ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾಮಿ ಅಗ್ನಿವೇಶ್ ಮೇಲೆ ಬಿಜೆಪಿ ಕಾರ್ಯಕರ್ತರಿಂದ ದಾಳಿ

By Mahesh
|
Google Oneindia Kannada News

ರಾಂಚಿ, ಜುಲೈ 17: ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಮೇಲೆ ಭಾರತೀಯ ಜನತಾ ಪಾರ್ಟಿಯ ಯುವ ಘಟಕದ ಕಾರ್ಯಕರ್ತರು ಮಂಗಳವಾರದಂದು ಹಲ್ಲೆ ಮಾಡಿದ್ದಾರೆ.

ಬಿಜೆಪಿ ಕಾರ್ಯಕರ್ತರಲ್ಲದೆ ರಾಷ್ಟ್ರೀಯ ಸ್ವಯ ಸೇವಕ ಸಂಘ(ಆರೆಸ್ಸೆಸ್), ವಿಶ್ವ ಹಿಂದೂ ಪರಿಷತ್ (ವಿಎಚ್ ಪಿ) ಕಾರ್ಯಕರ್ತರು ಕೂಡಾ ದಾಳಿ ಮಾಡಿದ್ದಾರೆ.

ಸ್ವಾಮಿ ಅಗ್ನಿವೇಶ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಅವರ ಬಟ್ಟೆಯನ್ನು ಹರಿದು ಹಾಕಿದ್ದಾರೆ.

ಸನಾತನ ಧರ್ಮದ ವಿರುದ್ಧ ಸ್ವಾಮಿ ಅಗ್ನಿವೇಶ್ ನಡೆದುಕೊಳ್ಳುತ್ತಿದ್ದಾರೆ. ಕ್ರಿಶ್ಚಿಯನ್ ಮಿಷನರಿಗಳಿಗೆ ನೆರವಾಗುತ್ತಿದ್ದಾರೆ ಎಂದು ಆರೋಪ ಹೊರೆಸಲಾಗಿದೆ.

Social activist Swamy Agnivesh attacked b BJP workers Jharkhand.

ಹರ್ಯಾಣದಲ್ಲಿ ಒಂದು ಕಾಲದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರಾಗಿದ್ದ ಸ್ವಾಮಿ ಅಗ್ನಿವೇಶ್ ಅವರು ರಾಜಕೀಯ ತೊರೆದು ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ. ಭ್ರಷ್ಟಾಚಾರ ವಿರುದ್ಧದ ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.

ಜಾರ್ಖಂಡ್ ನ ಲಿಟ್ಟಿಪಡದಲ್ಲಿ ಕಾರ್ಯಕ್ರಮವೊಂದರಲ್ಲಿ ಮಂಗಳವಾರದ ಬೆಳಗ್ಗೆ ಪಾಲ್ಗೊಳ್ಳಲು ಸ್ವಾಮಿ ಅಗ್ನಿವೇಶ್ ಅವರು ಬಂದಿದ್ದರು. ಹೋಟೆಲ್ ನಿಂದ ಹೊರಕ್ಕೆ ಬರುತ್ತಿದ್ದಂತೆ ಬಲಪಂಥೀಯ ಕಾರ್ಯಕರ್ತರು ಏಕಾಏಕಿ ದಾಳಿ ನಡೆಸಿದ್ದಾರೆ. ಸದ್ಯ ಸ್ವಾಮಿ ಅಗ್ನಿವೇಶ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

English summary
Social activist Swamy Agnivesh was beaten up by the workers of Bharatiya Janta Party's youth wing on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X