Stock Market: ಷೇರು ಮಾರುಕಟ್ಟೆಯಲ್ಲಿ ‘ರಕ್ತಪಾತ’: ಅಯ್ಯಯ್ಯೋ ಅಂತಿದ್ದಾರೆ ಜನ!
ಷೇರು ಮಾರುಕಟ್ಟೆಯಲ್ಲಿ ಇವತ್ತು ದೊಡ್ಡ ಸಂಚಲನ ಸೃಷ್ಟಿಯಾಗಿತ್ತು, ನೋಡ ನೋಡುತ್ತಾ ಇವತ್ತು ಬೆಳಗ್ಗೆಯೇ ದೊಡ್ಡ ಮಟ್ಟದ ಕುಸಿತಕ್ಕೆ ಕಾರಣವಾದ 'ಷೇರುಪೇಟೆ' ಸೂಚ್ಯಂಕಗಳು ಹೂಡಿಕೆದಾರರ ಎದೆಯಲ್ಲಿ ನಡುಕ ತರಿಸಿತ್ತು. ಅಲ್ಲದೆ ಲಕ್ಷಾಂತರ ಕೋಟಿ ರೂಪಾಯಿ ನಷ್ಟ ಮಾಡಿಕೊಂಡು ನರಳಾಡಿರುವ ಇನ್ವೆಸ್ಟರ್‌ಗಳಿಗೆ, ಮತ್ತೊಂದು ಆತಂಕಕಾರಿ ಸುದ್ದಿ ಹೊರಗೆ ಬಿದ್ದಂತಾಗಿದೆ!
ಹೌದು, ಇಂದು ಬೆಳಗ್ಗೆಯೇ ಷೇರು ಮಾರುಕಟ್ಟೆಯಲ್ಲಿ 'ರಕ್ತಪಾತ' ಶುರುವಾಗಿತ್ತು. ಬೆಳಗ್ಗೆಯೇ ಷೇರುಪೇಟೆ ತನ್ನ ವಹಿವಾಟು ಆರಂಭ ಮಾಡಿದ ತಕ್ಷಣ ಎಲ್ಲವೂ ಅಲ್ಲೋಲ ಕಲ್ಲೋಲ ಎದ್ದು ಎಲ್ಲೆಲ್ಲೂ ಸಂಚಲನ ಸೃಷ್ಟಿ ಮಾಡಿತ್ತು. ನಿಫ್ಟಿ ತನ್ನ ಸಪೋರ್ಟ್ ಲೆವೆಲ್ ಬ್ರೇಕ್ ಮಾಡಿದ್ದು 23,900 ಅಂಕದ ಕೆಳಗೆ ವಹಿವಾಟು ನಡೆಸಲು ಆರಂಭ ಮಾಡಿತ್ತು, ಇದೇ ಕಾರಣಕ್ಕೆ ತಕ್ಷಣ ಸೆನ್ಸೆಕ್ಸ್ ಕೂಡ 1,150 ಅಂಕ ಕುಸಿತ ಕಂಡು ಲಕ್ಷಾಂತರ ಕೋಟಿ ರೂಪಾಯಿ ಹೂಡಿಕೆದಾರರ ಹಣ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗಿತ್ತು.

ಯಾವೆಲ್ಲಾ ಷೇರುಗಳಿಗೆ ಆಘಾತ?
ಅಂದಹಾಗೆ ಇದೀಗ 'ಷೇರುಪೇಟೆ' ಕುಸಿತಕ್ಕೆ ಹಲವು ಕಾರಣಗಳನ್ನ ನೀಡಲಾಗುತ್ತಿದ್ದು, ಹೀಗೆ ಇದ್ದಾಗಲೇ ವಿದೇಶಿ ಹೂಡಿಕೆದಾರರು ತಮ್ಮ ಹೂಡಿಕೆಯ ಹಣವನ್ನು ಭಾರತದ ಮಾರುಕಟ್ಟೆ ಮೂಲಕ ವಾಪಸ್ ಪಡೆಯುತ್ತಿರುವ ಹಿನ್ನೆಲೆ ದೊಡ್ಡ ಮಟ್ಟದ ಕುಸಿತ ಆಗುತ್ತಿದೆ ಎನ್ನಲಾಗಿದೆ. ವಿದೇಶಿ ಹೂಡಿಕೆದಾರರು ದೊಡ್ಡ ಮಟ್ಟದಲ್ಲಿ ಇರುವ ಉದ್ಯಮ ವಲಯಗಳು ಇದೀಗ ಭಾರಿ ಹಿನ್ನಡೆ ಕಾಣುತ್ತಿವೆ.
ಬಹುತೇಕ ಎಲ್ಲಾ ವಲಯದ ಷೇರುಗಳು ಕೂಡ ಇಂದು ಮಕಾಡೆ ಮಲಗಿದ್ದು, ವಿದೇಶದಿಂದ ಹೂಡಿಕೆ ಮಾಡುತ್ತಿರುವ ಹೂಡಿಕೆದಾರರು ತಮ್ಮ ಹೂಡಿಕೆ ಪಾಲನ್ನು ಹಿಂದಕ್ಕೆ ತೆಗೆದುಕೊಂಡು ಆಘಾತ ನೀಡಿದ್ದಾರೆ. ಷೇರುಪೇಟೆ ಬಹುಪಾಲು ವಿದೇಶಿ ಹೂಡಿಕೆದಾರರ ಮೇಲೆ ನಿಂತಿರುತ್ತೆ ಎಂಬ ಮಾತು ಇದೆ, ಹೀಗಿದ್ದಾಗ ವಿದೇಶ ಹೂಡಿಕೆದಾರರು ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ನಂತರ ತಮ್ಮ ನಿರ್ಧಾರ ಬದಲಾಯಿಸುತ್ತಿದ್ದು ಷೇರು ಮಾರುಕಟ್ಟೆ ತಲ್ಲಣಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಸೆನ್ಸೆಕ್ಸ್ 79,255 ಅಂಕಗಳ...
ಇತ್ತೀಚಿನ ಮಾಹಿತಿ ಪ್ರಕಾರ, 241 ಅಂಕ ಕಳೆದುಕೊಂಡು ನಿಫ್ಟಿ-50 ಸದ್ಯಕ್ಕೆ 23,955 ಅಂಕದ ಸುತ್ತಮುತ್ತ ವಹಿವಾಟು ನಡೆಸುತ್ತಿದೆ. ಹಾಗೇ ಸೆನ್ಸೆಕ್ಸ್ ಹತ್ತಿರ ಹತ್ತಿರ 950 ಅಂಕ ಕಳೆದುಕೊಂಡು ಈಗ 79,255 ಅಂಕಗಳ ಸುತ್ತಮುತ್ತ ವಹಿವಾಟು ನಡೆಸುತ್ತಿದೆ. ಇನ್ನುಳಿದಂತೆ ಬ್ಯಾಂಕ್ ನಿಫ್ಟಿ ಒಟ್ಟು 500ಕ್ಕೂ ಹೆಚ್ಚು ಅಂಕ ಕಳೆದುಕೊಂಡು 51,600ರ ಆಸುಪಾಸಿನಲ್ಲಿ ಉಳಿದೆ.
ಹೀಗಾಗಿ ಫಿನ್ ನಿಫ್ಟಿ & ಮಿಡ್‌ಕ್ಯಾಪ್ ನಿಫ್ಟಿ ಸೂಚ್ಯಂಕಗಳು ಕೂಡ ನಷ್ಟದಲ್ಲೇ ಈಗ ವಹಿವಾಟು ಮುಂದುವರಿಸಿವೆ. ಬೆಳಗ್ಗೆ ಕುಸಿತ ಕಂಡ ಅಂಕಗಳಿಂದ ಷೇರುಪೇಟೆ ಸೂಚ್ಯಂಕಗಳು, ಒಂದಷ್ಟು ಚೇತರಿಕೆ ಕಂಡಿದ್ದರೂ ಹೂಡಿಕೆದಾರರಿಗೆ ಭಯ ಕಾಡುತ್ತಿದೆ. ಮುಂದಿನ ಹಂತಗಳಲ್ಲಿ ಇದು ಮತ್ತಷ್ಟು ಇಳಿಕೆ ಕಾಣುತ್ತಾ? ಅಥವಾ ಚೇತರಿಕೆ ಕಾಣುತ್ತಾ ಅಂತಾ ಕಾದು ನೋಡಬೇಕಿದೆ.












Click it and Unblock the Notifications