ಕೊಟ್ಟಾಯಂನಲ್ಲಿ ವಿದ್ಯಾರ್ಥಿ Ragging, ಕಿಡ್ನಿ ಫೇಲ್ಯೂರ್

Posted By:
Subscribe to Oneindia Kannada

ತ್ರಿಸ್ಸೂರ್, ಡಿಸೆಂಬರ್ 19: ಇಪ್ಪತ್ತೆರಡು ವರ್ಷದ ವಿದ್ಯಾರ್ಥಿ ಮೇಲೆ Ragging ನಡೆದು, ಕಿಡ್ನಿ ವೈಫಲ್ಯವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಒ.ಎಸ್.ಅವಿನಾಶ್ ಚಿಕಿತ್ಸೆ ಪಡೆಯುತ್ತಿರುವ ಪಾಲಿಟೆಕ್ನಿಕ್ ವಿದ್ಯಾರ್ಥಿ. ಆತನೂ ಸೇರಿದಂತೆ ಎಂಟು ವಿದ್ಯಾರ್ಥಿಗಳನ್ನು ಡಿಸೆಂಬರ್ 2ರ ರಾತ್ರಿ ಬೆತ್ತಲೆ ಮಾಡಿ, Ragging ನಡೆಸಿದ್ದರು.

ಕೊಟ್ಟಾಯಂನ ಸರಕಾರಿ ಪಾಲಿಟೆಕ್ನಿಕ್ ಇನ್ ಸ್ಟಿಟ್ಯೂಟ್ ನಲ್ಲಿ ಓದುತ್ತಿದ್ದ ಅವಿನಾಶ್ ನನ್ನು ಬೆತ್ತಲು ಮಾಡಿ ಐದು ಗಂಟೆಗೂ ಹೆಚ್ಚು ಕಾಲ ಕಠಿಣವಾದ ಚಟುವಟಿಕೆಗಳನ್ನು ಮಾಡಿಸಿದ್ದರು. ಒಂಬತ್ತು ಆರೋಪಿಗಳ ಪೈಕಿ ಜೆರಿನ್, ಸರನ್, ಮನು, ರೈಸನ್ ಹಾಗೂ ಜಯಕೃಷ್ಣನ್ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಬಲವಂತವಾಗಿ ಅವಿನಾಶ್ ಬಾಯಲ್ಲಿ ಮದ್ಯ ಸುರಿದಿದ್ದಾರೆ. ಇದರಿಂದ ಕಿಡ್ನಿ ಮೇಲೆ ಪರಿಣಾಮ ಬೀರಿದೆ ಎಂದು ಡಾ.ಅಬ್ದುಲ್ ಶಿಜಿ ತಿಳಿಸಿದ್ದಾರೆ.[ಫಿನಾಯಿಲ್ ಕುಡಿಸಿದ ಪ್ರಕರಣ: ಮೂವರು ವಿದ್ಯಾರ್ಥಿನಿಯರ ಬಂಧನ]

Student Allegedly Tortured By Seniors, Now On Dialysis

ಈಗಾಗಲೇ ಅವಿನಾಶ್ ಗೆ ನಾಲ್ಕು ಸುತ್ತು ಕಿಡ್ನಿ ಡಯಾಲಿಸಿಸ್ ಮಾಡಲಾಗಿದೆ. ಮುಂಚೆಗಿಂತ ಪರಿಸ್ಥಿತಿ ಸುಧಾರಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ. "ನಮ್ಮನ್ನು ಬೆತ್ತಲು ಮಾಡಿ ಗಂಟೆಗಟ್ಟಲೆ ತೊಂದರೆ ಕೊಟ್ಟರು. ನೆಲದ ಮೇಲೆ ಈಜುಕೊಳ ಇದೆ ಅನ್ನೋ ರೀತಿ ಈಜಿ ಎಂದರು. ಒಂದು ಕೋಣೆಯಲ್ಲಿ ಕೂಡಿ ಹಾಕಿ ಜೋರು ದನಿಯಲ್ಲಿ ಹಾಡಲು ಹೇಳಿದರು. ಸುಸ್ತಾಗಿ ಕುಸಿದು ಬೀಳುವ ಸ್ಥಿತಿ ತಲುಪಿದರೂ ಹಿಂಸೆ ನೀಡುವುದನ್ನು ಮುಂದುವರಿಸಿದರು' ಎಂದು ಅವಿನಾಶ್ ತಿಳಿಸಿದ್ದಾನೆ.

ದಲಿತ ಕುಟುಂಬಕ್ಕೆ ಸೇರಿದ ಅವಿನಾಶ್ ತಂದೆಗೆ ಸಣ್ಣದೊಂದು ಕೆಲಸ ಇದೆ. ಅವರಿಗೆ ವೈದ್ಯಕೀಯ ವೆಚ್ಚ ಭರಿಸುವ ಆರ್ಥಿಕ ಚೈತನ್ಯ ಕೂಡ ಇಲ್ಲ. 'ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಮುಂದೆ ಯಾರಿಗೂ ನನ್ನ ಮಗನಿಗಾದ ರೀತಿಯ ತೊಂದರೆ ಆಗಬಾರದು' ಎಂದಿದ್ದಾರೆ ಅವಿನಾಶ್ ತಂದೆ ಶಿವದಾಸನ್.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 22-year-old student has been hospitalised in Kerala's Thrissur with kidney malfunction after alleged ragging at a polytechnic.
Please Wait while comments are loading...