SWR: ವೇಲಂಕಣ್ಣಿ ಹಬ್ಬ: ಕರ್ನಾಟಕದ ವಿವಿಧ ಜಿಲ್ಲೆಗಳ ಮಾರ್ಗವಾಗಿ ವಿಶೇಷ ರೈಲುಗಳ ಕಾರ್ಯಾಚರಣೆ, ವೇಳಾಪಟ್ಟಿ

ಬೆಂಗಳೂರು: ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ವೇಲಂಕಣ್ಣಿ ಹಬ್ಬಚಾಚರಣೆ ಪ್ರಯುಕ್ತ ಸಂಚಾರ ದಟ್ಟಣೆ ನಿವಾರಣೆ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಕೆಲವು ವಿಶೇಷ ರೈಲುಗಳ ಕಾರ್ಯಾಚರಣೆ ಮಾಡುತ್ತಿದೆ. ಈ ರೈಲುಗಳು 'ವಾಸ್ಕೋ-ಡ-ಗಾಮಾ ಹಾಗೂ ವೇಲಂಕಣ್ಣಿ' ನಡುವೆ ಸಂಚರಿಸಲಿವೆ.

ಆಗಸ್ಟ್ ಹಾಗೂ ಸೆಪ್ಟಂಬರ್ ತಿಂಗಳಲ್ಲಿ ಈ ವಿಶೇಷ ರೈಲುಗಳ ಸೇವೆ ಪ್ರಯಾಣಿಕರಿಗೆ ಲಭ್ಯವಾಗಲಿದೆ. ಮೊದಲಿಗೆ ಆಗಸ್ಟ್ ತಿಂಗಳಲ್ಲಿ ವಾಸ್ಕೋ-ಡ-ಗಾಮಾ - ವೇಲಂಕಣ್ಣಿ ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳು (07361/07362) 2 ಟ್ರಿಪ್‌ಗಳ ಸೇವೆ ನೀಡಲಿದೆ.

SWR

ವಾಸ್ಕೋ-ಡ-ಗಾಮಾ-ವೇಲಂಕಣ್ಣಿ ವಿಶೇಷ ಎಕ್ಸ್‌ಪ್ರೆಸ್‌ ರೈಲು (07361) ಆಗಸ್ಟ್ 27 ಮತ್ತು ಸೆಪ್ಟೆಂಬರ್ 01 ಕಾರ್ಯಾಚರಣೆ ನಡೆಸಲಿದೆ. ಅಂದು ರಾತ್ರಿ 21:55 ಗಂಟೆಗೆ ವಾಸ್ಕೋ-ಡ-ಗಾಮಾ ನಿಲ್ದಾಣದಿಂದ ಹೊರಟು ಮೂರನೇ ದಿನ ಬೆಳಗ್ಗೆ 03:45 ಗಂಟೆಗೆ ವೇಲಂಕಣ್ಣಿ ನಿಲ್ದಾಣಕ್ಕೆ ಬರಲಿದೆ.

ಮರಳಿ ಅದೇ ದಿಕ್ಕಿನಲ್ಲಿ ವೇಲಂಕಣ್ಣಿ-ವಾಡ್ಕೋ-ಡ-ಗಾಮಾ ವಿಶೇಷ ಎಕ್ಸ್‌ಪ್ರೆಸ್ ರೈಲು (07362) ಆಗಸ್ಟ್ 29 ಮತ್ತು ಸೆಪ್ಟೆಂಬರ್ 03 ರಂದು ರಾತ್ರಿ 23:55 ಗಂಟೆಗೆ ವೇಲಂಕಣ್ಣಿ ನಿಲ್ದಾಣದಿಂದ ಪ್ರಯಾಣ ಆರಂಭಿಸುತ್ತದೆ. ಅಲ್ಲಿಂದ ಮೂರನೇ ದಿನ ಬೆಳಗ್ಗೆ 03:00 ಗಂಟೆಗೆ ವಾಸ್ಕೋ-ಡ-ಗಾಮಾ ನಿಲ್ದಾಣಕ್ಕೆ ಆಗಮಿಸುತ್ತದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎರಡು ಬಾರಿಗೆ ಒಂದು ಟ್ರಿಪ್ ಸೇವೆ

ಇನ್ನೂ ಎರಡನೇ ಹಂತದಲ್ಲಿ ವಾಡ್ಕೋ-ಡ-ಗಾಮಾ-ವೇಲಂಕಣ್ಣಿ ವಿಶೇಷ ಎಕ್ಸ್‌ಪ್ರೆಸ್ ರೈಲು (07365/07366) ಒಂದೇ ಟ್ರಿಪ್ ಒದಗಿಸಲಿದೆ. ಮೊದಲಿಗೆ 07365 ಸಂಖ್ಯೆಯ ರೈಲು ಸೆಪ್ಟೆಂಬರ್ 06ರಂದು ಭಾನುವಾರ ರಾತ್ರಿ 21:55 ಗಂಟೆಗೆ ವಾಡ್ಕೋ-ಡ-ಗಾಮಾದಿಂದ ಹೊರಟು ಮಂಗಳವಾರ ಬೆಳಗ್ಗೆ 03:45 ಕ್ಕೆ ವೇಲಂಕಣ್ಣಿ ತಲುಪಲಿದೆ.

ಮರಳಿ ಅದೇ ದಿಕ್ಕಿನಲ್ಲಿ 07366 ಸಂಖ್ಯೆಯ ರೈಲು ಸೆಪ್ಟೆಂಬರ್ 09ರ ಬುಧವಾರ ಮಧ್ಯರಾತ್ರಿ01ಕ್ಕೆ ವೇಲಂಕಣ್ಣಿ ಯಿಂದ ಸಂಚಾರ ಆರಂಭಿಸಿ ಗುರುವಾರ ಬೆಳಗ್ಗೆ 3ಗಂಟೆಗೆ ವಾಸ್ಕೋ ಡ ಗಾಮಾ ನಿಲ್ದಾಣಕ್ಕೆ ಬರಲಿದೆ. ಈ ವಿಶೇಷ ರೈಲುಗಳು ಪ್ರತಿ ಸೇವೆಯ ಕಾರ್ಯಾರಣೆಯಯಲ್ಲೂ ಒಟ್ಟು 19 ಕೋಚ್‌ಗಳ ಹೊಂದಿರಲಿವೆ. ಅದರಲ್ಲಿ ಎಸಿ ತ್ರಿ ಟೈರ್, ಟು ಟೈರ್, ಎಸಿ ಒನ್ ಟೈರ್, ಜನರಲ್ ಬೋಗಿ, ನಾನ್ ಎಸಿ ಸ್ಲೀಪರ್ ಬೋಗಿಗಳು ಇರಲಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ರೈಲು ನಿಲುಗಡೆ ನಿಲ್ದಾಣಗಳು

ಈ ವಿಶೇಷ ರೈಲುಗಳು ಮಡಗಾಂವ್, ಕುಲೆಮ್, ಕ್ಯಾಸಲ್ ರಾಕ್, ಲೊಂಡಾ, ಧಾರವಾಡ, ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣ, ಹಾವೇರಿ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು ಮಾರ್ಗವಾಗಿ ಬೆಂಗಳೂರು SMVT, ಕೆ.ಆರ್.ಪುರ, ಬಂಗಾರಪೇಟೆ, ಸೇಲಂ, ನಾಮಕ್ಕಲ್, ಕರೂರ್, ತಿರುಚಿರಾಪಳ್ಳಿ, ತಂಜಾವೂರು, ತಿರುವರೂರ್ ಮತ್ತು ನಾಗಪಟ್ಟಣಂ ನಿಲ್ದಾಣಗಳಲ್ಲಿ ನಿಲುಗಡೆ ನೀಡುತ್ತ ಸಾಗಲಿದೆ.

ಪ್ರಯಾಣಿಕರು ಈ ರೈಲಿನ ಕುರಿತು ಹೆಚ್ಚಿನ ಮಾಹಿತಿ ತಿಳೀಯಲು ಅಧಿಕೃತ ವೆಬ್‌ಸೈಟ್ www.enquiry.indianrail.gov.in, NTES ಆಪ್ ಇಲ್ಲವೇ ಸಹಾಯವಾಣಿ 139ಗೆ ಸಂಪರ್ಕಿಸುವಂತೆ ನೈಋತ್ಯ ರೈಲ್ವೆಯು ಪ್ರಕಟಣೆಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+