ಸುಶಾಂತ್ ಸಿಂಗ್ ಸಾವಿನಲ್ಲಿ ಈ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ:ಸುಬ್ರಮಣಿಯನ್ ಸ್ವಾಮಿ

ನವದೆಹಲಿ, ಆ 21: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿಚಾರದಲ್ಲಿ, ರಾಜಕೀಯ ಮತ್ತು ದುಬೈ ನಂಟನ್ನು ತಳ್ಳಿ ಹಾಕುವಂತಿಲ್ಲ ಎಂದು ಬಿಜೆಪಿಯ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

"ಕ್ರಿಮಿನಲ್ ಗಳು ಎಷ್ಟೇ ಪ್ರಚಂಡರಾಗಿದ್ದರೂ, ಒಂದಲ್ಲಾ ಒಂದು ಸಾಕ್ಷಿಯನ್ನು ಬಿಟ್ಟು ಹೋಗಿರುತ್ತಾರೆ. ಅದೇ ರೀತಿ ಸುಶಾಂತ್ ಸಾವಿನಲ್ಲೂ ಕೆಲವೊಂದು ಸೂಕ್ಷ್ಮ ಸಾಕ್ಷಿಗಳಿವೆ" ಎಂದು ಸ್ವಾಮಿ ಹೇಳಿದ್ದಾರೆ.

"ಅಕ್ರಮ ಹಣ ವರ್ಗಾವಣೆಯಿಂದ ದುಬೈ ಸುಪಾರಿ ಕಿಲ್ಲರ್ ಗಳ ಪಾತ್ರ ಈ ವಿಚಾರದಲ್ಲಿ ತಳ್ಳಿ ಹಾಕುವಂತಿಲ್ಲ. ಪರ್ಫೆಕ್ಟ್ ಕ್ರೈಂ ಮಾಡಲು ಯಾರಿಂದಲೂ ಸಾಧ್ಯವಿಲ್ಲ"ಎಂದು ಸುಬ್ರಮಣಿಯನ್ ಸ್ವಾಮಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

Sushant Singh Death: Possibility Of Money Laundering And Dubai Link; Subramanian Swamy Statement

ಸುಶಾಂತ್ ಸಾವಿನ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕೆಂದು ಬಲವಾಗಿ ಪ್ರತಿಪಾದಿಸಿದವರಲ್ಲಿ ಸುಬ್ರಮಣಿಯನ್ ಸ್ವಾಮಿ ಕೂಡಾ ಒಬ್ಬರು. "ಸುಶಾಂತ್ ಸಿಂಗ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಲ್ಲರೂ ನಂಬಿದ್ದಾರೆ. ಆದರೆ ಅವರ ಕತ್ತಿನ ಸುತ್ತ ಹಗ್ಗ ಬಿಗಿದ ಕಲೆ ಹತ್ಯೆ ಮಾಡಿದ್ದಾಗಿದೆ. ಹತ್ಯೆ ಮಾಡಿ ನೇಣಿಗೆ ಹಾಕಿದ್ದಂತಿದೆ" ಎಂದು ಸ್ವಾಮಿ ಹೇಳಿದ್ದರು.

ಸುಶಾಂತ್ ಸತ್ತದ್ದು, ಆತ್ಮಹತ್ಯೆಯಿಂದಲ್ಲ, ಇದು ಕೊಲೆ ಎಂದು ಸಂಸದ ಸುಬ್ರಮಣಿಯನ್ ಸ್ವಾಮಿ ಮಾಡಿದ್ದ ಟ್ವೀಟ್ ಭಾರಿ ಕುತೂಹಲ ಮೂಡಿಸಿತ್ತು. ಸುಶಾಂತ್ ಸಾವು ಕೊಲೆ ಎಂದು ಹೇಳಲು 26 ಅಂಶಗಳನ್ನು ಹೊಂದಿರುವ ಪಟ್ಟಿಯುಳ್ಳ ಪೋಟೋವನ್ನು ಸ್ವಾಮಿ ಹಾಕಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+