ಹೃದಯ ಚಿಕಿತ್ಸೆ ಸ್ಟೆಂಟ್ಸ್ ವೆಚ್ಚದಲ್ಲಿ ಶೇ 85 ಇಳಿಕೆ, ಥ್ಯಾಂಕ್ಸ್ ಟು ಮೋದಿ ಸರಕಾರ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada
ನವದೆಹಲಿ, ಫೆಬ್ರವರಿ 14: ಲಕ್ಷಾಂತರ ಹೃದಯ ರೋಗಿಗಳ ಪಾಲಿಗೆ ಫೆಬ್ರವರಿ 14 ಖಂಡಿತಾ ನೆನಪಿನಲ್ಲಿಟ್ಟುಕೊಳ್ಳ ಬೇಕಾದ ದಿನ. ಏಕೆಂದರೆ ಕೇಂದ್ರ ಸರಕಾರವು ಕರೋನರಿ ಸ್ಟೆಂಟ್ ನ ಬೆಲೆಯಲ್ಲಿ ಭಾರಿ ಇಳಿಕೆ ಮಾಡಿ, 7,260ಕ್ಕೆ ಮಿತಿಗೊಳಿಸಿದೆ ಮತ್ತು ಅದರಲ್ಲೇ ಔಷಧ ಒಳಗೊಂಡಿರುವುದಕ್ಕೆ 29,600 ರುಪಾಯಿ ಆಗುತ್ತದೆ.

ಬೇರ್ ಮೆಟಲ್ ಸ್ಟೆಂಟ್ಸ್ ಹಾಗೂ ಔಷಧಯುತ ಸ್ಟೆಂಟ್ಸ್ ಬೆಲೆ ಇನ್ನು ಮುಂದೆ 7,623 ಹಾಗೂ 31,080 ಆಗುತ್ತದೆ. ಈ ಮೊತ್ತದಲ್ಲಿ ವ್ಯಾಟ್ ಮತ್ತು ಇತರ ಎಲ್ಲ ಸ್ಥಳೀಯ ವೆಚ್ಚವೂ ಸೇರಿರುತ್ತದೆ. ತಕ್ಷಣದಿಂದಲೇ ಹೊಸ ಬೆಲೆ ಜಾರಿಗೆ ಬರಲಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಅವರು ಘೋಷಿಸಿದ್ದಾರೆ.[ಈ ಪರಿಕರದಿಂದ 5 ಸೆಕೆಂಡ್ ಗಳಲ್ಲಿ ಹೃದಯದ ಸಮಸ್ಯೆ ಪತ್ತೆ]

Heart

ಈ ಹಿಂದೆ ಬೇರ್ ಮೆಟಲ್ ಸ್ಟೆಂಟ್ ನ ಸರಾಸರಿ ಗರಿಷ್ಠ ಮಾರಾಟ ಬೆಲೆ 45 ಸಾವಿರ ರುಪಾಯಿ ಇತ್ತು. ಮತ್ತು ಔಷಧಯುತ ಸ್ಟೆಂಟ್ ಬೆಲೆ 1.21 ಲಕ್ಷ ರುಪಾಯಿ ಇತ್ತು. ತಕ್ಷಣದಿಂದಲೇ ಮಾರಾಟ ಬೆಲೆಯನ್ನು ಬದಲಿಸಿ ಎಂದು ಔಷಧ ಕಂಪೆನಿಗಳಿಗೆ ಸರಕಾರ ಸೂಚಿಸಿದೆ. ಸ್ಟೆಂಟ್ಸ್ ಬೆಲೆಯಿಂದ ಹೃದಯ ಸಂಬಂಧಿ ಕಾಯಿಲೆಗಳ ಚಿಕಿತ್ಸೆ ಬೆಲೆ ವಿಪರೀತವಾಗಿತ್ತು.[ಬೆಂಗಳೂರಲ್ಲಿ ಹೃದಯ ಸಂಬಂಧಿ 3 ವಿಶೇಷ ಘಟಕ ಸ್ಥಾಪನೆ]

ಈ ರೀತಿ ಬೆಲೆ ಮೇಲೆ ನಿರ್ಬಂಧ ಹೇರಿರುವುದರಿಂದ ಕನಿಷ್ಠ 80ರಿಂದ 90 ಸಾವಿರ ರುಪಾಯಿ ಒಬ್ಬ ರೋಗಿಗೆ ಉಳಿತಾಯವಾಗುತ್ತದೆ. ಒಟ್ಟಾರೆಯಾಗಿ ಒಂದು ವರ್ಷದಲ್ಲಿ ಹೃದ್ರೋಗಿಗಳಿಗೆ 4,450 ಕೋಟಿ ರುಪಾಯಿ ಉಳಿದಂತಾಗುತ್ತದೆ ಎಂದು ಕೇಂದ್ರ ಸಚಿವ ಅನಂತ ಕುಮಾರ್ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a major relief to lakhs of cardiac patients, the government today cut prices of life—saving coronary stents by up to 85 per cent by capping them at Rs 7,260 for bare metal ones and Rs 29,600 for drug eluting variety.
Please Wait while comments are loading...