲವಾರು ಚಲನಚಿತ್ರಗಳನ್ನು ವೀಕ್ಷಿಸಿದ್ದರು. ಜೀವನದಲ್ಲಿ ಬೇಸರಗೊಂಡಿದ್ದರಿಂದ ಆತ ಬ್ಯಾಂಕ್ ದರೋಡೆಗೆ ಪ್ರಯತ್ನಿಸಲು ಪ್ರೇರೇಪಣೆಯನ್ನು ಅದರಿಂದ ಪಡೆದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications