• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

21 ದಿನದ ಲಾಕ್ ಡೌನ್; ಕಲಿಯಬೇಕಾದ 4 ಪಾಠಗಳು

|

ನವದೆಹಲಿ, ಏಪ್ರಿಲ್ 01 : ಕೊರೊನಾ ಹರಡದಂತೆ ತಡೆಯಲು ಮಾರ್ಚ್ 22ರ ಭಾನುವಾರ 'ಜನತಾ ಕರ್ಫ್ಯೂ'ಗೆ ಕರೆ ನೀಡಲಾಯಿತು. ಬಳಿಕ ಪ್ರಧಾನಿ ನರೇಂದ್ರ ಮೋದಿ ಇಡೀ ದೇಶವನ್ನೇ 21 ದಿನಗಳ ಕಾಲ ಲಾಕ್ ಡೌನ್ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದರು.

   ಲಾಕ್ ಡೌನ್ ಆದೇಶದವರೆಗೆ ರಾಜ್ಯದಲ್ಲಿ ಉಚಿತ ಹಾಲು ಪೂರೈಕೆಗೆ BSY ಸೂಚನೆ | Free Milk | KMF | Bangalore

   ಲಾಕ್ ಡೌನ್‌ಗೆ ಕರೆ ನೀಡಿದಾಗ ನೈಜ ಭಾರತದ ಚಿತ್ರಣ ಬಹಿರಂಗವಾಯಿತು. ರಾಜ್ಯಗಳಲ್ಲಿ ಈ ಕರೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕರೂ ಇದರಲ್ಲಿಯೂ ಹಲವಾರು ಲೋಪದೋಷಗಳು ಇವೆ. ಯಾವುದೇ ಕೆಲಸವಿಲ್ಲದೆ ಸುಮ್ಮನೆ ತಿರುಗುವವರನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ.

   ಭಾರತದಲ್ಲಿ 24 ಗಂಟೆಗಳಲ್ಲೇ 386 ಮಂದಿಗೆ ಕೊರೊನಾ ವೈರಸ್ ಸೋಂಕು

   21 ದಿನಗಳ ಲಾಕ್ ಡೌನ್ ಸಂದರ್ಭದಲ್ಲಿ ಜನರು ಹಲವಾರು ಪಾಠಗಳನ್ನು ಕಲಿಯಬೇಕು. ಸರ್ಕಾರಗಳು ಸಹ ಆಡಳಿತದ ವೈಫಲ್ಯ ಏನಿದೆ?, ಜನರಿಗೆ ಅಗತ್ಯವಾಗಿ ಏನು ಬೇಕು? ಎಂಬುದನ್ನು ತಿಳಿದು ಕಾರ್ಯ ನಿರ್ವಹಣೆ ಮಾಡಬೇಕಿದೆ.

   ಕೊರೊನಾ ಸೃಷ್ಠಿಸಿದ ಚೀನಾದ 'ಡೆಡ್ಲಿ ಮಾರ್ಕೆಟ್' ಮತ್ತೆ ಆರಂಭ

   ಅಗತ್ಯ ವಸ್ತುಗಳಿಗೆ ಲಾಕ್ ಡೌನ್ ಸಂದರ್ಭದಲ್ಲಿ ಭಾರೀ ಬೇಡಿಕೆ ಇದೆ. ಜನರು ಅಗತ್ಯ ವಸ್ತುಗಳ ಖರೀದಿಗಾಗಿ ರಸ್ತೆಗೆ ಬರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪೊಲೀಸರು ಹೇಗೆ ವರ್ತನೆ ಮಾಡುತ್ತಾರೆ? ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ.

   ಕೊರೊನಾ ವಿರುದ್ಧ ಹೋರಾಡಿ ಗೆದ್ದ ಕಲಬುರಗಿ ವೈದ್ಯ

   ವಲಸೆ ಕಾರ್ಮಿಕರ ಕಷ್ಟ

   ವಲಸೆ ಕಾರ್ಮಿಕರ ಕಷ್ಟ

   ಲಾಕ್ ಡೌನ್ ಘೋಷಣೆಯಾದ ತಕ್ಷಣ ಆತಂಕಕ್ಕೆ ಸಿಲುಕಿದ್ದು ವಲಸೆ ಕಾರ್ಮಿಕರು. ಇದ್ದ ಸ್ಥಳದಲ್ಲಿ ಕೆಲಸ, ಆಹಾರ ವ್ಯವಸ್ಥೆ ಸಿಗದೆ ತಮ್ಮ ತವರಿಗೆ ಮರಳಲು ಆರಂಭಿಸಿದರು. ಆದರೆ, ಸಾರಿಗೆ ವ್ಯವಸ್ಥೆ ಇಲ್ಲದೇ ನಡೆದುಕೊಂಡೇ ಹೊರಟರು. ವಿವಿಧ ರಾಜ್ಯ ಸರ್ಕಾರಗಳು ಕಾರ್ಮಿಕರಿಗೆ ಆಹಾರ ಮತ್ತು ವಸತಿ ವ್ಯವಸ್ಥೆಯನ್ನು ಮಾಡಿವೆ. ಆದರೆ, ಕಾರ್ಮಿಕರು ತವರಿಗೆ ಮರಳಬೇಕು ಎಂಬ ಪ್ರಯತ್ನವನ್ನು ನಿಲ್ಲಿಸಿಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ಎಲ್ಲಾ ಸರ್ಕಾರಗಳು ಇದನ್ನು ಮುಖ್ಯವಾಗಿ ಅರ್ಥಮಾಡಿಕೊಳ್ಳಬೇಕಿದೆ.

   ಅಗತ್ಯ ವಸ್ತುಗಳ ಖರೀದಿ

   ಅಗತ್ಯ ವಸ್ತುಗಳ ಖರೀದಿ

   ಲಾಕ್ ಡೌನ್ ಆದ ಮೊದಲ ಎರಡು ದಿನ ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿ ಬಿದ್ದರು. ರಾಜ್ಯ ಸರ್ಕಾರಗಳು ಯಾವುದೇ ಕೊರತೆ ಉಂಟಾಗುವುದಿಲ್ಲ ಎಂದು ಹೇಳಿದರೂ ಜನರ ಖರೀದಿ ಭರಾಟೆ ಕಡಿಮೆಯಾಗಲಿಲ್ಲ. ಗುಂಪು-ಗುಂಪಾಗಿ ಜನರು ಖರೀದಿಯಲ್ಲಿ ತೊಡಗಿದರು. ಇದರಿಂದಾಗಿ ಸರ್ಕಾರಗಳು ಪಾಠವನ್ನು ಕಲಿಯಬೇಕಿದೆ.

   ಪರೀಕ್ಷೆಗೆ ಪಿಪಿಇ ಕಿಟ್‌ಗಳ ವಿತರಣೆ

   ಪರೀಕ್ಷೆಗೆ ಪಿಪಿಇ ಕಿಟ್‌ಗಳ ವಿತರಣೆ

   ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿತು. ಆದರೆ, ವೈದ್ಯಕೀಯ ಸಿಬ್ಬಂದಿಗೆ ಪರ್ಸನಲ್ ಪ್ರೊಟೆಕ್ಟೀವ್ ಇಕ್ವೆಪ್ ಮೆಂಟ್ (ಪಿಪಿಇ) ಕಿಟ್ ವಿತರಣೆ ತಡವಾಗುತ್ತಿದೆ. ಇದರಿಂದಾಗಿ ಕೊರೊನಾ ಸೋಂಕಿತರ ಪರೀಕ್ಷೆಯೂ ವಿಳಂಬವಾಗುತ್ತಿದೆ. ಸರ್ಕಾರ ತಾಲೂಕು ಮಟ್ಟಕ್ಕೂ ಪಿಪಿಇ ಕಿಟ್‌ಗಳನ್ನು ರವಾನೆ ಮಾಡಲು ಗಮನಹರಿಸಬೇಕಿದೆ.

   ಸಾರಿಗೆ ವ್ಯವಸ್ಥೆ

   ಸಾರಿಗೆ ವ್ಯವಸ್ಥೆ

   ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದ ತಕ್ಷಣ ಬೇರೆ ರಾಜ್ಯ, ನಗರದಲ್ಲಿ ಇರುವ ಜನರು ತವರಿಗೆ ಹೋಗಲು ಬಯಸಿದರು. ಆದರೆ, ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಅವರು ಪರದಾಡಿದರು. ಲಾರಿ, ಟ್ಯಾಂಕರ್‌ನಲ್ಲಿ ಕುಳಿತುಕೊಂಡು ಊರಿಗೆ ಮರಳಲು ಪ್ರಯತ್ನ ನಡೆಸಿದರು. ಈ ವಿಚಾರವನ್ನು ಸರ್ಕಾರಗಳು ಗಮನಿಸಬೇಕಿದೆ.

   English summary
   Prime Minister Narendra Modi announced the nationwide 21-day lockdown to fight against the outbreak of Covid-19. Several pictures from across the country show that essential products are available and services continue to be provided, there are several loopholes.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X