ಉಗ್ರರ ಮೇಲೆ ದಾಳಿ #Modipunishespak ಟ್ರೆಂಡಿಂಗ್

Posted By:
Subscribe to Oneindia Kannada

ನವದೆಹಲಿ, ಸೆ. 29: ಗಡಿ ನಿಯಂತ್ರಣ ರೇಖೆ ಬಳಿ ಇದ್ದ ಉಗ್ರರ ಕ್ಯಾಂಪ್ ಗಳ ಮೇಲೆ ಭಾರತೀಯ ಸೇನೆ ಬುಧವಾರ ರಾತ್ರಿ ನಡೆಸಿದ ಕಾರ್ಯಾಚರಣೆ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕ ಚರ್ಚೆ, ಬೆಂಬಲ ವ್ಯಕ್ತವಾಗಿದೆ. ಈ ನಡುವೆ ಸಾಮಾಜಿಕ ಜಾಲ ತಾಣಗಳಲ್ಲಿ Surgial Strike ಹಾಗೂ #Modipunishespak ಟ್ರೆಂಡಿಂಗ್ ನಲ್ಲಿದೆ.

ಸುಮಾರು 7 ಕ್ಯಾಂಪಿನ ಮೇಲೆ ದಾಳಿ ನಡೆಸಲಾಗಿದ್ದು, 38ಕ್ಕೂ ಅಧಿಕ ಉಗ್ರರನ್ನು ಹತ್ಯೆ ಮಾಡಲಾಗಿದೆ. ಗಡಿ ನಿಯಂತ್ರಣ ರೇಖೆ ಬಳಿಯ ಕೇಲ್ ಮತ್ತು ಭೀಮ್ ಬರ್ ಪ್ರದೇಶದಲ್ಲಿ ಸೀಮಿತ ದಾಳಿ ನಡೆಸಿದೆ. [ಎಷ್ಟು ಉಗ್ರರ ಕ್ಯಾಂಪ್ ಧ್ವಂಸ, ಎಷ್ಟು ಜನ ಉಗ್ರರು ಬಲಿ?]

ಬುಧವಾರ ರಾತ್ರಿ 12.30 ಹಾಗೂ 4.30 ರ ಸುಮಾರಿಗೆ ದಾಳಿ ನಡೆದಿದೆ ಎಂದು ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಅವರು ಹೇಳಿದ್ದಾರೆ. ಈ ರೀತಿ ನಡೆದ ಘಟನೆ ಬಗ್ಗೆ, ಮೋದಿ ಅವರ ಎದೆಗಾರಿಕೆ ಬಗ್ಗೆ, ಪಾಕ್ ಪರ ಮಾತನಾಡುವ ಬುದ್ಧಿಜೀವಿಗಳ ಬಗ್ಗೆ ಅನೇಕಾನೇಕ ಟ್ವೀಟ್ ಗಳು ಬರುತ್ತಿವೆ.[ಸರ್ಜಿಕಲ್ ಆಪರೇಷನ್' ಅಂದರೆ ಏನು]

ಉಗ್ರರ ವಿರುದ್ಧ ಕಾರ್ಯಾಚರಣೆ ಬಗ್ಗೆ ಮೋದಿ ಅವರು ಆಪ್ ಕಿ ಅದಾಲತ್ ನಲ್ಲಿ ನೀಡಿದ್ದ ಘೋಷಣೆ, ಸೆಪ್ಟೆಂಬರ್ ತಿಂಗಳಿನಲ್ಲಿ ಮಾಡಿದ್ದ ಹಳೆ ಟ್ವೀಟ್ ಈಗ ಮತ್ತೆ ಟ್ರೆಂಡಿಂಗ್ ಪೂಲ್ ನಲ್ಲಿ ಹರಿದಾಡುತ್ತಿದೆ.

ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕ ಚರ್ಚೆ

ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕ ಚರ್ಚೆ

ಗಡಿ ನಿಯಂತ್ರಣ ರೇಖೆ ಬಳಿ ಇದ್ದ ಉಗ್ರರ ಕ್ಯಾಂಪ್ ಗಳ ಮೇಲೆ ಭಾರತೀಯ ಸೇನೆ ಬುಧವಾರ ರಾತ್ರಿ ನಡೆಸಿದ ಕಾರ್ಯಾಚರಣೆ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕ ಚರ್ಚೆ, ಬೆಂಬಲ ವ್ಯಕ್ತವಾಗಿದೆ. ಈ ನಡುವೆ ಸಾಮಾಜಿಕ ಜಾಲ ತಾಣಗಳಲ್ಲಿ Surgial Strike ಹಾಗೂ #Modipunishespak ಟ್ರೆಂಡಿಂಗ್ ನಲ್ಲಿದೆ.

ರಾಹುಲ್ ಗಾಂಧಿ ರಿಯಾಕ್ಷನ್ ಹೇಗಿರುತ್ತೆ

ಸರ್ಜಿಕಲ್ ಸ್ಟ್ರೈಕ್ ಎಂದರೆ ಏನು? ರಾಹುಲ್ ಗಾಂಧಿ ರಿಯಾಕ್ಷನ್ ಹೇಗಿರುತ್ತೆ ಎಂಬುದು ಈ ಫನ್ನಿ ಟ್ವೀಟ್ ನಲ್ಲಿದೆ ನೋಡಿ

ಪಾಕಿಸ್ತಾನಕ್ಕೆ ಹಬ್ಬದ ಸಮಯದಲ್ಲಿ ವಿಶೇಷ ಆಫರ್

ಪಾಕಿಸ್ತಾನಕ್ಕೆ ಹಬ್ಬದ ಸಮಯದಲ್ಲಿ ವಿಶೇಷ ಆಫರ್, ಹೋಂ ಡೆಲಿವರಿ ಶುರು ಮಾಡಿರುವ ಭಾರತೀಯ ಸೇನೆ.

ಪಾಟ್ನದಲ್ಲಿ ಸಂಭ್ರಮಾಚರಣೆ ಹೀಗಿದೆ

ಭಾರತೀಯ ಸೇನೆಯ ಯಶಸ್ವಿ ಕಾರ್ಯಾಚರಣೆ ಬಗ್ಗೆ ಪಾಟ್ನದಲ್ಲಿ ಸಂಭ್ರಮಾಚರಣೆ ಹೀಗಿತ್ತು.

ಭಾರತ ವಿರೋಧಿ ಸೆಲೆಬ್ರಿಟಿಗಳು ಈಗ ಎಲ್ಲಿದ್ದಾರೆ

ಭಾರತ ವಿರೋಧಿ ಸೆಲೆಬ್ರಿಟಿಗಳು ಈಗ ಎಲ್ಲಿದ್ದಾರೆ ಎಂಬ ಚಿತ್ರ ಸಮೇತ ಟ್ವೀಟ್

ನರೇಂದ್ರ ಮೋದಿ ಅವರು ಮಾತು ಉಳಿಸಿಕೊಂಡ್ರು

ನರೇಂದ್ರ ಮೋದಿ ಅವರು ಮಾತು ಉಳಿಸಿಕೊಂಡ್ರು ಎಂದು ಟ್ವೀಟ್ ಮಾಡಿದ ಲೇಖಕ ಚೇತನ್ ಭಗತ್.

56 ಇಂಚಿನ ಎದೆಗಾರಿಕೆ ಬಗ್ಗೆ ಹೆಮ್ಮೆ

56 ಇಂಚಿನ ಎದೆಗಾರಿಕೆ ಬಗ್ಗೆ ಹೆಮ್ಮೆ ಎಂಬ ಟ್ವೀಟ್ ಮಾಡಿದ ಸಾರ್ವಜನಿಕರು.

ಸರ್ಜಿಕಲ್ ಸ್ಟ್ರೈಕ್ ನಂತರ ಆದ ಆರ್ಥಿಕ ಬೆಳವಣಿಗೆಗಳು

ಸರ್ಜಿಕಲ್ ಸ್ಟ್ರೈಕ್ ನಂತರ ಆದ ಆರ್ಥಿಕ ಬೆಳವಣಿಗೆಗಳು, ಸೂಚ್ಯಂಕದಲ್ಲಿ ಕುಸಿತ, ರುಪಾಯಿ ಮೌಲ್ಯ ಏರುಪೇರು.

ಭಾರತೀಯ ಸೇನೆಗೆ ಎಲ್ಲೆಡೆಯಿಂದ ಪ್ರಶಂಸೆ ಬರುತ್ತಿದೆ

ಭಾರತೀಯ ಸೇನೆಗೆ ಎಲ್ಲೆಡೆಯಿಂದ ಪ್ರಶಂಸೆ ಬರುತ್ತಿದೆ, ನಿಮ್ಮೊಂದಿಗೆ ನಾವಿದ್ದೇವೆ ಮುಂದುವರೆಯಿರಿ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In the surgical strike carried out by the special forces, seven terror launch pads were destroyed. On Social Media #Surgicalstrikek and #Modipunishespak are trending on top.
Please Wait while comments are loading...