ತಮಿಳುನಾಡು ಚುನಾವಣೆ: 41 ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಸ್ಪರ್ಧೆ

Posted By:
Subscribe to Oneindia Kannada

ಚೆನ್ನೈ, ಏಪ್ರಿಲ್ 04: ತಮಿಳುನಾಡು ವಿಧಾನಸಭೆ ಚುನಾವಣೆ 2016ರಲ್ಲಿ ಡಿಎಂಕೆ ಜತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ. 234 ಕ್ಷೇತ್ರಗಳ ಪೈಕಿ 41ರಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಸಿದ್ಧವಾಗಿದೆ. ಮೇ 16ರಂದು ಒಂದು ಹಂತದಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದೆ.

ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಜಾದ್ ಮುಕುಲ್ ವಾಸ್ನಿಕ್ ಹಾಗೂ ಎಂ ಕರುಣಾನಿಧಿ ಅವರ ಗೋಪಾಲಪುರಂ ನಿವಾಸದಲ್ಲಿ ಸೀಟು ಹಂಚಿಕೆ ಬಗ್ಗೆ ಸಭೆ ನಡೆಸಿದರು. ಸೋಮವಾರ ಬೆಳಗ್ಗೆ ಸೀಟು ಹಂಚಿಕೆ ಸಭೆಯಲ್ಲಿ ಇತ್ಯರ್ಥಗೊಂಡಂತೆ ಕಾಂಗ್ರೆಸ್ 41 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಜಾದ್ ಅವರು ಪ್ರಕಟಿಸಿದರು.[ಜಯಾ ಪಕ್ಷದಿಂದ ನಟ ಶರತ್ ಕುಮಾರ್ ಗೆ ಟಿಕೆಟ್]

 Congress to contest in 41 seats

ಕಾಂಗ್ರೆಸ್ ಜತೆಗಿನ ಮೈತ್ರಿಯಿಂದ ಡಿಎಂಕೆ ಇನ್ನಷ್ಟು ಬಲಿಷ್ಠವಾಗಿದೆ. ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ. ಆದರೆ, ಇತ್ತೀಚಿನ ಚುನಾವಣಾ ಪೂರ್ವ ಸಮೀಕ್ಷೆಯಂತೆ ತಮಿಳುನಾಡಿನಲ್ಲಿ ಎಐಎಡಿಎಂಕೆ ಮತ್ತೆ ಅಧಿಕಾರಕ್ಕೆ ಬರುವುದು ಖಾತ್ರಿಯಾಗಿದೆ.

ಕಾಂಗ್ರೆಸ್ 63 ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಪಟ್ಟು ಹಿಡಿದಿತ್ತು. 2011ರಲ್ಲಿ 63 ಸ್ಥಾನವನ್ನು ಪಡೆದಿತ್ತು. ಆದರೆ,ಡಿಎಂಕೆ ಒಪ್ಪಲಿಲ್ಲ 33 ಸೀಟುಗಳನ್ನು ಕೊಡುವುದಾಗಿ ಆಫರ್ ನೀಡಿತ್ತು. ಆದರೆ, ಕೊನೆಗೆ 41 ಸ್ಥಾನಗಳಿಗೆ ಡೀಲ್ ಕುದುರಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After hectic parleys, the DMK and the Congress on Monday, April 4 finalised their seat-sharing for the May 16 single-phase Tamil Nadu Assembly polls. The Congress will contest on 41 seats of the 234 assembly constituencies.
Please Wait while comments are loading...