ಹೆಣ್ಣು ಮಗುವನ್ನು ದತ್ತು ಪಡೆದ ಸನ್ನಿ ಲಿಯೋನ್ ದಂಪತಿ

Posted By:
Subscribe to Oneindia Kannada

ಮುಂಬೈ, ಜುಲೈ 22: ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರು ಎರಡು ವರ್ಷದ ಹೆಣ್ಣು ಮಗುವನ್ನು ದತ್ತು ಪಡೆದಿದ್ದಾರೆ.

ಮಗುವಿನ ಹೆಸರು ನಿಶಾ. ವಯಸ್ಸು 2 ವರ್ಷ. ಮಹಾರಾಷ್ಟ್ರದ ಲಾಥೂರ್ ನ ಈ ಮಗುವನ್ನು ಇತ್ತೀಚೆಗೆ ಕಾನೂನಾತ್ಮವಾಗಿ ಸನ್ನಿ ಲಿಯೋನ್ ಅವರು ದತ್ತು ಪಡೆದಿದ್ದಾರೆಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ವರದಿಯ ಜತೆಗೆ, ದತ್ತು ಪಡೆದ ದಾಖಲಾತಿಗಳನ್ನೂ ಅದು ಪ್ರಕಟಿಸಿದೆ.

Sunny Leone and Daniel Weber adopt baby girl Nisha

ಸನ್ನಿ ಲಿಯೋನ್ ಹಾಗೂ ಅವರ ಪತಿ ಡೇನಿಯಲ್ ವೆಬರ್ ಅವರು ಹೆಣ್ಣು ಮಗುವನ್ನು ಎತ್ತಿಕೊಂಡು ಇರುವ ಫೋಟೋವೊಂದು ಕೆಲ ಸಾಮಾಜಿಕ ತಾಣಗಳಲ್ಲಿ ಹರಿದಾಡಿತ್ತು.

ಇದರ ಸತ್ಯಾಸತ್ಯತೆಯನ್ನು ಜಾಲಾಡಿದಾಗ, ದತ್ತು ಪಡೆದ ವಿಚಾರ ತಿಳಿದು ಬಂತು ಎಂದು ಎಕ್ಸ್ ಪ್ರೆಸ್ ತನ್ನ ವರದಿಯಲ್ಲಿ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯೆ ಕೇಳದಾಗ, ದತ್ತು ಪಡೆದಿರುವುದನ್ನು ಒಪ್ಪಿಕೊಂಡಿರುವ ಲಿಯೋನ್ ದಂಪತಿ, ಮಗುವಿಗೆ ನಿಶಾ ಕೌರ್ (ಸನ್ನಿ ಅಸಲೀ ಹೆಸರು ಕರೆನ್ಜಿತ್ ಕೌರ್) ಎಂದು ಹೆಸರಿಟ್ಟಿರುವುದಾಗಿ ಹೇಳಿದ್ದಾರೆ.

ತಾವೇ ಮಗುವನ್ನು ಹೊಂದುವ ಬದಲಿಗೆ ಅನಾಥ ಮಗುವೊಂದಕ್ಕೆ ಆಶ್ರಯ ನೀಡಿದ್ದಕ್ಕಾಗಿ ಸನ್ನಿ ದಂಪತಿಗಳಿಗೆ ಬಾಲಿವುಡ್ ನ ತಾರೆಯರು ಅಭಿನಂದನೆ ಸಲ್ಲಿಸುತ್ತಿದ್ದಾರಂತೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sunny Leone and her husband Daniel Weber adopted a baby girl, leaving everyone pleasantly surprised. The kid named Nisha Kaur Weber hogged headlines in no time. And then a picture began getting circulated of the new parents with the little one.
Please Wait while comments are loading...