ಐಎನ್ಎಸ್ ಖಾಂಡೇರಿ ಜಲಾಂತರ್ಗಾಮಿ ರಾಷ್ಟ್ರಕ್ಕೆ ಸಮರ್ಪಣೆ

Posted By:
Subscribe to Oneindia Kannada

ಮುಂಬೈ, ಜನವರಿ 12: ಭಾರತೀಯ ನೌಕಾಪಡೆಯ ಬಹುನಿರೀಕ್ಷಿತ ಕಲವರಿ ಮಾದರಿಯ 2ನೇ ಆವೃತ್ತಿಯಾದ ಐಎಸ್ಎನ್ ಖಂಡೇರಿ ಜಲಾಂತರ್ಗಾಮಿ ನೌಕೆಯನ್ನು ಗುರುವಾರ ರಾಷ್ಟ್ರಕ್ಕೆ ಸಮರ್ಪಣೆಗೊಳಿಸಲಾಯಿತು.

ಕೇಂದ್ರ ರಕ್ಷಣಾ ಇಲಾಖೆಯ ರಾಜ್ಯ ಸಚಿವರಾದ ಸುಭಾಷ್ ಭಾಮ್ರೆ ತಮ್ಮ ಕುಟುಂಬ ಸಮೇತರಾಗಿ ಈ ಉದ್ಘಾಟನಾ ಸಮಾರಂಭದಲ್ಲಿ ಹಾಜರಿದ್ದರು. ಅವರೊಂದಿಗೆ ನೌಕಾಪಡೆಯ ಅಧಿಕಾರಿಗಳಾದ ಅಡ್ಮಿರಲ್ ಸುನಿಲ್ ಲಂನ್ಬಾ ಸೇರಿದಂತೆ ಅನೇಕರು ಈ ಸಮಾರಂಭಕ್ಕೆ ಸಾಕ್ಷಿಯಾದರು.

Submarine Khanderi launched in Mumbai

ಇಲ್ಲಿನ ಮಝಗಾನ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ ನ (ಎಂಡಿಎಲ್) ಆವರಣದಲ್ಲಿ ಈ ಜಲಾಂತರ ನೌಕೆಗೆ ಅಧಿಕೃತ ಚಾಲನೆ ನೀಡಲಾಗಿದ್ದು, ಮುಂದಿನ ಎರಡು ತಿಂಗಳವರೆಗೆ ಇದು ಪರೀಕ್ಷಾರ್ಥವಾಗಿ ಸಂಚರಿಸುತ್ತಿರುತ್ತದೆ.

ಇತರ ಜಲಾಂತರ್ಗಾಮಿ ನೌಕೆಗಳಿಗೆ ಹೋಲಿಸಿದರೆ, ಇದು ಅತ್ಯಂತ ತ್ವರಿತವಾಗಿ ಸಂಚರಿಸಬಲ್ಲದ್ದಾಗಿದ್ದು, ಕ್ಷಿಪ್ರಗತಿಯಲ್ಲಿ ತನ್ನಲ್ಲಿನ ಸ್ಫೋಟಕ ಸಾಮಗ್ರಿಗಳನ್ನು ಎದುರಾಳಿಗಳ ಗುರಿಯತ್ತ ಎಸೆಯುವ ಸಾಮರ್ಥ್ಯವೂ ಸೇರಿದಂತೆ ಹಲವಾರು ಸಾಮರ್ಥ್ಯಗಳನ್ನು ಹೊಂದಿದೆ ಎಂದು ಹೇಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Khanderi, the second Kalvari class submarine, was launched at the Mazagon Dock Shipbuilders Limited (MDL) here on Thursday.
Please Wait while comments are loading...