ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಜಿಕಲ್ ಸ್ಟ್ರೈಕ್ ಬರೀ ಕಥೆ, ಸುಳ್ಳಿನ ಅಂತೆ..ಕಂತೆ: ಕಾಂಗ್ರೆಸ್ ಮುಖಂಡ

|
Google Oneindia Kannada News

ಮುಂಬೈ, ಅ 5: ಪಾಕ್ ಗಡಿ ಭಾಗದಲ್ಲಿ ಭಾರತದ ಯೋಧರು ನಡೆಸಿದ ಸೀಮಿತ ದಾಳಿ (ಸರ್ಜಿಕಲ್ ಸ್ಟ್ರೈಕ್) ಬರೀ ಕಟ್ಟುಕಥೆ, ಸುಳ್ಳಿನ ಕಂತೆ. ರಾಜಕೀಯ ಲಾಭ ಗಿಟ್ಟಿಸಿಕೊಳ್ಳಲು ಬಿಜೆಪಿ ಇಂಥ ಪ್ರಚಾರ ಮಾಡುತ್ತಿದೆ ಎಂದು ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ಗಂಭೀರ ಹೇಳಿಕೆ ನೀಡಿದ್ದಾರೆ.

ಸಂಜಯ್ ನಿರುಪಮ್ ಹೇಳಿಕೆಗೆ ನಮ್ಮ ಸಹಮತವಿಲ್ಲ, ಆದರೆ ಕೇಂದ್ರ ಸರಕಾರ ಸೀಮಿತ ದಾಳಿ ನಡೆದಿದ್ದಕ್ಕೆ ಪುರಾವೆ ದೇಶದ ಮುಂದಿಡಲಿ ಎಂದು ಕಾಂಗ್ರೆಸ್ ಹೈಕಮಾಂಡ್ ಹೊಸ ಒರಸೆ ಎತ್ತಿದೆ. (ಸರ್ಜಿಕಲ್ ದಾಳಿ: ಕೇಜ್ರಿ ಹೇಳಿಕೆಯಲ್ಲಿ ತಪ್ಪೇನಿದೆ)

ಸರ್ಜಿಕಲ್ ಸ್ಟ್ರೈಕ್ ನಡೆಸಿ, ಮೋದಿಯವರು ಮೊದಲ ಬಾರಿಗೆ ಪ್ರಧಾನಿಯಂತೆ ಕೆಲಸ ಮಾಡಿದ್ದಾರೆ, ಅವರಿಗೆ ಅಭಿನಂದನೆಗಳು ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ವಿರುದ್ದವಾಗಿ ಕಾಂಗ್ರೆಸ್ ಮುಖಂಡ ನಿರುಪಮ್ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಭಾರತದ ವಿರುದ್ದ ಪಾಕಿಸ್ತಾನ ಅಪಪ್ರಚಾರ ಮಾಡುತ್ತಿದೆ, ಇದಕ್ಕೆ ಬ್ರೇಕ್ ಹಾಕಬೇಕಾದರೆ ಸಾಕ್ಷಿ ಬಹಿರಂಗ ಪಡಿಸುವುದೇ ಸೂಕ್ತ ಎಂದು ಎಐಸಿಸಿ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ. ( ಮೋದಿಯನ್ನು ಅಭಿನಂದಿಸಿದ ರಾಹುಲ್ ಗಾಂಧಿ)

ನಮಗೆ ನಮ್ಮ ಸೈನಿಕರ ಮೇಲೆ ಯಾವುದೇ ಸಂಶಯವಿಲ್ಲ, ಆದರೆ ಸರ್ಜಿಕಲ್ ಸ್ಟ್ರೈಕ್ ವಿಚಾರದಲ್ಲಿ ನರೇಂದ್ರ ಮೋದಿ ಸರಕಾರ ರಾಜಕೀಯ ಮಾಡುವುದನ್ನು ಬಿಡಬೇಕು ಎಂದು ಸುರ್ಜೇವಾಲಾ ಮನವಿ ಮಾಡಿದ್ದಾರೆ. ಕಾಂಗ್ರೆಸ್ ಮುಖಂಡರ ಅಭಿಪ್ರಾಯ, ಕೆಲವೊಂದು ಟ್ವೀಟ್, ಮುಂದೆ ಓದಿ

ಉಲ್ಟಾ ಹೊಡೆದ ಸಂಜಯ್

ಉಲ್ಟಾ ಹೊಡೆದ ಸಂಜಯ್

ನಾನು ಸರ್ಜಿಕಲ್ ಸ್ಟ್ರೈಕಿನ ವಿಡಿಯೋ ಬಿಡುಗಡೆ ಮಾಡಿ ಎಂದು ಕೇಳುತ್ತಿಲ್ಲ. ದೇಶದ ಭದ್ರತೆಯ ದೃಷ್ಟಿಯಿಂದ ವಿಡಿಯೋ ಬಿಡುಗಡೆ ಮಾಡುವುದು ಸಾಧ್ಯವಿಲ್ಲ ಎನ್ನುವುದು ತಿಳಿದಿದೆ, ಆದರೆ ಸರಕಾರ ಏನಾದರೂ ಈ ದಾಳಿ ಬಗ್ಗೆ ಸಾಕ್ಷಿ ಬಿಡುಗಡೆ ಮಾಡಬೇಕೆಂದು ಸಂಜಯ್ ನಿರುಪಮ್ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ.

ದಾಳಿ ಹಿಂದೆಯೂ ನಡೆದಿತ್ತು

ದಾಳಿ ಹಿಂದೆಯೂ ನಡೆದಿತ್ತು

ಅಗತ್ಯಕ್ಕೆ ಅನುಗುಣವಾಗಿ ಸೇನಾ ಪಡೆಗಳು ಈ ಹಿಂದೆಯೂ ದಾಳಿ ನಡೆಸಿವೆ. ಉಗ್ರರ ಶಿಬಿರಗಳ ಮೇಲೆ ನಿರ್ದಿಷ್ಟ ದಾಳಿ ನಡೆದಿರುವುದು, ಸೇನೆ ನಡೆಸಿದ ಈ ಮಾದರಿಯ ಮೊದಲ ಕಾರ್ಯಾಚರಣೆ ಎನ್ನುವುದನ್ನು ನಾವು ಒಪ್ಪುವುದಿಲ್ಲ - ಕಾಂಗ್ರೆಸ್ ಮುಖಂಡ ಆನಂದ ಶರ್ಮಾ.

ವಿಡಿಯೋ ಬಿಡುಗಡೆ ಮಾಡಿ

ವಿಡಿಯೋ ಬಿಡುಗಡೆ ಮಾಡಿ

ಈ ರೀತಿಯ ದಾಳಿ ಹಿಂದೆ ಕೂಡಾ ನಡೆದಿತ್ತು ಎಂದು ಜನರಲ್ ಬಿಕ್ರಂ ಸಿಂಗ್ ಕೂಡಾ ಖಚಿತ ಪಡಿಸಿದ್ದಾರೆ. ಬಿಜೆಪಿ ರಾಜಕೀಯ ಲಾಭಕ್ಕೆ ಇದನ್ನು ಬಳಸಿಕೊಳ್ಳುತ್ತಿದೆ, ಸರ್ಜಿಕಲ್ ಸ್ಟ್ರೈಕಿನ ಸಾಕ್ಷಿ ಬಿಡುಗಡೆ ಮಾಡಲಿ - ಪಿ ಚಿದಂಬರಂ.

ಗಡಿನಿಯಂತ್ರಣ ರೇಖೆ

ಸಂಜಯ್ ನಿರುಪಮ್, ಓಂ ಪುರಿ ಮತ್ತು ಕೇಜ್ರಿವಾಲ್ ಈ ಮೂವರನ್ನು ಗಡಿ ನಿಯಂತ್ರಣ ರೇಖೆಯಲ್ಲಿರುವ ಬಂಕರ್ ನಲ್ಲಿ ಕಟ್ಟಿಹಾಕಬೇಕು.

ಅಂತ್ಯವಿಲ್ಲದ ಗಿಮಿಕ್

ಸಂಜಯ್ ನಿರುಪಮ್ ಗಿಮಿಕ್ ಗೆ ಅಂತ್ಯವಿಲ್ಲ. ಕಾಂಗ್ರೆಸ್ ಪಕ್ಷದೊಳಗಿನ ಸಮಸ್ಯೆಯ ಬಗ್ಗೆ ಮಾತನಾಡಲಿ.

English summary
Surgical Strikes on Pakistan was Fake, Need Proof, Congress leader Sanjay Nirupam. However, Congress disowned its leader statement. At the same time, party said the government must "call Pakistan's bluff".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X