ಶಾಲೆಗಳಲ್ಲಿ ಪುಸ್ತಕ, ಸಮವಸ್ತ್ರ ಮಾರಾಟಕ್ಕೆ ನಿರ್ಬಂಧ: ಸಿಬಿಎಸ್ ಇ ಆದೇಶ

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 21: ಮಹತ್ವದ ಬೆಳವಣಿಗೆಯೊಂದರಲ್ಲಿ, ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್ ಇ) ತನ್ನ ಅಧೀನದಲ್ಲಿರುವ ಎಲ್ಲಾ ಶಾಲೆಗಳಿಗೆ ಕಟ್ಟಾಜ್ಞೆಯನ್ನು ಹೊರಡಿಸಿದ್ದು, ಯಾವುದೇ ಶಾಲೆಗಳು ತಮ್ಮಲ್ಲಿ ಪಠ್ಯಪುಸ್ತಕ, ನೋಟ್ ಪುಸ್ತಕ ಹಾಗೂ ಶಾಲಾ ಸಮವಸ್ತ್ರಗಳನ್ನು ಮಾರುವುದನ್ನು ಈ ಕೂಡಲೇ ನಿಲ್ಲಿಸಬೇಕೆಂದು ತಾಕೀತು ಮಾಡಿದೆ.

ಶಾಲೆಗಳು ಇರುವುದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದೇ ಹೊರತು, ಶಾಲೆಗಳನ್ನು ವಾಣಿಜ್ಯ ಕೇಂದ್ರಗಳನ್ನಾಗಿ ಪರಿವರ್ತಿಸುವುದಕ್ಕಲ್ಲ ಎಂದು ಅದು ಶಾಲೆಗಳ ಆಡಳಿತ ಮಂಡಳಿಗಳ ಮೇಲೆ ಮಂಡಳಿ ಕಿಡಿಕಾರಿದೆ.

ತನ್ನ ಈ ಆದೇಶವನ್ನು ತಕ್ಷಣಕ್ಕೆ ಜಾರಿಗೊಳಿಸಬೇಕೆಂದು ಆದೇಶದಲ್ಲಿ ತಾಕೀತು ಮಾಡಿರುವ ಮಂಡಳಿ, ಶಾಲೆಗಳ ಆವರಣದಲ್ಲಿ ಪುಸ್ತಕ, ಸಮವಸ್ತ್ರಗಳ ಅಂಗಡಿಗಳನ್ನು ಇಡುವುದು ಅಥವಾ ನಗರದ ಇಂಥ ಅಂಗಡಿಯಿಂದಲೇ ಪುಸ್ತಕ, ಸಮವಸ್ತ್ರಗಳನ್ನು ಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಆದೇಶಿಸುವುದನ್ನು ನಿಲ್ಲಿಸಬೇಕೆಂದು ಸುತ್ತೋಲೆಯಲ್ಲಿ ಅದು ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
CBCE orders its schools, not to sell text books, note books and uniforms in thier premises and even should not give instruction to students to get books or uniforms from selected shops.
Please Wait while comments are loading...