ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರಪ್ರದೇಶ: ಕೋಲ್ಕತ್ತಾದಂತೆ ವಂದೇ ಭಾರತ್ ಮೇಲೆ ಮತ್ತೆ ಕಲ್ಲು ತೂರಾಟ

|
Google Oneindia Kannada News

ಹೈಸ್ಪೀಡ್ ರೈಲಿನ ವಂದೇ ಭಾರತ್ ಎಕ್ಸ್ ಪ್ರೆಸ್ ಮೇಲೆ ಕಲ್ಲು ತೂರಾಟ ಪ್ರಕರಣಗಳು ನಿಲ್ಲುತ್ತಿಲ್ಲ. ಪಶ್ಚಿಮ ಬಂಗಾಳದ ನಂತರ ಇದೀಗ ಆಂಧ್ರಪ್ರದೇಶದಲ್ಲಿ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ಪ್ರಕರಣ ಮುನ್ನೆಲೆಗೆ ಬಂದಿದೆ. ರಾಜ್ಯದ ವಿಶಾಖಪಟ್ಟಣಂನಲ್ಲಿ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದೆ. ಈ ಹೈಸ್ಪೀಡ್ ರೈಲಿನ ಉದ್ಘಾಟನೆಗೂ ಮುನ್ನವೇ ಕಲ್ಲು ತೂರಾಟ ನಡೆದಿದೆ. ಪ್ರಧಾನಿ ಮೋದಿ ಜನವರಿ 19 ರಂದು ಈ ರೈಲಿಗೆ ಚಾಲನೆ ನೀಡಲಿದ್ದಾರೆ. ಇದಕ್ಕೂ ಮುನ್ನ ಕೆಲವರು ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ನಿರ್ವಹಣೆ ವೇಳೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ವಿಶಾಖಪಟ್ಟಣಂನ ಕಂಚರಪಾಲೆಂ ಬಳಿ ಕಲ್ಲು ತೂರಾಟದಿಂದಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಕೋಚ್‌ನ ವಿಂಡ್‌ಶೀಲ್ಡ್ ಹಾನಿಯಾಗಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅನೂಪ್ ಕುಮಾರ್ ಸತ್ಪತಿ ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಸಂಜೆ 6:30ಕ್ಕೆ ವಿಶಾಖಪಟ್ಟಣಂನಲ್ಲಿ ವಂದೇ ಭಾರತ್ ರೈಲಿಗೆ ಯಾರೋ ಕಲ್ಲು ತೂರಾಟ ನಡೆಸಿದ್ದು, ಇದರಿಂದ 2 ಕಿಟಕಿ ಗಾಜುಗಳು ಸಂಪೂರ್ಣ ಒಡೆದು ಹೋಗಿದ್ದು, ಅವುಗಳನ್ನು ಬದಲಾಯಿಸಬೇಕಾಗಿದೆ ಎಂದು ಅವರು ಹೇಳಿದರು. ಇದು ಅತ್ಯಂತ ದುರದೃಷ್ಟಕರ. ನಾವು ಕೆಲವು ಶಂಕಿತರನ್ನು ಗುರುತಿಸಿದ್ದೇವೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ತಿಳಿಸಿದ್ದಾರೆ. ಆರ್‌ಪಿಎಫ್ ಅವರ ಮೇಲೆ ನಿಗಾ ಇರಿಸಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದಕ್ಕೂ ಮುನ್ನ ಪಶ್ಚಿಮ ಬಂಗಾಳದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕಲ್ಲು ತೂರಾಟದ ಪ್ರಕರಣ ಎರಡು ಬಾರಿ ಮುನ್ನೆಲೆಗೆ ಬಂದಿದೆ. ಕಲ್ಲು ತೂರಾಟದಿಂದ ರೈಲಿನ ಗಾಜುಗಳಿಗೆ ಹಾನಿಯಾಗಿದೆ. ಮಾಹಿತಿ ಪಡೆದ ಅಧಿಕಾರಿ ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಮಾಹಿತಿ ಪ್ರಕಾರ ವಂದೇ ಭಾರತ್ ನ ಸಿ14 ಕಂಪಾರ್ಟ್ ಮೆಂಟ್ ಮೇಲೆ ಕಲ್ಲು ತೂರಾಟ ನಡೆದಿದೆ. ಇದರಿಂದಾಗಿ ಅದರ ಗಾಜು ಒಡೆದಿದೆ. ಕಲ್ಲು ತೂರಾಟದ ನಂತರ ಬೋಲ್ಪುರ್ ರೈಲು ನಿಲ್ದಾಣದಲ್ಲಿ ರೈಲನ್ನು ಬಹಳ ಹೊತ್ತು ನಿಲ್ಲಿಸಬೇಕಾಯಿತು.

Stone pelting on Vande Bharat Express in Andhra Pradesh before Prime Minister Modis flag hoisting

ಇದಕ್ಕೂ ಮುನ್ನ ಈ ಹೈಸ್ಪೀಡ್ ರೈಲಿನ ಮೇಲೆ ಕಲ್ಲು ತೂರಾಟ ನಡೆದಿತ್ತು. ಹೌರಾದಿಂದ ನ್ಯೂ ಜಲ್ಪೈಗುರಿ ನಡುವೆ ಚಲಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಕೆಲವು ಅಪರಿಚಿತರು ಕಲ್ಲು ತೂರಾಟ ನಡೆಸಿದ್ದರು. ಕಲ್ಲು ತೂರಾಟದಿಂದಾಗಿ ಹೈಸ್ಪೀಡ್ ರೈಲಿನ ಸಿ3 ಮತ್ತು ಸಿ6 ಬೋಗಿಗಳ ಗಾಜುಗಳು ಹಾನಿಗೀಡಾಗಿದ್ದವು. ಡಾರ್ಜಿಲಿಂಗ್ ಜಿಲ್ಲೆಯ ಫನ್‌ಸಿಡೆವಾ ಪ್ರದೇಶದ ಬಳಿ ರೈಲು ನ್ಯೂ ಜಲ್ಪೈಗುರಿ ಕಡೆಗೆ ಚಲಿಸುತ್ತಿದ್ದಾಗ ಕಿಟಕಿಗಳು ಹಾನಿಗೊಳಗಾಗಿರುವುದು ಕಂಡುಬಂದಿದೆ ಎಂದು ಆರ್‌ಪಿಎಫ್ ಕಮಾಂಡೆಂಟ್ ಹೇಳಿದ್ದಾರೆ.

English summary
There was stone pelting on Vande Bharat in Andhra Pradesh and the train was damaged before Prime Minister Modi hoisted the flag.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X