ಬಲಿದಾನದ ಪ್ರತೀಕ ಮೊಹರಮ್ ವಿಶ್ವಾದ್ಯಂತ ಆಚರಣೆ

ಬೆಂಗಳೂರು, ಸೆ.21: ತ್ಯಾಗಬಲಿದಾನದ ಸಂಕೇತವಾದ ಮೊಹರಮ್ ಹಬ್ಬವನ್ನು ಭಾರತವೂ ಸೇರಿದಂತೆ ವಿಶ್ವದ ನಾನಾ ರಾಷ್ಟ್ರಗಳಲ್ಲಿ ಶುಕ್ರವಾರ ಶೃದ್ಧಾಭಕ್ತಿಯಿಂದ ಆಚರಿಸಲಾಯಿತು.

ಭಾರತದಲ್ಲಿ ಅನಾದಿ ಕಾಲದಿಂದಲೂ ಹಿಂದೂ ಹಾಗೂ ಮುಸ್ಲಿಮರು ಸೌಹಾರ್ದತೆಯಿಂದ ಮೊಹರಮ್ ಆಚರಿಸುವ ಪರಿಪಾಠವಿದೆ. ಆದರೆ ಅನ್ಯ ರಾಷ್ಟ್ರಗಳಲ್ಲಿ ಬಹುತೇಕ ಮುಸ್ಲಿಂ ಬಾಂಧವರು ಹಬ್ಬ ಆಚರಿಸುತ್ತಾರೆ. ಭಾರತದಲ್ಲಿ ಮೊಹರಮ್ ಹಾಡುಗಳು ಜನಪದ ಹಾಡುಗಳಷ್ಟೇ ಪ್ರಸಿದ್ಧಿ ಹಾಗೂ ಜನಮಾನಸದಲ್ಲಿ ಬೇರುಬಿಟ್ಟಿದೆ.

ಜೀವನದ ಕೊನೆಯ ಉಸಿರು ಇರುವ ತನಕ ಇಸ್ಲಾಂ ಧರ್ಮದ ಉಳಿವಿಗಾಗಿ ಹೋರಾಡಿದ್ದ ಹಜರತ್ ಇಮಾಮ್ ಹುಸೇನ್ ಅವರು ವೀರ ಮರಣ ಅಪ್ಪಿದ ಮೊಹರಂ ತಿಂಗಳಿನ 10ನೇ ದಿನದಂದು.

ಅಂದು ಇಸ್ಲಾಂ ಅನುಯಾಯಿಗಳು ಹುತಾತ್ಮರು ಅನುಭವಿಸಿದ ಕಷ್ಟಗಳನ್ನು ನೆನಪಿಸಿಕೊಳ್ಳಲು ಹರಿತವಾದ ಉಪಕರಣಗಳಿಂದ ಬೆನ್ನ, ಎದೆ ಮೇಲೆ ಗಾಯ ಮಾಡಿಕೊಳ್ಳುತ್ತಾರೆ. ಏಳನೇ ಶತಮಾನದಲ್ಲಿ ಇಂದಿನ ಇರಾಕ್ ಆಗಿರುವ ಅಂದಿನ ಕರ್ಬಾಲದಲ್ಲಿ ಮೊಹಮದ್ ಪೈಗಂಬರರ ಮೊಮ್ಮಗ ಹಜರತ್ ಇಮಾಮ್ ಹುಸೇನ ಅವರು ಧರ್ಮ ಉಳಿವಿದಾಗಿ ತ್ಯಾಗಗೈದ ದಿನವನ್ನು ಮೊಹರಮ್ ಆಚರಣೆಯನ್ನಾಗಿ ಸ್ಮರಿಸಲಾಗುತ್ತಿದೆ.

ಭಕ್ತಿಭಾವದೊಂದಿಗೆ ಮೊಹರಮ್ ಮೆರವಣಿಗೆ

ಭಕ್ತಿಭಾವದೊಂದಿಗೆ ಮೊಹರಮ್ ಮೆರವಣಿಗೆ

ಕೋಲ್ಕತ್ತಾದಲ್ಲಿ ಶುಕ್ರವಾರ ಮೊಹರಮ್ ಹಬ್ಬದ ಅಂಗವಾಗಿ ಶಿಯಾ ಮುಸ್ಲಿಮರು ಭಕ್ತಿ ಭಾವದೊಂದಿಗೆ ಬೃಹತ್ ಮೆರವಣಿಗೆ ನಡೆಸಿದರು.

ಮಗುವಿನ ಕಣ್ಣಲ್ಲಿ ಮೊಹರಮ್ ಮೆರವಣಿಗೆ

ಮಗುವಿನ ಕಣ್ಣಲ್ಲಿ ಮೊಹರಮ್ ಮೆರವಣಿಗೆ

ಕೋಲ್ಕತ್ತಾದಲ್ಲಿ ನಡೆದ ಮೊಹರಮ್ ಮೆರವಣಿಗೆ ವೇಳೆ ಮಗುವೊಂದು ಬೆರಗುಗಣ್ಣಿನಿಂದ ವೀಕ್ಷಿಸುತ್ತಿರುವ ದೃಶ್ಯ ಕಂಡುಬಂತು.

ಮಹಿಳೆಯರಿಂದ ಮೊಹರಮ್ ಆಚರಣೆ, ಪೊಲೀಸ್ ವೀಕ್ಷಣೆ

ಮಹಿಳೆಯರಿಂದ ಮೊಹರಮ್ ಆಚರಣೆ, ಪೊಲೀಸ್ ವೀಕ್ಷಣೆ

ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಶುಕ್ರವಾರ ಶಿಯಾ ಮುಸ್ಲಿಂ ಪಂಗಡದ ಮಹಿಳೆಯೊಬ್ಬಳು ಮೊಹರಮ್ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದನ್ನು ಪೊಲೀಸ್ ಪೇದೆಯೊಬ್ಬ ವೀಕ್ಷಿಸುತ್ತಿರುವ ದೃಶ್ಯ ಕಂಡು ಬಂತು. ಮುಂಜಾಗ್ರತಾ ಕ್ರಮವಾಗಿ ಶ್ರೀನಗರದಲ್ಲಿ ಭಾರಿ ಭದ್ರತೆ ಕೈಗೊಳ್ಳಲಾಗಿದ್ದು, ಪ್ರತಿಬಂಧಕಾಜ್ಞೆ ವಿಧಿಸಲಾಗಿದೆ.

ಮೊಹರಮ್ ಮೆರವಣಿಗೆಯಲ್ಲಿ ಶಿಯಾ ಮುಸ್ಲಿಮರು

ಮೊಹರಮ್ ಮೆರವಣಿಗೆಯಲ್ಲಿ ಶಿಯಾ ಮುಸ್ಲಿಮರು

ಇಸ್ಲಾಂ ಧರ್ಮೀಯರ ವರ್ಷದ ಮೊದಲ ಮಾಸವಾದ ಮೊಹರಮ್ ಮಾಸದಲ್ಲಿ 10ನೇ ದಿನದಂದು ಹಜರತ್ ಇಮಾಮ್ ಹುಸೇನರ ತ್ಯಾಗಬಲಿದಾನವನ್ನು ಸ್ಮರಿಸಲು ಪಾಕಿಸ್ತಾನದ ಪೇಶಾವರದಲ್ಲಿ ನಡೆದ ಮೊಹರಮ್ ಮೆರವಣಿಗೆಯಲ್ಲಿ ಶಿಯಾಪಂಡಗದ ಮುಸ್ಲಿಮರು ಪಾಲ್ಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+