ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಜ್ ಮಹಲ್ ಹಿಂದೂ ದೇಗುಲವೇ? ಮೋದಿ ಸರ್ಕಾರದ ಉತ್ತರ ಇಲ್ಲಿದೆ

By Mahesh
|
Google Oneindia Kannada News

ನವದೆಹಲಿ, ಡಿ.1: ಆಗ್ರಾದ ಪ್ರೇಮ ಸೌಧ ತಾಜ್ ಮಹಲ್ ಈ ಹಿಂದೆ ಹಿಂದೂ ದೇಗುಲವಾಗಿತ್ತು, ಅದನ್ನು ಮೊಘಲರು ಮಾರ್ಪಾಟು ಮಾಡಿ ತಾಜ್ ಮಹಲ್ ಮಾಡಿದ್ದಾರೆ ಎಂಬ ಸಿದ್ಧಾಂತವನ್ನು ಸಾಬೀತುಪಡಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಪಪಡಿಸಿದೆ.

17ನೇ ಶತಮಾನದಲ್ಲಿ ನಿರ್ಮಾಣಗೊಂಡ ಪ್ರೇಮ ಸೌಧ ತಾಜ್ ಮಹಲ್ ನಿರ್ಮಾಣ ಮಾಡಿದ್ದು ಮೊಘಲರು. ಪತ್ನಿ ಮುಮ್ತಾಜ್‌ ಬೇಗಮ್‌ ಗಾಗಿ ದೊರೆ ಷಹಜಹಾನ್ ಅವರು ಕಟ್ಟಿಸಿದ ಪ್ರೇಮಸ್ಮಾರಕ ಎಂದು ಕೇಂದ್ರ ಸಚಿವ ಮಹೇಶ್ ಶರ್ಮ ಅವರು ಲೋಕಸಭೆಯಲ್ಲಿ ಹೇಳಿದ್ದಾರೆ.

Taj Mahal a Hindu temple? Here's what Modi govt said in Parliament

ತಾಜ್‌ಮಹಲ್‌ ಅನ್ನು 1983ರಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವೆಂದು ಮಾನ್ಯತೆ ನೀಡಿದೆ. ವಾರ್ಷಿಕವಾಗಿ 30 ಲಕ್ಷಕ್ಕೂ ಅಧಿಕ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಆಗ್ರಾದ ವಕೀಲರ ಸಮೂಹವೊಂದು ಕಳೆದ ಮಾರ್ಚ್ ತಿಂಗಳಿನಲ್ಲಿ "ತಾಜ್‌ ಮಹಲ್‌ ಮೂಲತಃ ಒಂದು ಶಿವಾಲಯವಾಗಿತ್ತು. ಆದುದರಿಂದ ತಾಜ್‌ಮಹಲ್‌ ನ ಮಾಲಕತ್ವವನ್ನು ಹಿಂದೂಗಳಿಗೆ ವಹಿಸಿಕೊಡಬೇಕು ಮತ್ತು ಮುಸ್ಲಿಮರಿಗೆ ಅಲ್ಲಿ ನಮಾಜು ಇತ್ಯಾದಿಗಳನ್ನು ಮಾಡುವುದಕ್ಕೆ ನಿರ್ಬಂಧಿಸಬೇಕು' ಎಂದು ಕೋರ್ಟ್ ಮೆಟ್ಟಿಲೇರಿದ್ದರು.

ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲೂ ಭಾರಿ ಚರ್ಚೆಯಾಗಿತ್ತು. ಆದರೆ, ಇದು ಸತ್ಯಕ್ಕೆ ದೂರವಾದ ಮಾತು ಎಂದು ಭಾರತೀಯ ಸರ್ವೇಕ್ಷಣ ಇಲಾಖೆ ಈ ಹಿಂದೆಯೇ ಸ್ಪಷ್ಪಪಡಿಸಿತ್ತು. ಆಗ್ರಾ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ತಿರಸ್ಕರಿಸಲಾಗಿತ್ತು.

English summary
Amidst several theories and claims, Modi Government finally conceded that there is no evidence that Taj Mahal was once a Hindu Temple. While answering to a question, the Union Culture Minister Mahesh Sharma informed the Lok Sabha that Government has not found any evidence regarding the same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X