• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking News: ಪೋರ್ಚುಗಲ್ ಜೊತೆ ಒಪ್ಪಂದದಂತೆ ಅಬು ಸಲೇಂ ಬಿಡುಗಡೆ?

|
Google Oneindia Kannada News

ಮುಂಬೈ, ಜುಲೈ 11: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಅಬು ಸಲೇಂ ಅವಧಿಗೆ ಮುನ್ನವೇ ಬಿಡುಗಡೆ ಸಾಧ್ಯತೆ ಬಗ್ಗೆ ಸುದ್ದಿ ಬಂದಿದೆ. ಭಾರತ ಹಾಗೂ ಪೋರ್ಚುಗಲ್ ದೇಶದ ನಡುವಿನ ಒಪ್ಪಂದದಂತೆ ಗ್ಯಾಂಗ್ ಸ್ಟರ್ ಅಬು ಸಲೇಂ ಮೇಲೆ ವಿಧಿಸಲಾಗಿರುವ 25 ವರ್ಷಗಳ ಜೈಲುವಾಸ ಶಿಕ್ಷೆ ಕಡಿತಗೊಳ್ಳುವ ಸಾಧ್ಯತೆ ಕಂಡು ಬಂದಿದೆ. ಈ ಬಗ್ಗೆ ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಸೋಮವಾರದಂದು ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

247 ಮಂದಿಯ ಸಾವು ಹಾಗೂ 713 ಜನರು ಗಾಯಾಳುವಾಗಲು ಕಾರಣವಾಗಿದ್ದ 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ದಾಳಿಯಲ್ಲಿ ಅಬು ಸಲೇಂಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದಲ್ಲದೆ 2002ರ ಸುಲಿಗೆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಆತನಿಗೆ ಏಳು ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.

ನಕಲಿ ಪಾಸ್ ಪೋರ್ಟ್ ಕೇಸ್: ನಟಿ ಮೋನಿಕಾಗೆ ಖುಲಾಸೆ ಎತ್ತಿ ಹಿಡಿದ ಹೈಕೋರ್ಟ್

2005ರಲ್ಲಿ ಪೋರ್ಚುಗಲ್‌ನಿಂದ ಗಡಿಪಾರಾಗಿ ಭಾರತಕ್ಕೆ ಬಂದಾಗಿನಿಂದಲೂ ಅಬು ಸಲೇಂ ಜೈಲಿನಲ್ಲಿದ್ದಾನೆ. 25 ವರ್ಷಕ್ಕಿಂತ ಹೆಚ್ಚು ಕಾಲ ಜೈಲಿನಲ್ಲಿ ಇರಿಸಬಾರದು ಎಂಬ ಒಪ್ಪಂದದೊಂದಿಗೆ ಪೋರ್ಚುಗಲ್ ಸಲೇಂನನ್ನು ಭಾರತಕ್ಕೆ ಹಸ್ತಾಂತರಿಸಿತ್ತು.

ಒಪ್ಪಂದದ ಬಗ್ಗೆ ಕೋರ್ಟ್ ಹೇಳಿದ್ದೇನು?
2002ರಲ್ಲಿ ಅಬುಸಲೇಂ ಹಸ್ತಾಂತರಕ್ಕಾಗಿ ಪೋರ್ಚುಗಲ್‌ ಜೊತೆ ಭಾರತ ಒಪ್ಪಂದ ಮಾಡಿಕೊಂಡಿತ್ತು. ಅಂದು ನೀಡಿದ ಗಂಭೀರ ಭರವಸೆಯ ಪ್ರಕಾರ ತನ್ನ ಶಿಕ್ಷೆಯು 25 ವರ್ಷಗಳನ್ನು ಮೀರಬಾರದು ಎಂದು ಸೇಲಂ ಕೋರಿದ್ದ ಮನವಿಯನ್ನು ಪುರಸ್ಕರಿಸಲಾಗಿತ್ತು.

ನ್ಯಾಯಮೂರ್ತಿಗಳಾದ ಎಸ್‌ಕೆ ಕೌಲ್ ಮತ್ತು ಎಂಎಂ ಸುಂದ್ರೇಶ್ ಅವರಿದ್ದ ನ್ಯಾಯಪೀಠವು ರಾಷ್ಟ್ರಪತಿಗಳು ಸಂವಿಧಾನದ 72ನೇ ವಿಧಿ ಅಡಿಯಲ್ಲಿ ಅಧಿಕಾರವನ್ನು ಚಲಾಯಿಸಲು ಕೇಂದ್ರ ಸರ್ಕಾರ ಸಲಹೆ ನೀಡಬಹುದು ಮತ್ತು ರಾಷ್ಟ್ರೀಯ ಬದ್ಧತೆಗೆ ಅನುಗುಣವಾಗಿ ಶಿಕ್ಷೆಯನ್ನು ಪೂರ್ಣಗೊಳಿಸಿದ ಬಳಿಕ ಸೂಕ್ತ ಕ್ರಮವನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಬಹುದು ಎಂದು ಹೇಳಿದೆ.

''25 ವರ್ಷಗಳು ಪೂರ್ಣಗೊಂಡ ಒಂದು ತಿಂಗಳೊಳಗೆ ಬಿಡುಗಡೆಗೆ ಅಗತ್ಯವಾದ ದಾಖಲೆ ಪತ್ರಗಳನ್ನು ರವಾನಿಸಲಾಗುತ್ತದೆ. ವಾಸ್ತವವಾಗಿ, 25 ವರ್ಷಗಳು ಪೂರ್ಣಗೊಂಡ ನಂತರ ಒಂದು ತಿಂಗಳ ಅವಧಿಯಲ್ಲಿ ಸಿಆರ್‌ಪಿಸಿ ಅಡಿಯಲ್ಲಿ ಸರ್ಕಾರವು ಕ್ಷಮಾದಾನ ಅಥವಾ ಶಿಕ್ಷೆ ಪ್ರಮಾಣ ತಗ್ಗಿಸುವ ಅಧಿಕಾರವನ್ನು ಚಲಾಯಿಸಬಹುದು,''ಎಂದು ಪೀಠ ಹೇಳಿದೆ.

ಸಂಜು ಚಿತ್ರತಂಡಕ್ಕೆ ಲೀಗಲ್ ನೋಟಿಸ್ ನೀಡಿದ ಅಬು ಸಲೇಂಸಂಜು ಚಿತ್ರತಂಡಕ್ಕೆ ಲೀಗಲ್ ನೋಟಿಸ್ ನೀಡಿದ ಅಬು ಸಲೇಂ

ಫೆಬ್ರವರಿ 25, 2015 ರಂದು, ವಿಶೇಷ ಟಾಡಾ ನ್ಯಾಯಾಲಯವು 1995 ರಲ್ಲಿ ಮುಂಬೈ ಮೂಲದ ಬಿಲ್ಡರ್ ಪ್ರದೀಪ್ ಜೈನ್ ಅವರನ್ನು ತನ್ನ ಚಾಲಕ ಮೆಹಂದಿ ಹಸನ್ ಜೊತೆಗೆ ಕೊಲೆ ಮಾಡಿದ ಮತ್ತೊಂದು ಪ್ರಕರಣದಲ್ಲಿ ಸೇಲಂಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಇದಲ್ಲದೇ, 2002ರಲ್ಲಿ ದೆಹಲಿ ಉದ್ಯಮಿ ಅಶೋಕ್ ಗುಪ್ತಾಗೆ 5 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟ ಸುಲಿಗೆ ಆರೋಪದ ಪ್ರಕರಣದಲ್ಲಿ ಅಬು ಸಲೇಂ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬುಸಲೇಂ ಅವರನ್ನು ಅಪರಾಧಿ ಎಂದು ಮೇ 26, 2018ರಂದು ಘೋಷಿಸಲಾಗಿದೆ.

Recommended Video

   ಟ್ವಿಟರ್ ಡೀಲ್ ನಿಂದ ಹಿಂದೆ ಸರಿದಿದ್ಯಾಕೆ ಎಲಾನ್‌ ಮಸ್ಕ್ | * World | OneIndia Kannada
   English summary
   The Supreme Court on Monday said the Centre is bound to honour its commitment given to Portugal and release gangster Abu Salem on completion of his 25-year sentence in the 1993 Mumbai blasts case.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X