11 ಮಂದಿ ಭಾರತೀಯರಿಗೆ ಸ್ವಿಸ್ ಬ್ಯಾಂಕ್ ನೋಟಿಸ್
ನವದೆಹಲಿ, ಮೇ 27: ತಮ್ಮ ಹಣದ ಮೂಲ, ಸಂಪೂರ್ಣ ಹೆಸರು ಮತ್ತು ವಿವಿಧ ವಿವರಗಳನ್ನು ನೀಡುವಂತೆ ಭಾರತದ 11 ಮಂದಿಗೆ ಸ್ವಿಸ್ ಬ್ಯಾಂಕ್ ನೋಟಿಸ್ ಜಾರಿ ಮಾಡಿದೆ.
ಮೇ 21ರಂದು ಒಂದೇ ದಿನ ಒಟ್ಟು 11 ಬಾರತೀಯರಿಗೆ ಈ ನೋಟಿಸ್ ಕಳುಹಿಸಿದ್ದು, ಮಾರ್ಚ್ ತಿಂಗಳನಿಂದ ಇದುವರೆಗೂ ಕನಿಷ್ಠ 25 ನೋಟಿಸ್‌ಗಳನ್ನು ತನ್ನ ಭಾರತೀಯ ಗ್ರಾಹಕರಿಗೆ ಕಳುಹಿಸಿದ್ದು, ಭಾರತ ಸರ್ಕಾರದ ಮುಂದೆ ಅವರ ಮಾಹಿತಿಗಳನ್ನು ಹಂಚಿಕೊಳ್ಳುವ ಮುನ್ನ ಮನವಿ ಸಲ್ಲಿಸಲು ಅವರಿಗೆ ಒಂದು ಅವಕಾಶ ನೀಡಿದೆ.
ಸ್ವಿಟ್ಜರ್ಲೆಂಡ್ ಸರ್ಕಾರದ ನೋಡಲ್ ಇಲಾಖೆ 'ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್', ಈ ನೋಟಿಸ್‌ಗಳನ್ನು ಜಾರಿ ಮಾಡಿದೆ. ಸ್ವಿಸ್ ಬ್ಯಾಂಕ್‌ಗಳಲ್ಲಿ ಹಣ ಇರಿಸಿರುವ ಭಾರತೀಯರ ವಿವರಗಳನ್ನು ಹಂಚಿಕೊಳ್ಳುವಂತೆ ಸಿಬಿಐ ಸೇರಿದಂತೆ ಅನೇಕ ತನಿಖಾ ಸಂಸ್ಥೆಗಳು ಸ್ವಿಟ್ಜರ್ಲೆಂಡ್ ಸರ್ಕಾರದ ಮೇಲೆ ಒತ್ತಡ ಹೇರಿದ್ದವು. ಅದರ ಫಲವಾಗಿ ಸ್ವಿಟ್ಜರ್ಲೆಂಡ್ ಈ ಕ್ರಮ ತೆಗೆದುಕೊಂಡಿದೆ.
ಈ ನೋಟಿಸ್‌ಗಳ ಮೂಲಕ ಭಾರತಕ್ಕೆ ಆಡಳಿತಾತ್ಮಕ ನೆರವು ಒದಗಿಸದೆ ಇರಲು ಅಗತ್ಯ ಎಲ್ಲ ದಾಖಲೆ ಪುರಾವೆಗಳನ್ನು 30 ದಿನಗಳ ಒಳಗೆ ಸಲ್ಲಿಕೆ ಮಾಡುವಂತೆ ಖಾತೆದಾರರು ಅಥವಾ ಅವರಿಗೆ ಸಂಬಂಧಿಸಿದ ಅಧಿಕೃತ ಪ್ರತಿನಿಧಿಗಳಿಗೆ ಸೂಚಿಸಲಾಗಿದೆ.
ಮೇ 7ರಂದು ಸ್ವಿಸ್ ಬ್ಯಾಂಕ್ ಭಾರತದ ರತನ್ ಸಿಂಗ್ ಚೌಧರಿ ಎಂಬುವವರಿಗೆ ನೋಟಿಸ್ ಜಾರಿ ಮಾಡಿತ್ತು. ಅವರಿಗೆ ಮಾಹಿತಿ ಒದಗಿಸಲು ಹತ್ತು ದಿನಗಳ ಅವಕಾಶ ನೀಡಲಾಗಿತ್ತು. ಇದಕ್ಕೂ ಮೊದಲು ಏಪ್ರಿಲ್‌ನಲ್ಲಿ ಜೆಎನ್‌ವಿ, ಕುಲದೀಪ್ ಸಿಂಗ್ ಡಿಂಗ್ರಾ ಮತ್ತು ಅನಿಲ್ ಭಾರದ್ವಾಜ್ ಎಂಬುವವರಿಗೆ 30 ದಿನಗಳ ಕಾಲಾವಕಾಶ ನೀಡಿ ನೋಟಿಸ್ ನೀಡಲಾಗಿತ್ತು.

ಇಬ್ಬರ ಹೆಸರು ಮಾತ್ರ ಬಹಿರಂಗ
ಈ 11 ಮಂದಿಯಲ್ಲಿ ಇಬ್ಬರ ಹೆಸರನ್ನು ಮಾತ್ರ ಬಹಿರಂಗಪಡಿಸಲಾಗಿದೆ. ಉಳಿದ 9 ಜನರ ಹೆಸರಿನ ಬದಲು ಅವರ ಹೆಸರಿನ ಇನಿಷಿಯಲ್‌ಗಳು ಮತ್ತು ಜನ್ಮದಿನಾಂಕವನ್ನು ಮಾತ್ರ ನೀಡಲಾಗಿದೆ. ಕೃಷ್ಣ ಭಗವಾನ್ ರಾಮಚಂದ್ (ಹುಟ್ಟಿದ ದಿನಾಂಕ ಮೇ 1949) ಮತ್ತು ಕಲ್ಪೇಶ್ ಹರ್ಷದ್ ಕಿನರಿವಾಲಾ (ಜನ್ಮದಿನಾಂಕ ಸೆಪ್ಟೆಂಬರ್ 1949) ಅವರ ಹೆಸರನ್ನು ಬಹಿರಂಗಪಡಿಸಲಾಗಿದೆ.

9 ಮಂದಿಯ ಇನಿಷಿಯಲ್ ಮಾತ್ರ ಪ್ರಕಟ
ಉಳಿದ 9 ಮಂದಿಯ ಹೆಸರಿನ ಮೊದಲಾಕ್ಷರಗಳನ್ನು ಮಾತ್ರ ತಿಳಿಸಲಾಗಿದೆ. ಶ್ರೀಮತಿ ಎಎಸ್‌ಬಿಕೆ (ನವೆಂಬರ್ 24, 1944), ಶ್ರೀಮತಿ ಪಿಎಎಸ್ (ನವೆಂಬರ್ 1, 1983), ಶ್ರೀ ಎಪಿಎಸ್ (ನವೆಂಬರ್ 27, 1944), ಶ್ರೀ ಎಬಿಕೆಐ (ಜುಲೈ 9, 1944), ಶ್ರೀಮತಿ ಆರ್‌ಎಸ್ (ನವೆಂಬರ್ 22, 1973), ಶ್ರೀಮತಿ ಎಡಿಎಸ್ (ಆಗಸ್ಟ್ 14, 1949), ಶ್ರೀ ಎಂಎಲ್‌ಎ (ಮೇ 20, 1935), ಶ್ರೀ ಎನ್‌ಎಂಎ (ಫೆಬ್ರವರಿ 21, 1968), ಶ್ರೀ ಎಂಎಂಎ (ಜೂನ್ 27, 1973).

ಗ್ರಾಹಕರ ವಿವರ ಹಂಚಿಕೊಳ್ಳುವುದಿಲ್ಲ
ಕಪ್ಪುಹಣ ಮತ್ತು ಕಾನೂನಿಗೆ ವಿರುದ್ಧವಾಗಿ ಸಂಪಾದಿಸಿದ ಹಣವನ್ನು ಇರಿಸಿಕೊಳ್ಳಲು ಸ್ವಿಸ್ ಬ್ಯಾಂಕ್ ಅವಕಾಶ ನೀಡುವುದಿಲ್ಲ. ಭಾರತ ಸೇರಿದಂತೆ ವಿವಿಧ ದೇಶಗಳು ನಡೆಸುತ್ತಿರುವ ತನಿಖೆಗಳಿಗೆ ಬ್ಯಾಂಕ್ ಸಹಕರಿಸುತ್ತಾ ಬಂದಿದೆ. ಆದರೆ, ಹಾಗೆಂದ ಮಾತ್ರಕ್ಕೆ ಬ್ಯಾಂಕಿನ ಗ್ರಾಹಕರ ವಿವರಗಳನ್ನು ಬ್ಯಾಂಕ್ ಎಂದಿಗೂ ಹಂಚಿಕೊಳ್ಳುವುದಿಲ್ಲ ಎಂದು ತಿಳಿಸಿದೆ.

ಸ್ವಯಂಚಾಲಿತ ಮಾಹಿತಿ ವಿನಿಮಯ
ಮುಂದಿನ ವರ್ಷದಿಂದ ಬ್ಯಾಂಕ್ ಹೊಸ ನೀತಿ ನಿಯಮಗಳನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದೆ. ಇದರಲ್ಲಿ ಸ್ವಯಂಚಾಲಿತ ಮಾಹಿತಿ ವಿನಿಮಯ ಪದ್ಧತಿ ಜಾರಿಗೆ ತರಲು ಉದ್ದೇಶಿಸಲಾಗಿದೆ. ಸ್ವಿಟ್ಜರ್ಲೆಂಡ್ ಸರ್ಕಾರವು ಅನೇಕ ದೇಶಗಳೊಂದಿಗೆ ತನ್ನ ಗ್ರಾಹಕರ ಮಾಹಿತಿಗಳನ್ನು ಹಂಚಿಕೊಂಡಿದೆ. ಭಾರತದ ತನಿಖಾ ಸಂಸ್ಥೆಗಳಿಗೂ ಮಾಹಿತಿ ನೀಡಲು ಮುಂದಾಗಿದೆ. ಹಣದ ಮೂಲ ತಿಳಿಸದ ವ್ಯಕ್ತಿಗಳಿಗೆ ನೋಟಿಸ್ ನೀಡಲಾಗಿದೆ.
-
ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ: ಜಾಗತಿಕ ಪೂರೈಕೆ ವ್ಯತ್ಯಯದ ಬಗ್ಗೆ ಆತಂಕ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್‌ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ












Click it and Unblock the Notifications