Teleprompter: ದೆಹಲಿ ಚುನಾವಣಾ ಪ್ರಚಾರದಲ್ಲಿ ಎಡವಟ್ಟು: ಕೈಕೊಟ್ಟ ಟೆಲಿಪ್ರಾಂಪ್ಟರ್, ಮೋದಿ ಟ್ರೋಲ್!
ದೆಹಲಿ ಚುನಾವಣೆಗೆ ಭರ್ಜರಿ ಪ್ರಚಾರ ನಡೆಯುತ್ತಿದೆ. ಆದರೆ ಪ್ರಚಾರದಲ್ಲಿ ಆಗಿರುವ ಎಡವಟ್ಟಿನಿಂದ ಪ್ರಧಾನಿ ನರೇಂದ್ರ ಮೋದಿ ಅವರು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಬಹುತೇಕ ಭಾಷಣಗಳಲ್ಲಿ ಟೆಲಿಪ್ರಾಂಪ್ಟರ್ ಬಳಸುತ್ತಾರೆ. ಎಡಬದಿ ಹಾಗೂ ಬಲಬದಿಯಲ್ಲಿ ಟೆಲಿಪ್ರಾಂಪ್ಟರ್‌ಗಳನ್ನು ಅಳವಡಿಸಿರಲಾಗುತ್ತದೆ.
ಸಾಲುಗಳು ಸ್ಕ್ರೋಲ್ ಆಗುತ್ತಿದ್ದರೆ ಅದನ್ನು ಓದಿಕೊಂಡು ಮೋದಿ ಭಾಷಣ ಮಾಡುವುದು ಇದೆ. ಆದರೆ, ಭಾಷಣ ಮಾಡುವಾಗಲೇ ಮೋದಿ ಮೌನಕ್ಕೆ ಜಾರಿದ್ದು ಇದೀಗ ಭಾರೀ ಟ್ರೋಲ್‌ಗೆ ಕಾರಣವಾಗಿದೆ. ಅಷ್ಟಕ್ಕೂ ಭಾಷಣದಲ್ಲಿ ಆಗಿದ್ದೇನು, ವಿರೋಧ ಪಕ್ಷ ಹಾಗೂ ನೆಟ್ಟಿಗರು ಏನು ಹೇಳುತ್ತಿದ್ದಾರೆ ಎನ್ನುವುದನ್ನು ನೋಡೋಣ...

ಪ್ರಧಾನಿ ನರೇಂದ್ರ ಮೋದಿ ಅವರು ಟೆಲಿಪ್ರಾಂಪ್ಟರ್ ಸಾಮಾನ್ಯವಾಗಿ ಬಳಸುತ್ತಾರೆ. ಆದರೆ, ಭಾಷಣಗಳಲ್ಲಿ ಇದು ಕೈಕೊಟ್ಟು ಅವರು ಈ ಹಿಂದೆಯೂ ಮುಜುಗರಕ್ಕೆ ಒಳಗಾಗಿರುವುದು ಇದೆ. ಆದರೆ, ಈ ಬಾರಿ ದೆಹಲಿ ಚುನಾವಣೆ ಪ್ರಚಾರದ ಸಮಯದಲ್ಲಿ ಏಕಾಏಕಿ ಟೆಲಿಪ್ರಾಂಪ್ಟರ್ ಕೈಕೊಟ್ಟಿದ್ದು, ಮೋದಿ ಮೌನರಾಗಿರುವ ವಿಡಿಯೋ ವೈರಲ್ ಆಗುತ್ತಿದೆ.
ಟೆಲಿಪ್ರಾಂಪ್ಟರ್ ಸುಳ್ಳು ಹೇಳಲ್ಲ!
ಟೆಲಿಪ್ರಾಂಪ್ಟರ್ ಕೈಕೊಟ್ಟಿರುವ ವಿಷಯ ಟ್ರೋಲ್‌ಗೆ ಆಹಾರವಾಗಿದೆ. ಟೆಲಿಪ್ರಾಂಪ್ಟರ್ ಕೈಕೊಟ್ಟಿರುವ ವಿಷಯ ಭಾರೀ ಚರ್ಚೆಯಾಗುತ್ತಿದ್ದು. ವಿರೋಧ ಪಕ್ಷಗಳು ಬಿಜೆಪಿಯಂತೆ ಟೆಲಿಪ್ರಾಂಪ್ಟರ್ ಸಹ ಕೈಕೊಟ್ಟಿದೆ ಅಂತ ಹೇಳಿದ್ದರೆ. ಟೆಲಿಪ್ರಾಂಪ್ಟರ್ ಸಹ ಮೋದಿ ಸುಳ್ಳಿನ ಮುಂದೆ ಸೋತಿದೆ. ಸಾರ್ವಜನಿಕರಿಗೆ ಸುಳ್ಳು ಹೇಳಲು ಬಯಸುವುದಿಲ್ಲ ಅಂತ ಟೆಲಿಪ್ರಾಂಪ್ಟರ್ ಹೇಳಿದೆ ಎಂದು ಟ್ರೋಲ್ ಮಾಡಲಾಗುತ್ತಿದೆ.
ಒಂದೇ ಒಂದು ಶಬ್ದ ಮಾತನಾಡಲು ಆಗಲ್ಲ: ಈ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸಹ ಟ್ರೋಲ್ ಮಾಡಿದೆ. ದೆಹಲಿಯಲ್ಲಿ ಚುನಾವಣಾ ಪ್ರಚಾರ ಭಾಷಣದ ವೇಳೆ ಟೆಲಿಪ್ರಾಂಪ್ಟರ್ ಕೈಕೊಟ್ಟಿದೆ. ಪ್ರಧಾನಿ ಮೋದಿ ಮೌನವೃತ ಆಚರಿಸಿದ್ದಾರೆ. ನರೇಂದ್ರ ಮೋದಿ ಅವರು ಟೆಲಿಪ್ರಾಂಪ್ಟರ್ ಇಲ್ಲದೆ ಒಂದು ಶಬ್ದವನ್ನೂ ಸಹ ಮಾತಾಡಲು ಸಾಧ್ಯವೇ ಇಲ್ಲ. ಏಕೆಂದರೆ ಒಳಗಡೆ ಏನೂ ಇಲ್ಲ ಎಂದು ರಾಜ್ಯ ಕಾಂಗ್ರೆಸ್ ವ್ಯಂಗ್ಯವಾಡಿದೆ. ಬಿಜೆಪಿಯಂತೆಯೇ ದೆಹಲಿಯಲ್ಲಿ ಮೋದಿಯವರ ಟೆಲಿಪ್ರಾಂಪ್ಟರ್ ವಿಫಲವಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಸಹ ರಿಯಾಕ್ಟ್ ಮಾಡಿದೆ.
#TeleprompterPM ಟ್ರೆಂಡ್
ಇನ್ನು ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದ್ದು. #TeleprompterPM ಎನ್ನುವ ಹ್ಯಾಷ್ ಟ್ಯಾಗ್ ಬಳಸಿ ಜನ ಟ್ರೋಲ್ ಮಾಡುತ್ತಿದ್ದಾರೆ. ನಾವು #TeleprompterPM ಅವರನ್ನು ಆಯ್ಕೆ ಮಾಡಿದ್ದೇವೆ. ಆದರೆ,ಟೆಲಿಪ್ರಾಂಪ್ಟರ್ ಕೈಕೊಟ್ಟಿದೆ ಎಂದು ಕೆಲವರು ಮಾರ್ಮಿಕರವಾಗಿ ಟ್ವೀಟ್ ಮಾಡಿದ್ದಾರೆ. ಒನ್ ನೇಷನ್ 2 ಟೆಲಿಪ್ರಾಂಪ್ಟರ್ ಕೊನೆಗೆ ಎರಡೂ ವಿಫಲವಾಗಿವೆ ಎನ್ನುವ ಟ್ರೋಲ್‌ಗಳು ವೈರಲ್ ಆಗಿವೆ.
ನೆಹರು, ಕೇಜ್ರಿವಾಲ್ ಕಾರಣ: ಮೋದಿ ಅವರ ಟೆಲಿಪ್ರಾಂಪ್ಟರ್ ಕೈಕೊಡುವುದಕ್ಕೆ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಇಲ್ಲ ಮಾಜಿ ಮುಖ್ಯಮಂತ್ರಿ ಹಾಗೂ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಯಾರು ಕಾರಣ ಎನ್ನುವ ಬಗ್ಗೆ ಚರ್ಚೆ ನಡೆದಿದೆ. ಹೌದು ಈ ಇಬ್ಬರಲ್ಲಿ ಯಾರು ಪವರ್ ಕಟ್ ಮಾಡಿ ಮೋದಿ ಅವರ ಟೆಲಿಪ್ರಾಂಪ್ಟರ್ ಕೈಕೊಡುವಂತೆ ಮಾಡಿದ್ದಾರೆ ಹೇಳಿ ಅಂತ ಟ್ರೋಲ್ ಮಾಡಲಾಗುತ್ತಿದೆ. ಈ ಇಬ್ಬರು ನಾಯಕರು ಪವರ್ ಕಟ್ ಮಾಡುತ್ತಿರುವ ಫೋಟೋಗಳನ್ನು ಬಳಸಿ ಮೀಮ್ಸ್ ಮಾಡಲಾಗಿದೆ.












Click it and Unblock the Notifications