Suresh Gopi: ಕೇಂದ್ರ ಸಚಿವನಾದ ಮೇಲೆ ದುಡ್ಡೇ ಇಲ್ಲ: ನಟನೆ ಮಾಡ್ತೀನಿ ಎಂದ ಕೇರಳದ ಏಕೈಕ ಬಿಜೆಪಿ ಸಂಸದ!
Suresh Gopi: ಉತ್ತರ ಭಾರತದಲ್ಲಿ ಬಿಜೆಪಿ ಬಲವರ್ಧನೆ ಆಗುತ್ತಿದ್ದರೂ, ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಸಂಕಷ್ಟದ ಸಮಯ ಎದುರಾಗಿದೆ. ದಕ್ಷಿಣದ ಯಾವುದೇ ರಾಜ್ಯದಲ್ಲೂ ಸ್ವತಂತ್ರ್ಯವಾಗಿ ಬಿಜೆಪಿ ಅಧಿಕಾರದಲ್ಲಿ ಇಲ್ಲ. ಇನ್ನು ಆಂಧ್ರಪ್ರದೇಶದಲ್ಲಿ ಸಮಿಶ್ರ ಸರ್ಕಾರದೊಂದಿಗೆ ಗುರುತಿಸಿಕೊಂಡಿದೆಯಾದರೂ ಅಲ್ಲಿ ಬಿಜೆಪಿಯ ಪಾತ್ರವೇನು ಸಹ ಇಲ್ಲ. ಇನ್ನು ಕೇರಳ ಹಾಗೂ ತಮಿಳುನಾಡಿನಲ್ಲಂತೂ ಬಿಜೆಪಿ ಪಕ್ಷವು ಒಮ್ಮೆಯೂ ಅಧಿಕಾರಕ್ಕೆ ಬಂದಿಲ್ಲ. ಇದೀಗ ಕೇರಳದಲ್ಲಿ ಒಬ್ಬೇ ಒಬ್ಬರು ಬಿಜೆಪಿ ಸಂಸದರಿದ್ದು ಅವರು ಕೊಡುತ್ತಿರುವ ಹೇಳಿಕೆಗಳು ಬಿಜೆಪಿ ಪಕ್ಷಕ್ಕೆ ಮುಳುವಾಗುತ್ತಿದೆ.
ಬಿಜೆಪಿ ಪಕ್ಷವು ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೇರುವುದಕ್ಕೆ ತಿಣುಕಾಡುತ್ತಿದೆ. ಅಲ್ಲದೇ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ತನ್ನ ಸ್ಥಾನವನ್ನು ಹೆಚ್ಚಳ ಮಾಡಿಕೊಳ್ಳುವುದಕ್ಕೆ ಬಿಜೆಪಿ ಪಕ್ಷವು ಇನ್ನಿಲ್ಲದಂತೆ ಸರ್ಕಸ್ ಮಾಡುತ್ತಿದೆ. ಇದೀಗ ಕೇರಳ ಬಿಜೆಪಿಯ ಏಕೈಕ ಸಂಸದ ಮತ್ತು ಕೇಂದ್ರ ಸಚಿವ ಸುರೇಶ್ ಗೋಪಿ ಅವರು ಇದೀಗ ನಟನೆಗೆ ಮರಳುವ ಆಸೆ ವ್ಯಕ್ತಪಡಿಸಿದ್ದಾರೆ. ಇದು ಬಿಜೆಪಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಕೇರಳದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆಯು ನಡೆಯಲಿದೆ. ಇದೀಗ ಎಲ್‌ಡಿಎಫ್ (ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್) ಪಾರ್ಟಿ ಅಧಿಕಾರದಲ್ಲಿದೆ. ಈ ಪಕ್ಷ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ.

ಈ ನಡುವೆ ಸುರೇಶ್ ಗೋಪಿ ಅವರು ನಾನು ಮತ್ತೆ ಸಿನಿಮಾ ನಟನಾಗುವುದಕ್ಕೆ ಇಷ್ಟಪಡುತ್ತಿದ್ದೇನೆ ಅಂತ ಹೇಳಿರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಸಾರ್ವಜನಿಕ ಕಾರ್ಯಕ್ರಮದಲ್ಲೇ ನನಗೆ ಕೇಂದ್ರ ಸಚಿವ ಸ್ಥಾನವೇನು ಬೇಡ. ನಟನೆಗೆ ಮತ್ತೆ ಮರಳುತ್ತೇನೆ ಎಂದಿದ್ದಾರೆ. ತ್ರಿಶೂರ್ ಬಿಜೆಪಿ ಸಂಸದರ ಹೇಳಿಕೆ ಇದೀಗ ಬಿಜೆಪಿಗೆ ನುಂಗಲಾರದ ತುಪ್ಪವಾಗಿ ಬದಲಾಗಿದೆ. ಕೇರಳದ ಕಣ್ಣೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಸಂಸದ ಸುರೇಶ್ ಗೋಪಿ ಅವರು, ಸಚಿವ ಹುದ್ದೆ ಬಂದ ಮೇಲೆ ನನ್ನ ಆದಾಯ ಸಿಕ್ಕಾಪಟ್ಟೆ ಕಡಿಮೆ ಆಗಿದೆ. ಸಿನಿಮಾದಿಂದ ದುಡ್ಡು ಸಿಗುತ್ತಿತ್ತು. ಸಿನಿಮಾ ಬಿಟ್ಟು ಸಚಿವನಾಗಬೇಕು ಎನ್ನುವ ಆಸೆ ನನಗೆ ಇರಲಿಲ್ಲ ಎಂದಿದ್ದು, ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಆಸೆ ವ್ಯಕ್ತಪಡಿಸಿದ್ದಾರೆ.
ಇನ್ನು ಸಚಿವ ಸ್ಥಾನ ಸಿಕ್ಕಾಗಲೇ ನನಗೆ ಸಚಿವ ಸ್ಥಾನ ಬೇಡ ಅಂತ ಸುರೇಶ್ ಗೋಪಿ ಅವರು ಹೇಳಿದ್ದರು. ನಾನು ನಿಜವಾಗಿಯೂ ನಟನೆಯನ್ನು ಮುಂದುವರಿಸಲು ಇಷ್ಟಪಡುತ್ತೇನೆ. ನಾನು ಹೆಚ್ಚು ಗಳಿಸಬೇಕು ನನ್ನ ಆದಾಯ ಈಗ ಸಂಪೂರ್ಣವಾಗಿ ನಿಂತುಹೋಗಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೇ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಸಚಿವ ಸ್ಥಾನವನ್ನು ರಾಜ್ಯಸಭಾ ಸಂಸದ ಸಿ ಸದಾನಂದನ್ ಮಾಸ್ಟರ್ ಕೊಡುವಂತೆಯೂ ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ. ನಾನು ಎಂದಿಗೂ ಸಚಿವನಾಗಬೇಕು ಅಂತ ಅಂದುಕೊಂಡಿರಲಿಲ್ಲ. ನಾನು ಮುಂದಿನ ದಿನಗಳಲ್ಲಿ ಸಿನಿಮಾದಲ್ಲಿ ನಟಿಸುವುದಕ್ಕೆ ಇಚ್ಛಿಸುತ್ತೇನೆ ಎಂದಿದ್ದಾರೆ.












Click it and Unblock the Notifications