ಜಲ್ಲಿಕಟ್ಟು ಮಸೂದೆ ವಿರುದ್ಧ ಸುಪ್ರೀಂಕೋರ್ಟಿಗೆ ಮೊರೆ!
ತಮಿಳುನಾಡು ಸರ್ಕಾರ ಇತ್ತೀಚೆಗೆ ಮಂಡಿಸಿದ ಜಲ್ಲುಕಟ್ಟು ಮಸೂದೆ ಕಾನೂನು ಬದ್ಧವಾಗಿಲ್ಲ ಎಂದು ಆರೋಪ ಹೊರೆಸಿ ಪ್ರಾಣಿ ಹಕ್ಕುಗಳ ಪರ ಹೋರಾಟಗಾರರು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.
ನವದೆಹಲಿ/ಚೆನ್ನೈ, ಜನವರಿ 25: ತಮಿಳುನಾಡು ಸರ್ಕಾರ ಇತ್ತೀಚೆಗೆ ಮಂಡಿಸಿದ ಜಲ್ಲುಕಟ್ಟು ಮಸೂದೆ ಕಾನೂನು ಬದ್ಧವಾಗಿಲ್ಲ ಎಂದು ಆರೋಪ ಹೊರೆಸಿ ಪ್ರಾಣಿ ಹಕ್ಕುಗಳ ಪರ ಹೋರಾಟಗಾರರು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.
ತಮಿಳನಾಡಿನಲ್ಲಿ ಜಲ್ಲಿಕಟ್ಟು ನಡೆಸಲು ಮಸೂದೆ ಮಂಡಿಸಿರುವ ತಮಿಳುನಾಡು ಸರ್ಕಾರ ಮೂಲಭೂತ ಅಂಶಗಳನ್ನು ಬಲಿಕೊಟ್ಟಿದೆ. ಈ ಮಸೂದೆ ಅಕ್ರಮವಾಗಿದ್ದು, ಕಾನೂನಿನ ವಿರುದ್ಧವಾಗಿದೆ ಎಂದು ಆರೋಪಿಸಿ ಪ್ರಾಣಿಪ್ರಿಯ ಸಂಘಟನೆಯ ಹೋರಾಟಗಾರರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಅರ್ಜಿ ವಿಚಾರಣೆ ಮುಂದಿನ ಸೋಮವಾರದಂದು ವಿಚಾರಣೆಗೆ ಬರುವ ಸಾಧ್ಯತೆಯಿದೆ.

ಕೇಂದ್ರ ಸರ್ಕಾರದಿಂದ ಸಮ್ಮತಿ ಪಡೆದ ನಂತರ ಜನ ಸಮೂಹದ ಆಕ್ರೋಶ, ಪ್ರತಿಭಟನೆಯನ್ನು ಹತ್ತಿಕ್ಕಲು ತ್ವರಿತಗತಿಯಲ್ಲಿ ಮಸೂದೆ ಮಂಡನೆ ಮಾಡಿ ಕಾನೂನು ಜಾರಿಗೆ ತರಲು ತಮಿಳುನಾಡು ಸರ್ಕಾರ ಯತ್ನಿಸಿದೆ ಎಂದು ಆರೋಪದಲ್ಲಿ ಹೇಳಲಾಗಿದೆ. ಸೋಮವಾರ(ಜನವರಿ 23) ದಂದು ಓ ಪನ್ನೀರ್ ಸೆಲ್ವಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಲ್ಲಿಕಟ್ಟು ಆಚರಣೆಗೆ ಮಾನ್ಯತೆ ನೀಡಲಾಗಿತ್ತು.












Click it and Unblock the Notifications