• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಾಜ್ ಮಹಲ್ ವಕ್ಫ್ ವಶಕ್ಕೆ ನೀಡುವುದು ಸರಿಯೇ?

By Mahesh
|

ರಾಮಪುರ (ಉತ್ತರಪ್ರದೇಶ), ನ.21: ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರ 75ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಉತ್ತರಪ್ರದೇಶದ ಹಿರಿಯ ಸಚಿವ ಅಜಂ ಖಾನ್ ಅವರು ನೀಡಿರುವ ಸಲಹೆ ಭಾರಿ ಚರ್ಚೆಗೊಳಲ್ಪಟ್ಟಿದೆ. ಐತಿಹಾಸಿಕ ಪ್ರೇಮಸೌಧ ತಾಜ್ ಮಹಲ್ ಅನ್ನು ವಕ್ಫ್ ಮಂಡಳಿಯ ಆಸ್ತಿ ಎಂದು ಘೋಷಿಸುವಂತೆ ಕೇಳಿಕೊಂಡಿದ್ದಾರೆ.

ತಾಜ್ ಮಹಲ್ ಹಾಗೂ ಇನ್ನಿತರ ಸ್ಮಾರಕಗಳು ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಗೆ ಸೇರಬೇಕು ಎಂದು ನಗರಾಭಿವೃದ್ಧಿ ಸಚಿವ ಅಜಂ ಖಾನ್ ಹೇಳಿಕೆ ನೀಡಿದ್ದಾರೆ. ತಾಜ್‌ಮಹಲ್ ಅನ್ನು ವಕ್ಫ್‌ನ ಸ್ವತ್ತು ಎಂದು ಘೋಷಿಸಿ, ಅದರ ಹೊಣೆಯನ್ನು ನಮಗೆ ವಹಿಸಿಕೊಡಿ, ಷಹಜಹಾನ್ ಹಾಗೂ ಮುಮ್ತಾಜ್ ಅವರ ನೆನಪಿನ ಸೌಧವನ್ನು ರಕ್ಷಿಸುವ ಜವಾಬ್ದಾರಿ ಹೊರುತ್ತೇವೆ ಎಂದಿದ್ದಾರೆ. [ತಾಜ್ ಮಹಲ್ ಸೌಂದರ್ಯ ರಕ್ಷಣೆಗೆ ಪಾಕಿಸ್ತಾನದ ಮಣ್ಣು]

ಧರ್ಮಗುರು ಮೌಲಾನಾ ಖಾಲಿದ್ ರಶೀದ್ ಫಿರಂಗಿಮಹ್ಲಿ ಅವರು, ತಾಜ್‌ಮಹಲ್‌ನಲ್ಲಿ ಪ್ರತಿದಿನ 5 ಬಾರಿ ನಮಾಜ್‌ಗೆ ಅವಕಾಶ ಕಲ್ಪಿಸಬೇಕು ಎಂದು ಸಿಎಂಗೆ ಮನವಿ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.

ಅಖಿಲೇಶ್ ಯಾದವ್ ಪ್ರಯತ್ನ ವ್ಯರ್ಥ್ಯ: ತಾಜ್ ಮಹಲ್ ಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಗುತ್ತಿದೆ. 17ನೇ ಶತಮಾನದ ಈ ಸ್ಮಾರಕ ಪ್ರವೇಶಕ್ಕೆ ಇ-ಟಿಕೆಟ್ ವ್ಯವಸ್ಥೆ ಮಾಡುವಂತೆ ಸಿಎಂ ಅಖಿಲೇಶ್ ಯಾದವ್ ಕೋರಿಕೊಂಡಿದ್ದಾರೆ. ಟಿಕೆಟ್ ಖರೀದಿಸಲೆಂದು ದೇಶದ ಹಾಗೂ ವಿದೇಶಿ ಪ್ರವಾಸಿಗರು ಸರತಿ ಸಾಲಲ್ಲಿ ಗಂಟೆಗಟ್ಟಲೆ ನಿಲ್ಲುವುದನ್ನು. ತಪ್ಪಿಸಲು ಇ-ಟಿಕೆಟ್ ಜಾರಿ ತರಲು ಯೋಜಿಸಿದ್ದರು. ಅದರೆ, ಇನ್ನೂ ಕಾರ್ಯಗತವಾಗಿಲ್ಲ.

ಹೊಳಪು ಕಳೆದುಕೊಂಡ ತಾಜ್ ಮಹಲ್: ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆ ವರದಿ ಪ್ರಕಾರ ಕಳೆದ ವರ್ಷ ತಾಜ್ ಮಹಲ್ ಗೆ ಭೇಟಿ ನೀಡಿರುವ ಪ್ರವಾಸಿಗರ ಸಂಖ್ಯೆ ಶೇ 15ರಷ್ಟು ಇಳಿಮುಖವಾಗಿದೆಯಂತೆ.

ಈ ಬಗ್ಗೆ ಇತ್ತೀಚೆಗೆ ಪ್ರವಾಸೋದ್ಯಮ ಸಚಿವ ಓಂ ಪ್ರಕಾಶ್ ಸಿಂಗ್ ಅವರೇ ಸದನದಲ್ಲಿ ಉತ್ತರಿಸಿದ್ದರು. 2012 ಹಾಗೂ 2013ರ ಅವಧಿಯ ಪ್ರವಾಸಿಗರ ಸಂಖ್ಯೆಯಲ್ಲಿ ಶೇ 10 ರಷ್ಟು ಇಳಿಮುಖವಾಗಿದೆ. ಕಳೆದ ವರ್ಷ ಶೇ 15ರಷ್ಟು ಸಂಖ್ಯೆ ಇಳಿದಿದೆ ಎಂದಿದ್ದರು.

ಸ್ಮಾರಕದ ನಿರ್ವಾಹಕರು ಯಾರು?: ಸ್ಮಾರಕದ ಸುರಕ್ಷಣೆ, ಹೊಳಪು, ಪ್ರಚಾರ ಎಲ್ಲದ್ದಕ್ಕೂ ಭಾರತೀಯ ಪುರಾತತ್ವ ಇಲಾಖೆ

(ASI) ಕಾರಣವಾಗಿದೆ. ಕೇಂದ್ರ ಸರ್ಕಾರ ಸ್ವಾಮ್ಯ ಈ ಸಂಸ್ಥೆ ಇತ್ತೀಚೆಗೆ ಜಗತ್ ವಿಖ್ಯಾತ ಪ್ರೇಮ ಸೌಧದ ಪರಿಶುದ್ಧ ಬಿಳುಪನ್ನು ಕಾಯ್ದುಕೊಳ್ಳುವ ಪ್ರಕ್ರಿಯೆ ನಡೆಸಲಾಗಿದೆ. ಇದಕ್ಕಾಗಿ ಪಾಕಿಸ್ತಾನದ ಮುಲ್ತಾನಿನಿಂದ ಮಣ್ಣನ್ನು ತಂದು ಬಳಿಯಲು ಆರಂಭಿಸಲಾಗಿದೆ. ಆದರೆ, ಆಗ್ರಾದಲ್ಲಿನ ವಾಯುಮಾಲಿನ್ಯ, ಜಲಮಾಲಿನ್ಯದ ದುಷ್ಪರಿಣಾಮ ತಾಜ್ ಮಹಲ್ ಗೂ ತಟ್ಟಿದೆ. ತಾಜ್ ಮಹಲ್ ಸಂರಕ್ಷಣಾ ಸಮಿತಿ ಹಾಗೂ ಎಎಸ್ಐ ನಿರಂತರವಾಗಿ ತಾಜ್ ಮಹಲ್ 'ತಾಜಾತನ' ಉಳಿಸಿಕೊಳ್ಳಲು ಯತ್ನಿಸುತ್ತಿವೆ.

ವಕ್ಫ್ ಬೋರ್ಡ್ ಗೆ ನೀಡಬೇಕೆ? : ತಾಜ್ ಮಹಲ್ ಅನ್ನು ಪ್ರೇಮಸೌಧ ಎಂಬು ಪರಿಗಣಿಸುವುದಕ್ಕಿಂತ ಧಾರ್ಮಿಕ ಕಟ್ಟಡವಾಗಿ ವಕ್ಫ್ ಮಂಡಳಿ ಕಾಣುತ್ತಿದೆ. ತಾಜ್ ಮಹಲ್ ನಿಂದ ಬರುವ ಆದಾಯ ಇಳಿಮುಖವಾದರೂ ಜನಪ್ರಿಯತೆ ಕುಗ್ಗಿಲ್ಲ, ಆದಾಯದ ಮೇಲೆ ನಾವೇನು ಕಣ್ಣಿಟ್ಟಿಲ್ಲ ಎಂದು ಅಜಂ ಖಾನ್ ಹೇಳಿದ್ದಾರೆ.

ವಕ್ಫ್ ಮಂಡಳಿಯ ಹುಳುಕುಗಳನ್ನು ಸರಿಪಡಿಸಿಕೊಂಡರೆ ತಾಜ್ ಮಹಲ್ ಸುನ್ನಿಗಳ ಸುಪರ್ದಿಗೆ ಕೊಡಲು ಸರ್ಕಾರವೂ ಒಪ್ಪಬಹುದು. ಅದರೆ, ಪ್ರೇಮಸೌಧವನ್ನು ಧಾರ್ಮಿಕ ಮಂದಿರದಂತೆ ಪರಿವರ್ತಿಸಿಬಿಟ್ಟರೆ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಇಳಿಮುಖವಾಗುವ ಭೀತಿಯೂ ಇದ್ದೇ ಇದೆ. ಜೊತೆಗೆ ಪರಿಸರ ಮಾಲಿನ್ಯ ಹಾಗೂ ತಾಜ್ ಮಹಲ್ ಸಂರಕ್ಷಣೆ ಬಗ್ಗೆ ವಕ್ಫ್ ಮಂಡಳಿ ನಿಲುವು, ಯೋಜನೆ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಹೀಗಾಗಿ ಸರ್ಕಾರ ಈ ಬಗ್ಗೆ ತಕ್ಷಣಕ್ಕೆ ನಿರ್ಧಾರ ಕೈಗೊಳ್ಳುವುದು ಒಳಿತಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Uttar Pradesh Minister and senior SP leader Azam Khan today suggested that the Taj Mahal and the income generated through it should be handed over to the Wakf Board contending that the monument is a mausoleum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more