ಸಲಿಂಗಕಾಮಕ್ಕೆ ಸಮ್ಮತಿ ನೀಡಲಿದೆಯಾ ಸುಪ್ರಿಂ ಕೋರ್ಟ್?

Subscribe to Oneindia Kannada

ನವದೆಹಲಿ, ಜನವರಿ 9: ಸಲಿಂಗಕಾಮ ಅಪರಾಧವೆಂದು ಪರಿಗಣಿಸಿ 2013ರಲ್ಲಿ ತಾನು ನೀಡಿದ್ದ ತೀರ್ಪನ್ನು ಮರುಪರಿಶೀಲನೆ ಮಾಡುವುದಾಗಿ ಸುಪ್ರಿಂ ಕೋರ್ಟ್ ಹೇಳಿದೆ.

ಭಾರತೀಯ ದಂಡ ಸಂಹಿತೆ (ಐಪಿಸಿ) 377ನೇ ಕಲಂ ಅನ್ವಯ ಸಲಿಂಗಕಾಮವನ್ನು ಕ್ರಿಮಿನಲ್ ಅಪರಾಧ ಎಂದು ವಾಖ್ಯಾನಿಸಲಾಗಿದೆ. 2013ರ ತನ್ನ ತೀರ್ಪಿಲ್ಲಿ ಇದನ್ನು ಸುಪ್ರಿಂ ಕೋರ್ಟ್ ಎತ್ತಿ ಹಿಡಿದಿತ್ತು. ಇದೀಗ 2013ರ ತೀರ್ಪನ್ನು ಮರುಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಸೋಮವಾರ ತಿಳಿಸಿದೆ.

"ಐಪಿಸಿ ಸೆಕ್ಷನ್ 377 ಲೈಂಗಿಕ ಆಯ್ಕೆಯನ್ನು ಮೊಟಕು ಮಾಡುತ್ತಿದೆ. ಕಾನೂನು ಕ್ರಮದ ಭೀತಿಯಿಂದ ಲೈಂಗಿಕ ಸುಖದಿಂದ ವಂಚಿತರಾಗುತ್ತಿದ್ದೇವೆ," ಎಂದು 'ಎಲ್ ಜಿಬಿಟಿ' ಸಮುದಾಯದ ಐವರು ಸರ್ವೋಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ, "377ನೇ ಕಲಂನ ಸಾಂವಿಧಾನಿಕ ಸಿಂಧುತ್ವದ ಪರಿಶೀಲನೆಯನ್ನು ಉನ್ನತ ಪೀಠ ನಡೆಸಲಿದೆ," ಎಂದು ಹೇಳಿದೆ. ಮಾತ್ರವಲ್ಲದೆ, ಅರ್ಜಿದಾರರ ಆಕ್ಷೇಪಕ್ಕೆ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ಕೂಡ ಜಾರಿ ಮಾಡಿದೆ.

Supreme Court to review Constitutional validity of section 377, seeks reply from Centre

2009ರಲ್ಲಿ ಸಲಿಂಗಕಾಮವನ್ನು ಕಾನೂನುಬದ್ಧಗೊಳಿಸಿ ದೆಹಲಿ ಹೈಕೋರ್ಟ್ ತೀರ್ಪು ನೀಡಿತ್ತು. ಆದರೆ 2013, ಡಿಸೆಂಬರ್ 11ರಂದು ಇದನ್ನು ಸುಪ್ರಿಂ ಕೋರ್ಟ್ ರದ್ದುಗೊಳಿಸಿತ್ತು. ಅಂದು ಸಲಿಂಗ ಕಾಮ ಅಪರಾಧ ಎಂದು ಷರಾ ಬರೆದಿದ್ದ ಸರ್ವೋಚ್ಛ ನ್ಯಾಯಾಲಯ, ಈ ಅಪರಾಧಕ್ಕೆ ಜೀವಾವಧಿ ಶಿಕ್ಷೆಯನ್ನೂ ವಿಧಿಸಬಹದು ಎಂದು ಹೇಳಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Supreme Court decided to reconsider whether Gay sex between consenting adults will be a criminal offence or not. After the apex court banned instant triple talaq, the LGBT activists urged the apex court to also take steps to decriminalise homosexuality. The issue of Section 377 of the IPC, which criminalises homosexuality, is pending before the top court.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ