19, 20 ಹಾಗೂ 21ಕ್ಕೆ ತಮಿಳು ಬ್ರಾಹ್ಮಣ ಸಮುದಾಯದ ಮೊದಲ ಸಮಾವೇಶ
ತಮಿಳು ಬ್ರಾಹ್ಮಣ ಸಮುದಾಯವು ಕೇರಳದ ಕೊಚ್ಚಿಯಲ್ಲಿ ಜುಲೈ 19, 20 ಹಾಗೂ 21ರಂದು ಮೊದಲ ಜಾಗತಿಕ ಸಮಾವೇಶವನ್ನು ನಡೆಸಲಿದೆ. ಕೇರಳ ಬ್ರಾಹ್ಮಣ ಮಹಾಸಭಾವು ಮೂರು ದಿನದ ಈ ಸಮಾವೇಶವನ್ನು ಆಯೋಜಿಸುತ್ತಿದ್ದು, ಜಗತ್ತಿನಾದ್ಯಂತ 1500 ಪ್ರತಿನಿಧಿಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದೆ.
ಹೈ ಕೋರ್ಟ್ ನ್ಯಾಯಮೂರ್ತಿ ಚಿದಂಬರನಾಥ್ ಅವರು ಮೇರಿಯಟ್ ಹೋಟೆಲ್ ನಲ್ಲಿ ಈ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಇನ್ಫೋಸಿಸ್ ನ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್, ಪೆಟ್ರೋಫ್ಯಾಕ್ ಇಂಡಿಯಾ ಅಧ್ಯಕ್ಷ ಸುಂದರ್ ಕಲ್ಯಾಣಮ್, ಯುರೋಪ್ ನಲ್ಲಿ ರಿಲಯನ್ಸ್ ಕಾರ್ಯ ನಿರ್ವಾಹಕ ನಿರ್ದೇಶಕ ಮೋಹನ್ ಮೂರ್ತಿ, ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕ ಎಂ.ಬಾಲಸುಬ್ರಮಣಿಯನ್, ಮದ್ರಾಸ್ ಹೈಕೋರ್ಟ್ ನ್ಯಾ. ಅನಿತಾ ಸುಮಂತ್ ಇತರರು ಪಾಲ್ಗೊಳ್ಳುವರು.
ತಮಿಳು ಬ್ರಾಹ್ಮಣರ ಆರ್ಥಿಕ, ಸಾಮಾಜಿಕ ಏಳ್ಗೆಗೆ ಹೊಸ ಅವಕಾಶವನ್ನು ಒದಗಿಸುವ ಉದ್ದೇಶದಿಂದ ಈ ಸಮಾವೇಶ ಆಯೋಜಿಸಲಾಗುತ್ತಿದೆ ಎಂದು ಕೇರಳ ಬ್ರಾಹ್ಮಣ ಸಭಾ ಅಧ್ಯಕ್ಷ ಕರಿಂಪುಳ ರಾಮನ್ ಅವರು ಹೇಳಿದ್ದಾರೆ.

ತಮಿಳು ಬ್ರಾಹ್ಮಣರ ಜ್ಞಾನ, ಕೌಶಲ ಹಾಗೂ ಪ್ರತಿಭೆ ಜಾಗತಿಕ ಮಟ್ಟದಲ್ಲಿ ದೊರೆಯುತ್ತಿದೆ. ಅವೆಲ್ಲವನ್ನು ಒಂದು ವೇದಿಕೆಗೆ ತಂದು ವೈದಿಕ ಸಂಪ್ರದಾಯ ಹಾಗೂ ಧಾರ್ಮಿಕ ಮೌಲ್ಯಗಳನ್ನು ಉಳಿಸಲು ಇಂಥ ಸಮಾವೇಶಗಳು ಅಗತ್ಯ ಎಂದು ಬಲವಾಗಿ ನಂಬುತ್ತೇವೆ ಎಂದು ಅವರು ಹೇಳಿದ್ದಾರೆ.












Click it and Unblock the Notifications