ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ ತೀವ್ರ ತುರ್ತು ಪರಿಸ್ಥಿತಿ: ಮಮತಾ ಬ್ಯಾನರ್ಜಿ ವಾಗ್ದಾಳಿ

|
Google Oneindia Kannada News

ಕೋಲ್ಕತಾ, ಆಗಸ್ಟ್ 2: ದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಭಾರಿ ತುರ್ತುಪರಿಸ್ಥಿತಿಯನ್ನು ಹೇರಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಅಸ್ಸಾಂನಲ್ಲಿ ನೂತನ ನಾಗರಿಕರ ಪಟ್ಟಿಯ ವಿರುದ್ಧ ಚಳವಳಿ ಆರಂಭಿಸಲು ಉದ್ದೇಶಿಸಿದ್ದ ತೃಣಮೂಲ ಕಾಂಗ್ರೆಸ್‌ನ ಸಂಸದರನ್ನು ಅಸ್ಸಾಂನ ವಿಮಾನ ನಿಲ್ದಾಣದಲ್ಲಿಯೇ ತಡೆದ ಘಟನೆ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

13 ವರ್ಷಗಳಲ್ಲಿ ಮಮತಾ ಬ್ಯಾನರ್ಜಿ ಅದೆಷ್ಟು ಬದಲಾಗಿ ಹೋದರು!13 ವರ್ಷಗಳಲ್ಲಿ ಮಮತಾ ಬ್ಯಾನರ್ಜಿ ಅದೆಷ್ಟು ಬದಲಾಗಿ ಹೋದರು!

ತಮ್ಮ ಸಂಸದರನ್ನು ವಿಮಾನ ನಿಲ್ದಾಣದಲ್ಲಿಯೇ ತಡೆಯಲಾಗಿದ್ದು ಎಲ್ಲಿಗೂ ಹೋಗಲು ಬಿಡುತ್ತಿಲ್ಲ ಎಂದು ಆರೋಪಿಸಿರುವ ಮಮತಾ, ಅಸ್ಸಾಂನಲ್ಲಿ ಭಾರಿ ತುರ್ತುಪರಿಸ್ಥಿತಿ ಇದೆ. ನಾವು ಜನರೊಂದಿಗೆ ಮಾತನಾಡುವುದನ್ನು ಅವರು ಬಯಸುತ್ತಿಲ್ಲ ಎಂದು ಆರೋಪಿಸಿದರು.

ಅವರು ಯಾರು?

ಅವರು ಯಾರು?

ಅವರು ಯಾರು? (ಬಿಜೆಪಿ) ಪಶ್ಚಿಮ ಬಂಗಾಳದಲ್ಲಿ ಅವರಿಗೆ ಯಾವ ಮಹತ್ವ ಇದೆ? ಯಾರಿಗೂ ಅವರು ತಿಳಿದಿಲ್ಲ. ಅವರು ಕೇವಲ ಕೆಲವು ಗೂಂಡಾಗಳು. ಅವರದೇ ಅಸ್ತಿತ್ವವು ಪ್ರಶ್ನೆಯಾಗಿರುವಾಗ ಅವರು ಇಲ್ಲಿ ಎನ್‌ಆರ್‌ಸಿ ಜಾರಿ ಮಾಡುತ್ತಾರೆಯೇ? ಅವರು ಹೇಗೆ ಮಧ್ಯಪ್ರವೇಶ ಮಾಡುತ್ತಾರೆಯೋ ನೋಡುತ್ತೇನೆ ಎಂದು ಮಮತಾ ತೀವ್ರ ವಾಗ್ದಾಳಿ ನಡೆಸಿದರು.

Array

ಸಂಸದರಿಗೆ ತಡೆ

ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್ಸಿ) ವಿರುದ್ಧ ಸಾರ್ವಜನಿಕ ಸಭೆ ನಡೆಸಲು ಟಿಎಂಸಿಯ ಎಂಟು ಸಂಸದರು ಅಸ್ಸಾಂನ ಸಿಲ್ಚಾರ್‌ಗೆ ಹೊರಟಿದ್ದರು.

ಆದರೆ, ವಿಮಾನ ನಿಲ್ದಾಣದಲ್ಲಿಯೇ ಅವರನ್ನು ತಡೆಯಲಾಯಿತು. ಬೃಹತ್ ಸಭೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದರು. ಈ ವೇಳೆ ಸಂಸದರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ಟಿಎಂಸಿಯ ಸಂಸದೆ ಮಹುವಾ ಮೊಯಿತ್ರಾ ಅವರಿಂದ ತಪ್ಪಿಸಿಕೊಂಡು ಓಡುವ ಹಾಗೂ ಮಹಿಳಾ ಪೊಲೀಸರು ಅವರನ್ನು ಹಿಂಬಾಲಿಸಿದ ಘಟನೆಯೂ ನಡೆಯಿತು.

ರಕ್ತಪಾತವಾಗುತ್ತದೆ ಎಂದು ಹೇಳಿದ್ದ ಮಮತಾ ಬ್ಯಾನರ್ಜಿ ವಿರುದ್ಧ ದೂರುರಕ್ತಪಾತವಾಗುತ್ತದೆ ಎಂದು ಹೇಳಿದ್ದ ಮಮತಾ ಬ್ಯಾನರ್ಜಿ ವಿರುದ್ಧ ದೂರು

ಅಸ್ಸಾಂ ಟಿಎಂಸಿ ಅಧ್ಯಕ್ಷ ರಾಜೀನಾಮೆ

ಅಸ್ಸಾಂ ಟಿಎಂಸಿ ಅಧ್ಯಕ್ಷ ರಾಜೀನಾಮೆ

ಎನ್‌ಆರ್‌ಸಿ ವಿಚಾರದಲ್ಲಿ ತೀವ್ರ ವಿವಾದವೆಬ್ಬಿಸಿರುವ ಮಮತಾ ಬ್ಯಾನರ್ಜಿ ಅವರ ಹೇಳಿಕೆಯಿಂದ ಅಸಮಾಧಾನಗೊಂಡಿರುವ ಅಸ್ಸಾಂ ಟಿಎಂಸಿ ಮುಖ್ಯಸ್ಥ ದ್ವಿಪೇನ್ ಪಾಠಕ್ ರಾಜೀನಾಮೆ ನೀಡಿದ್ದಾರೆ.

ಇದರಿಂದ ಅಸ್ಸಾಂನಲ್ಲಿ ಎನ್‌ಆರ್‌ಸಿ ವಿವಾದದ ಕೇಂದ್ರವಾಗಿರುವ ಟಿಎಂಸಿಗೆ ಹಿನ್ನಡೆಯಾಗಿದೆ.

ಮರುಮನವಿಗೆ ಅವಕಾಶವಿದೆ

'ಎನ್‌ಆರ್‌ಸಿ ಅಸ್ಸಾಂನಿಂದ ಬೆಂಗಾಳಿಗಳನ್ನು ಹೊರ ಹಾಕುವ ಗುರಿ ಹೊಂದಿದೆ ಎಂಬ ಆರೋಪವನ್ನು ನಾನು ಒಪ್ಪುವುದಿಲ್ಲ. ಎನ್‌ಆರ್‌ಸಿ ಕೆಲವು ಹೆಸರುಗಳನ್ನು ಕೈಬಿಟ್ಟಿರಬಹುದು. ಆದರೆ, ಮರುಮನವಿ ಸಲ್ಲಿಸಲು ನಾಗರಿಕರಿಗೆ ಅವಕಾಶವಿದೆ ಎಂದು ದ್ವಿಪೇನ್ ತಿಳಿಸಿದರು.

ಸಂಘರ್ಷದ ಕಳವಳ

ಕೇಂದ್ರ ಹಾಗೂ ಅಸ್ಸಾಂ ಸರ್ಕಾರದ ವಿರುದ್ಧ ಟಿಎಂಸಿಯ ಪ್ರತಿಭಟನೆಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಪ್ರತಿಭಟನೆಯು ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳುಮಾಡಬಹುದು ಎಂದು ಕಳವಳ ವ್ಯಕ್ತಪಡಿಸಿದರು.

'ಇದರ ಬಗ್ಗೆ ಗದ್ದಲ ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ. ಇದು ಅಸ್ಸಾಂನಲ್ಲಿರುವ ಅಸ್ಸಾಮಿಗಳು ಹಾಗೂ ಬೆಂಗಾಳಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗಬಹುದು. ಬಳಿಕ ಇದರ ಆಪಾದನೆಯನ್ನು ಪಕ್ಷದ ಮುಖ್ಯಸ್ಥರ ಮೇಲೆ ಹೊರಿಸಲಾಗುತ್ತದೆ. ಇದರಿಂದಾಗಿ ನಾನು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ನಾನು ಯಾವಾಗಲೂ ಅಸ್ಸಾಂ ಪರವಾಗಿ ಮಾತನಾಡುತ್ತೇನೆ ಎಂದು ಅವರು ಹೇಳಿದ್ದಾರೆ.

English summary
West Bengal Chief Minister Mamata Banerjee on Thursday accused BJP imposed a sense of super emergency in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X