ಐಐಟಿ ಮದ್ರಾಸ್‌ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ, ಇದು ಎರಡನೇ ಪ್ರಕರಣ
ಐಐಟಿ-ಮದ್ರಾಸ್ ಕ್ಯಾಂಪಸ್‌ನಲ್ಲಿರುವ ಅಲಕಾನಂದ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಪತ್ತೆಯಾಗಿದ್ದು, ಐಐಟಿಯಲ್ಲಿ ಒಂದು ತಿಂಗಳಲ್ಲಿ ಇದು ಎರಡನೇ ಆತ್ಮಹತ್ಯೆಯಾಗಿದೆ
ಚೆನ್ನೈ, ಮಾರ್ಚ್ 15: ಐಐಟಿ ಮದ್ರಾಸ್‌ನ ಮೂರನೇ ವರ್ಷದ ಬಿಟೆಕ್ ವಿದ್ಯಾರ್ಥಿಯೊಬ್ಬರು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಆಂಧ್ರಪ್ರದೇಶ ಮೂಲದ ವೈಪು ಪುಷ್ಪಕ್ ಶ್ರೀ ಸಾಯಿ ಎಂದು ಗುರುತಿಸಲಾಗಿದ್ದು, ಅವರು ಐಐಟಿ-ಮದ್ರಾಸ್ ಕ್ಯಾಂಪಸ್‌ನಲ್ಲಿರುವ ಅಲಕಾನಂದ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಐಐಟಿಯಲ್ಲಿ ಒಂದು ತಿಂಗಳಲ್ಲಿ ಇದು ಎರಡನೇ ಆತ್ಮಹತ್ಯೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ಪುಷ್ಪಕ್ ನಿನ್ನೆಯ ತರಗತಿಗಳಿಗೆ ಮಧ್ಯಾಹ್ನ ಹಾಜರಾಗಲಿಲ್ಲ. ಆಗ ಆತನ ಸ್ನೇಹಿತರು ಅನುಮಾನಗೊಂಡು ಆತನ ಕೊಠಡಿಯನ್ನು ಪರಿಶೀಲಿಸಿದರು. ಕೋಣೆ ಒಳಗಿನಿಂದ ಲಾಕ್ ಆಗಿತ್ತು. ವಿದ್ಯಾರ್ಥಿಗಳು ಹೇಗೋ ಕೊಠಡಿ ತೆರೆದು ನೋಡಿದಾಗ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಾವು ಈ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಮತ್ತು ಹೆಚ್ಚಿನ ವಿವರಗಳನ್ನು ತಿಳಿಸುತ್ತೇವೆ ಎಂದು ಅವರು ಹೇಳಿದರು.
ಕೋತ್ತೂರುಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಯಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತ ವಿದ್ಯಾರ್ಥಿ ಸಾವಿನ ಬಗ್ಗೆ ಅಂತರಿಕ ಸಮಿತಿಯನ್ನು ರಚಿಸಿ ತನಿಖೆಯನ್ನು ಕೈಗೊಂಡಿದೆ. ಇತ್ತೀಚೆಗೆ ರಚಿಸಲಾದ ಚುನಾಯಿತ ವಿದ್ಯಾರ್ಥಿ ಪ್ರತಿನಿಧಿಗಳು ಸೇರಿದಂತೆ ಸ್ಥಾಯಿ ಸಂಸ್ಥೆಯ ಆಂತರಿಕ ವಿಚಾರಣೆ ಸಮಿತಿಯು ಅಂತಹ ಘಟನೆಗಳನ್ನು ಪರಿಶೀಲಿಸುತ್ತದೆ ಎಂದು ಐಐಟಿ ಮದ್ರಾಸ್ ಪ್ರಕಟಣೆ ಬಿಡುಗಡೆ ಮಾಡಿದೆ. ಮದ್ರಾಸ್ ಐಐಟಿ ಕೂಡ ಪುಷ್ಪಕ್ ಕುಟುಂಬಕ್ಕೆ ಸಂತಾಪ ಸೂಚಿಸಿದೆ ಮತ್ತು ಪುಷ್ಪಕ್ ಕುಟುಂಬಕ್ಕೆ ತಿಳಿಸಲಾಗಿದೆ ಎಂದು ಹೇಳಿದರು.
ಇತ್ತೇಚೆಗೆ ಐಐಟಿ ಬಾಂಬೆಯ 18 ವರ್ಷದ ವಿದ್ಯಾರ್ಥಿ ಪೊವೈನಲ್ಲಿರುವ ಇನ್‌ಸ್ಟಿಟ್ಯೂಟ್ ಕ್ಯಾಂಪಸ್‌ನಲ್ಲಿರುವ ತನ್ನ ಹಾಸ್ಟೆಲ್ ಕಟ್ಟಡದ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದನು. ಸದ್ಯ ವಿದ್ಯಾರ್ಥಿಯ ಸೂಸೈಡ್ ನೋಟ್ ಲಭ್ಯವಾಗಿಲ್ಲ. ಪೊಲೀಸರು ಈ ಸಾವು ಆಕಸ್ಮಿಕ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಕ್ಯಾಂಪಸ್‌ನಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ವಿರುದ್ಧದ ತಾರತಮ್ಯದಿಂದಾಗಿ ಅವರನ್ನು ಆತ್ಮಹತ್ಯೆಗೆ ಪ್ರೇರೇಪಿಸಲಾಗಿದೆ ಎಂದು ವಿದ್ಯಾರ್ಥಿ ಗುಂಪು ಆರೋಪಿಸಿದ್ದು ಈ ಸಂಬಂಧ ತನಿಖೆಗಳು ನಡೆಯುತ್ತಿವೆ.












Click it and Unblock the Notifications