ತಮಿಳುನಾಡಿನಲ್ಲಿ ಮತ್ತೊಬ್ಬ ಸಚಿವರಿಗೆ ಈಗ ಇಡಿ ಬಲೆ, ಮನೆ ಶೋಧ

ಚೆನ್ನೈ, ಜುಲೈ 17: ತಮಿಳುನಾಡಿನ ಅಬಕಾರಿ ಸಚಿವ ಸೆಂಥಿಲ್ ಬಾಲಾಜಿ ಬಂಧನಕ್ಕೊಳಗಾಗಿರುವ ಬೆನ್ನಲ್ಲೇ ಈಗ ಜಾರಿ ನಿರ್ದೇಶನಾಲಯದಿಂದ (ಇಡಿ) ಮತ್ತೊಬ್ಬ ಸಚಿವನಿಗೂ ಸೋಮವಾರ ಬಲೆ ಬೀಸಿದ್ದು, ಸೋಮವಾರ ಅವರ ಮನೆ ಮೇಲೆ ದಾಳಿ ಮಾಡಿ ಶೋಧ ಕಾರ್ಯ ನಡೆಸಿದೆ.

ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಯ ನಾಯಕರಾಗಿ ಗುರುತಿಸಿಕೊಂಡಿರುವ ತಮಿಳುನಾಡು ಉನ್ನತ ಶಿಕ್ಷಣ ಸಚಿವ ಕೆ ಪೊನ್ಮುಡಿ ಅವರನ್ನು ಸೋಮವಾರ ಜಾರಿ ನಿರ್ದೇಶನಾಲಯ (ಇಡಿ) ಅವರಿಗೆ ಸೇರಿದ ಒಂಬತ್ತು ಆವರಣಗಳಲ್ಲಿ ದಾಳಿ ನಡೆಸಿ ಶೋಧ ನಡೆಸಿದ್ದಾರೆ.

Tamil Nadu Higher Education Minister K Ponmudy house raided by ED, house searched

ಡಿಎಂಕೆ ಮುಖ್ಯಸ್ಥ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಸೇರಿದಂತೆ 24 ವಿರೋಧ ಪಕ್ಷಗಳ ನಾಯಕರು ಬೆಂಗಳೂರಿನಲ್ಲಿ ಸಮಾವೇಶಗೊಂಡು ಬಿಜೆಪಿ ವಿರುದ್ಧ ತಮ್ಮ ಹೋರಾಟವನ್ನು ಮುಂದುವರೆಸುವ ಕೆಲವೇ ಗಂಟೆಗಳ ಮೊದಲು ಈ ದಾಳಿಗಳು ನಡೆದಿವೆ. ಸಭೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ತೆರಳುವ ಮುನ್ನ ಸ್ಟಾಲಿನ್ ಸುದ್ದಿಗಾರರನ್ನು ಭೇಟಿಯಾಗುವ ನಿರೀಕ್ಷೆಯಿದೆ.

ಡಿಎಂಕೆ ಮುಖ್ಯಸ್ಥ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಸೇರಿದಂತೆ 24 ವಿರೋಧ ಪಕ್ಷಗಳ ನಾಯಕರು ಬೆಂಗಳೂರಿನಲ್ಲಿ ಸಮಾವೇಶಗೊಂಡು ಬಿಜೆಪಿ ವಿರುದ್ಧ ತಮ್ಮ ಹೋರಾಟವನ್ನು ಮುಂದುವರೆಸಲು ಸಭೆ ಸೇರುವ ಕೆಲವೇ ಗಂಟೆಗಳ ಮೊದಲು ಈ ದಾಳಿಗಳು ನಡೆದಿವೆ. ಬೆಂಗಳೂರಿಗೆ ತೆರಳುಲು ಸಿದ್ಧರಾಗಿರುವ ಸ್ಟಾಲಿನ್ ಈ ಬಗ್ಗೆ ತಮ್ ಹೇಳಿಕೆ ನೀಡಿಲ್ಲ.

ಅಕ್ರಮ ಆಸ್ತಿ (ಡಿಎ) ಪ್ರಕರಣ ಮತ್ತು ಭೂಕಬಳಿಕೆ ಪ್ರಕರಣದಲ್ಲಿ ಪೊನ್ಮುಡಿ ಅವರನ್ನು ಇತ್ತೀಚೆಗೆ ನ್ಯಾಯಾಲಯಗಳು ಖುಲಾಸೆಗೊಳಿಸಿದ್ದವು. ಸಚಿವ ಪೊನ್ಮುಡಿ ಅವರ ಅಧಿಕೃತ ನಿವಾಸ, ಉತ್ತರ ತಮಿಳುನಾಡಿನ ವಿಲ್ಲುಪುರಂನಲ್ಲಿರುವ ಅವರ ನಿವಾಸ ಮತ್ತು ಇತರ ಆವರಣಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಇಡಿ ದಾಳಿಯನ್ನು ಪ್ರಾರಂಭಿಸಿದೆ. ದಾಳಿ ನಡೆಸುವ ಮುನ್ನ ಸಚಿವರ ಕಚೇರಿಯಲ್ಲಿದ್ದ ಎಲ್ಲ ಖಾಸಗಿ ಸಿಬ್ಬಂದಿಯನ್ನು ಹೊರಹೋಗುವಂತೆ ಹೊರ ಕಳಿಸಲಾಗಿದೆ.

ಕಲ್ಲಾಕುರಿಚಿ ಸಂಸದ ಗೌತಮ್ ಸಿಗಮಣಿ, ಪೊನ್ಮುಡಿ ಅವರ ನಿವಾಸದಲ್ಲೂ ಶೋಧ ನಡೆದಿದೆ ಎಂದು ವರದಿಗಳು ತಿಳಿಸಿವೆ. ಡಿಎಂಕೆಯ ಉಪ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪೊನ್ಮುಡಿ ಅವರು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ನೇತೃತ್ವದ ಮಂತ್ರಿ ಮಂಡಳಿಯ ಶ್ರೇಯಂಕದಲ್ಲಿ ಐದನೇ ಸ್ಥಾನದಲ್ಲಿದ್ದಾರೆ. 1989ರಿಂದ ಡಿಎಂಕೆ ಪಕ್ಷದಲ್ಲಿ ಸೇವೆ ಸಲ್ಲಿಸಿದ ಪಕ್ಷದ ಅತ್ಯಂತ ಹಿರಿಯ ನಾಯಕ ಪೊನ್ಮುಡಿ ಅವರಾಗಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿಯಿಂದ ಬಂಧನಕ್ಕೊಳಗಾಗಿರುವ ಸಚಿವ ವಿ ಸೆಂಥಿಲ್ ಬಾಲಾಜಿ ಅವರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದು, ಇಡಿಯ ಈ ದಾಳಿಗಳು ಡಿಎಂಕೆಗೆ ಮಾರಕ ಹೊಡೆತ ನೀಡಿದೆ. 2012ರಲ್ಲಿ ಗಣಿ ಮತ್ತು ಸಂಪನ್ಮೂಲ ಸಚಿವರಾಗಿದ್ದ ಪೊನ್ಮುಡಿ ಅವರು ತಮ್ಮ ಪುತ್ರ ಹಾಗೂ ಸಂಬಂಧಿಕರ ಪರವಾಗಿ ಕ್ವಾರಿ ಪರವಾನಗಿ ಪಡೆದಿದ್ದಾರೆ ಎಂದು ಆರೋಪಿಸಿ ಈಗ ದಾಳಿ ನಡೆಸಲಾಗುತ್ತಿದೆ.

ಸಚಿವ ಪೊನ್ಮುಡಿ ಮತ್ತು ಅವರ ಸಂಬಂಧಿಕರು 2.64 ಲಕ್ಷ ಲೋಡ್ ಹೆಚ್ಚುವರಿ ಕೆಂಪು ಮರಳನ್ನು ಕಲ್ಲುಗಣಿಗಾರಿಕೆ ಮಾಡಿದ್ದಾರೆ ಎಂದು ಸಿಗಾಮಣಿ ಸಲ್ಲಿಸಿದ ಮನವಿಯ ಮೇರೆಗೆ ಮದ್ರಾಸ್ ಹೈಕೋರ್ಟ್ ಕಳೆದ ತಿಂಗಳು ವಿಚಾರಣೆಗೆ ತಡೆ ನೀಡಲು ನಿರಾಕರಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+