Vande Bharat: ವಂದೇ ಭಾರತ್ ರೈಲು ಅಪಘಾತ ಕೂದಲೆಳೆ ಅಂತರದಲ್ಲಿ...

ಭಾರತೀಯ ರೈಲ್ವೆ ಇಲಾಖೆಗೆ 'ವಂದೇ ಭಾರತ್' ರೈಲುಗಳು ಕೀರ್ತಿ ತಂದುಕೊಟ್ಟಿವೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ವಂದೇ ಭಾರತ್ ರೈಲುಗಳು 'ಭಾರತೀಯ ರೈಲ್ವೆ ಇಲಾಖೆ' ಹೆಸರನ್ನು ರಾರಾಜಿಸುವಂತೆ ಮಾಡಿವೆ. ಆದರೆ 'ವಂದೇ ಭಾರತ್' ರೈಲುಗಳನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಕೆಲವು ಕಿಡಿಗೇಡಿಗಳು. ಈಗಲೂ ಅಷ್ಟೇ ಘೋರ ದುರಂತಕ್ಕಾಗಿ ಇದೇ ರೀತಿ ಕಿಡಿಗೇಡಿಗಳು ಸ್ಕೆಚ್ ಹಾಕಿದ್ದರು.

ಅಷ್ಟಕ್ಕೂ ರಾಜಸ್ಥಾನ ಚಿತ್ತೋರ್‌ಗಢ ಜಿಲ್ಲೆಯಲ್ಲಿ ಭೀಕರ ಘಟನೆಯೊಂದು ವರದಿಯಾಗಿದೆ. ಈ ಘಟನೆ ಈಗ ದೇಶಾದ್ಯಂತ ದೊಡ್ಡ ಸಂಚಲನ ಸೃಷ್ಟಿಸಿದೆ. ಅದರಲ್ಲೂ ವಂದೇ ಭಾರತ್ ರೈಲಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ಈ ಸುದ್ದಿಯನ್ನ ಮಿಸ್ ಮಾಡದೆ ಓದಬೇಕು ಅಂದಹಾಗೆ ಆಗಿದ್ದೇನು ಅಂದ್ರೆ, ಚಿತ್ತೋರ್‌ಗಢದಲ್ಲಿ ಭೀಕರ ರೈಲು ಅಪಘಾತಕ್ಕೆ ಕಿಡಿಗೇಡಿ ಗುಂಪು ಸ್ಕೆಚ್ ಹಾಕಿತ್ತು. ಆದರೆ ಈ ಸ್ಕೆಚ್ ಅನ್ನ ರೈಲ್ವೆ ಇಲಾಖೆ ಅಧಿಕಾರಿಗಳು ಗಮನಿಸಿ ಘೋರ ದುರಂತ ತಪ್ಪಿಸಿದ್ದಾರೆ.

railway-track-of-vande-bharat-train

'ವಂದೇ ಭಾರತ್' ರೈಲುಗಳೇ ಟಾರ್ಗೆಟ್?

ಹೌದು, ರಾಜಸ್ಥಾನದ ಚಿತ್ತೋರ್‌ಗಢ ಜಿಲ್ಲೆಯಲ್ಲಿ ವಂದೇ ಭಾರತ್ ರೈಲನ್ನೇ ಟಾರ್ಗೆಟ್ ಮಾಡಿ ಹಳಿಗಳ ಮೇಲೆ ಕಲ್ಲು, ರಾಡ್‌ ಮತ್ತು ಇತರ ವಸ್ತುಗಳನ್ನು ಇಟ್ಟಿರುವ ಭೀಕರ ಘಟನೆ ಇದೀಗ ಸಂಚಲನ ಸೃಷ್ಟಿಸಿದೆ. ಉದಯಪುರ-ಜೈಪುರ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲನ್ನೇ ಟಾರ್ಗೆಟ್ ಈ ಕೃತ್ಯ ಎಸಗಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆದ್ರೆ ಲೋಕೋ ಪೈಲಟ್‌ಗಳು ಈ ಬಗ್ಗೆ ಎಚ್ಚರಿಕೆ ವಹಿಸಿದ ಕಾರಣ ಘೋರ ದುರಂತ ತಪ್ಪಿದೆ. ಅಷ್ಟಕ್ಕೂ ಆಗಿದ್ದೇನು ಅಂದ್ರೆ, ರೈಲು ಹಳಿ ಮೇಲೆ ಕಲ್ಲು ಮತ್ತಿತರ ವಸ್ತುಗಳನ್ನು ಗಮನಿಸಿದ ಲೋಕೋ ಪೈಲಟ್ಸ್ ತುರ್ತಾಗಿ ಬ್ರೇಕ್ ಹಾಕಿದ್ದಾರಂತೆ.

ನಂತರ ಕೆಳಗೆ ಇಳಿದು ಬಂದು ಗಮನಿಸಿದಾಗ ಅಸಲಿ ಸಂಗತಿ ಬಯಲಾಗಿದೆ. ಅಷ್ಟಕ್ಕೂ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಕೂಡ ಶೇರ್ ಮಾಡಲಾಗಿದ್ದು ರಾಜಸ್ಥಾನದ ಗಂಗಾರಾರ್-ಸೋನಿಯಾನಾ ವಿಭಾಗದ ಟ್ರ್ಯಾಕ್‌ನಲ್ಲಿ ಘಟನೆ ನಡೆದಿರುವುದು ಬಯಲಾಗಿದೆ. ಮತ್ತೊಂದು ಕಡೆ ಘಟನಾ ಸ್ಥಳಕ್ಕೆ ಡಿಎಸ್‌ಸಿ ಅಜ್ಮೀರ್, ಐಪಿಎಫ್ ಭಿಲ್ವಾರಾ & ಪಿಡಬ್ಲ್ಯುಐ ಗಂಗರಾರ್ ಸೇರಿದಂತೆ ಸ್ಥಳೀಯ ಪೊಲೀಸರು & ಜಿಆರ್‌ಪಿ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈ ಮಧ್ಯೆ ರೈಲ್ವೆ ಕಾಯ್ದೆ ಅಡಿ ಪ್ರಕರಣ ಕೂಡ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.

ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಪದೇ ಪದೆ ಬೇಕು ಅಂತಲೇ ವಂದೇ ಭಾರತ್ ರೈಲುಗಳು ಟಾರ್ಗೆಟ್ ಆಗುತ್ತಿರುವುದು ದುರಂತವೇ ಸರಿ. ಭಾರತೀಯ ರೈಲ್ವೆ ಇಲಾಖೆ ಕೂಡ ಈ ಬಗ್ಗೆ ಗಂಭೀರವಾಗಿ ಗಮನ ಹರಿಸುತ್ತಿದ್ದು, ಇಂತಹ ದುರಂತಗಳನ್ನು ತಪ್ಪಿಸಲು ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲು ಮುಂದಾಗಿದೆ. ಹೀಗೆ ಮುಂಜಾಗ್ರತಾ ಕ್ರಮ ಕೈಗೊಂಡರೆ ಇಂತಹ ಕಿಡಿಗೇಡಿ ಕೃತ್ಯಗಳಿಗೂ ಬ್ರೇಕ್ ಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+