ಹೆದ್ದಾರಿಗಳಲ್ಲಿ ಮದ್ಯದಂಗಡಿ ಬಂದ್: ಸುಪ್ರೀಂಕೋರ್ಟ್

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 16: ದೇಶದ ಎಲ್ಲಾ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಮದ್ಯದಂಗಡಿಗಳು ಏಪ್ರಿಲ್ 2017ರಿಂದ ಬಂದ್ ಆಗಲಿವೆ. ಮಾರ್ಚ್ 31, 2017ರ ನಂತರ ಮದ್ಯ ಮಾರಾಟ ಲೈಸನ್ಸ್ ನವೀಕರಣ ನಿಲ್ಲಿಸುವಂತೆ ಸುಪ್ರೀಂಕೋರ್ಟ್ ಬುಧವಾರ ಮಹತ್ವದ ಆದೇಶ ನೀಡಿದೆ.

ಪ್ರತಿ ವರ್ಷ ಮದ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತಕ್ಕೀಡಾಗಿ ಸಾಯುವವರ ಸಂಖ್ಯೆ 1.5 ಲಕ್ಷಕ್ಕೂ ಅಧಿಕವಾಗಿದ್ದು, ಅಪಘತ ತಡೆ ಉದ್ದೇಶದಿಂದ ದೇಶದ ಎಲ್ಲಾ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮದ್ಯ ಮಾರಾಟ ಸ್ಥಗಿತ ಮಾಡಲು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. [ಬೆಂಗಳೂರು ಸಭ್ಯ ಕುಡುಕರ ರಾಜಧಾನಿ ಎಂದಿದ್ದ ಮೇಟಿ]

upreme Court orders ban on liquor shops on state & national highways across country

ಹೆದ್ದಾರಿಗಳಲ್ಲಿ ಮದ್ಯ ಮಾರಾಟ ನಿಷೇಧ ಹಾಗೂ ಅಬಕಾರಿ ಕಾನೂನಿಗೆ ತಿದ್ದುಪಡಿ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.[ಅಕ್ರಮ ಮದ್ಯದ ವಿಷಯದಲ್ಲಿ ಕರ್ನಾಟಕವೇ ನಂಬರ್ 1!]

ಲೈಸನ್ಸ್ ರದ್ದು?: ಮದ್ಯ ಮಾರಾಟಕ್ಕೆ ಲೈಸನ್ಸ್ ಹೊಂದಿರುವ ಅಂಗಡಿಯವರು ಲೈಸನ್ಸ್ ಇರುವ ತನಕ ಮದ್ಯ ಮಾರಾಟ ಮಾಡಬಹುದಾಗಿದೆ. ಆದರೆ, ಮಾರ್ಚ್ 31, 2017ರ ನಂತರ ಯಾವುದೇ ಹಾಲಿ ಲೈಸನ್ಸ್ ಗಳನ್ನು ನವೀಕರಿಸುವುದಿಲ್ಲ ಎಂದು ಕೋರ್ಟ್ ಹೇಳಿದೆ. [ಈ ವಿಷಯದಲ್ಲಿ ಕರ್ನಾಟಕಕ್ಕಿಂತ ಬಿಹಾರವೇ ಉತ್ತಮ!]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Supreme Court today ordered ban on liquor shops on national and state highways. The apex court said all existing licences of liquor shops on highways will not be renewed after March 31, 2017.
Please Wait while comments are loading...